Onion Price Hike: ಕೇಂದ್ರ ಸರ್ಕಾರದಿಂದ ಕೇವಲ 25 ರೂಪಾಯಿಗೆ ಸಿಗಲಿದೆ ಈರುಳ್ಳಿ, ಜನಸಾಮಾನ್ಯರಿಗೆ ಕೇಂದ್ರದಿಂದ ಗುಡ್ ನ್ಯೂಸ್.
ಈರುಳ್ಳಿ ಬೆಲೆ ಏರಿಕೆಯ ಚಿಂತೆಯಲ್ಲಿದ್ದ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.
Onion Price Hike In India: ಸದ್ಯ ದೇಶದಲ್ಲಿ ಜನರಿಗೆ ಈಗಾಗಲೇ ಬೆಲೆ ಏರಿಕೆಯ ಬಿಸಿ ತಾಗಿದೆ ಎನ್ನಬಹುದು. ಹೊಸ ಹಣಕಾಸು ವರ್ಷದ ಆರಂಭದಿಂದ ದಿನನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆ ಕೂಡ ಗಗನಕ್ಕೇರಿದೆ ಎನ್ನಬಹುದು. ಇತ್ತೀಚೆಗಷ್ಟೇ ದೇಶದಲ್ಲಿ ಕೆಜಿಗೆ 20 ರೂ. ನಲ್ಲಿ ಲಭ್ಯವಿದ್ದ ಟೊಮೊಟೊ ದರ ಇದ್ದಕ್ಕಿದ್ದ ಹಾಗೆ ಕೆಜಿಗೆ 250 ರೂ. ತಲುಪಿತ್ತು. ನಂತರ ಮೂರ್ನಾಲ್ಕು ತಿಂಗಳ ಬಳಿಕ ಇದೀಗ ಟೊಮೊಟೊ ದರ ಯಥಾಸ್ಥಿತಿ ತಲುಪಿದೆ ಎನ್ನಬಹುದು.
ಸದ್ಯ ದೇಶದಲ್ಲಿ ಮತ್ತೆ ಈರುಳ್ಳಿ (Onion ) ಬೆಲೆ ಗಣನೀಯ ಏರಿಕೆಯಾಗಿದೆ. ಈರುಳ್ಳಿ ದರದ ಏರಿಕೆಯು ಜನಸಾಮಾನ್ಯರ ಕಣ್ಣಲ್ಲಿ ನೀರು ತರಿಸುತ್ತಿದೆ ಎನ್ನಬಹುದು. ಈರುಳ್ಳಿ ಬೆಲೆ ಏರಿಕೆಯ ಬೇಸರದಲ್ಲಿದ್ದ ಜನರಿಗೆ ಕೇಂದ್ರ ಸರ್ಕಾರ ಇದೀಗ ಸಿಹಿ ಸುದ್ದಿ ನೀಡಿದೆ. ಕಡಿಮೆ ಬೆಲೆಯಲ್ಲಿ ಈರುಳ್ಳಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಜನಸಾಮಾನ್ಯರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಸದ್ಯ ದೇಶದದಾದ್ಯಂತ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 65 ರೂ. ವರೆಗೆ ತಲುಪಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ ಸಂಗ್ರಹದಲ್ಲಿದ್ದ ಈರುಳ್ಳಿಯನ್ನು ಕೆಜಿಗೆ 25 ರೂ. ನಂತೆ ಮಾರಾಟ ಮಾಡಲು ಆರಂಭಿಸಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ ದೇಶದಲ್ಲಿ ಇರುಳಿ ಬೆಲೆ ಕೆಜಿಗೆ 30 ರೋ. ಇತ್ತು.ಆದರೆ ಈ ವರ್ಷ ಮಳೆಯ ಅಭಾವದಿಂದ ಕೆಲವು ಕಡೆ ಅನಾವೃಷ್ಟಿ ಹೆಚ್ಚಾಗಿದ್ದು ಈರುಳ್ಳಿ ಉತ್ಪಾದನೆ ಕಡಿಮೆ ಆಗಿ ಬೆಲೆ ಏರಿಕೆ ಆಗಿದೆ. ಕಳೆದ ವರ್ಷದ ಈ ಅವಧಿಯ ಈರುಳ್ಳಿಯ ದರ ಹೋಲಿಸಿದರೆ. ಈ ಬಾರಿ ಶೇ. 57 ರಷ್ಟು ಬಾರಿ ಏರಿಕೆಯಾಗಿದೆ.
ಕೇವಲ 25 ರೂ. ಗೆ ಲಭ್ಯವಾಗಲಿದೆ ಈರುಳ್ಳಿ
ಈರುಳ್ಳಿ ಬೆಲೆಯ ಏರಿಕೆಯ ಕಾರಣ ಕೇಂದ್ರ ಸರ್ಕಾರ ಕಳೆದ ಆಗಸ್ಟ್ ನಲ್ಲಿ ತನ್ನ ದಾಸ್ತಾನಿನಲ್ಲಿದ್ದ ಈರುಳ್ಳಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸದ್ಯ ಈರುಳ್ಳಿ ದರ ಶೇ, 57 ರಷ್ಟು ಹೆಚ್ಚಿರುವ ಕಾರಣ ಮಾರುಕಟ್ಟೆಗೆ ಕೇಂದ್ರ ಸರ್ಕಾರ ಹೆಚ್ಚು ಪ್ರಮಾಣದಲ್ಲಿ ಇಉಳ್ಳಿಯನ್ನು ಬಿಡುಗಡೆ ಮಾಡಿದೆ. ಈ ನಿಟ್ಟಿನಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 25 ರೂ. ನಂತೆ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಈರುಳ್ಳಿ ಬೆಲೆ ಏರಿಕೆಯ ಚಿಂತೆಯಲ್ಲಿದ್ದ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.