Scam: ಮೊಬೈಲ್ ಬಳಸುವವರಿಗೆ ಎಚ್ಚರಿಕೆ ನೀಡಿದ RBI, ಈ ಸಣ್ಣ ತಪ್ಪು ಮಾಡಿದರೆ ನಿಮ್ಮ ಖಾತೆ ಖಾಲಿ.

ಮೊಬೈಲ್ ಬಳಸುವವರಿಗೆ ಎಚ್ಚರಿಕೆ ನೀಡಿದ RBI, ನಿಮ್ಮ ಬ್ಯಾಂಕ್ ಖಾತೆಗೆ ಖನ್ನ ಬೀಳಲಿದೆ.

Online Scam Alert: ಇತ್ತೀಚಿನ ದಿನಗಳಲ್ಲಿ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ. ವಂಚಕರು ವಿವಿಧ ರೀತಿಯಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದ(Social Media) ಮೂಲಕ ಒಂದೆಡೆ ವಂಚನೆ ನಡೆಯುತ್ತಿದ್ದರೆ ಇನ್ನೊಂದೆಡೆ ಕೆಲವು ಲಿಂಕ್ ಗಳ ಮೂಲಕ ವಂಚನೆ ಹೆಚ್ಚುತ್ತಿದೆ. ಇನ್ನು ಇತ್ತೀಚಿಗೆ ವಾಟ್ಸಾಪ್ ಮೂಲಕ ಕೂಡ ವಂಚನೆ ನಡೆಯುತ್ತಿದೆ.

ನೀವು ಬಳಸುತ್ತಿರುವ ಸ್ಮಾರ್ಟ್ ಫೋನ್ ನ(Smart Phone) ಮೂಲಕವೇ ನೀವು ಹೆಚ್ಚಾಗಿ ವಂಚನೆಗೆ ಒಳಗಾಗಬೇಕಾಗುತ್ತದೆ. ಇನ್ನು ಇತ್ತೀಚೆಗಂತೂ ಸ್ಮಾರ್ಟ್ ಫೋನ್ ಬಳಕೆ ಹೆಚ್ಚುತ್ತಿದೆ. ಎಲ್ಲಾ ವಯಸ್ಸಿನವರು ಕೂಡ ಸ್ಮಾರ್ಟ್ ಫೋನ್ ಅನ್ನು ಬಳಸುತ್ತಿದ್ದಾರೆ. ಮನೆಯಲ್ಲಿ ಇರುವ ಪ್ರತಿಯೊಬ್ಬರ ಹತ್ತಿರ ಕೂಡ ಮೊಬೈಲ್ ಫೋನ್ ಗಳು ಇರುತ್ತವೆ. ಇನ್ನು ಅತಿಯಾದ ಮೊಬೈಲ್ ಬಳಕೆಯಿಂದ ಅಡ್ಡ ಪರಿಣಾಮಗಳೇ ಹೆಚ್ಚಿರುತ್ತದೆ.

Online Scam Alert
Image Credit: Retail.Economictimes

ಸ್ಮಾರ್ಟ್ ಫೋನ್ ಮೂಲಕ ಹೆಚ್ಚುತ್ತಿದೆ ವಂಚನೆ
ಇನ್ನು ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ವಂಚಕರು ಜನರನ್ನು ವಂಚಿಸುತ್ತಿದ್ದಾರೆ. ವಿವಿಧ ರೀತಿಯ ಆಫರ್ ಗಳನ್ನೂ ನೀಡಿ, ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುತ್ತೇವೆ ಎಂದು ನಕಲಿ ಸಂದೇಶಗಳ ಮೂಲಕ ಜನರನ್ನು ವಂಚಿಸಲಾಗುತ್ತಿದೆ. ಇನ್ನು ಬ್ಯಾಂಕ್ ಖಾತೆದಾರರು ಈ ಎಲ್ಲಾ ವಂಚನೆಗಳ ಬಗ್ಗೆ ಎಚ್ಚರವಹಿಸಬೇಕು. ನೀವು ಮಾಡುವ ಸಣ್ಣ ತಪ್ಪಿನಿಂದ ಬಾರಿ ದೊಡ್ಡ ನಷ್ಟವನ್ನೇ ಎದುರಿಸಬೇಕಾಗುತ್ತದೆ.

ಈ ಸಣ್ಣ ತಪ್ಪಿನಿಂದ ನಿಮ್ಮ ಖಾತೆ ಖಾಲಿ ಆಗಲಿದೆ
ಇತ್ತೀಚಿಗೆ ಭಾರತೀಯ ಚಿತ್ರರಂಗದಲ್ಲಿ ಹೊಸ ಹೊಸ ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ಚಿತ್ರಗಳು ಬಿಡುಗಡೆಗೊಂಡ ತಕ್ಷಣ ಆನ್ಲೈನ್ ನಲ್ಲಿ ಸಿನಿಮಾಗಳು ಫೈರಸಿ ಆಗುತ್ತವೆ. ಕೆಲವರು ಚಿತ್ರಗಳನ್ನು ನೋಡಲು ಚಿತ್ರಮಂದಿರಕ್ಕೆ ಹೋಗುವುದಿಲ್ಲ ಬದಲಾಗಿ ಅವರು ಅನೇಕ ವೆಬ್ ಸೈಟ್ ಗಳ ಮೂಲಕ ಹೊಸ ಹೊಸ ಚಿತ್ರಗಳನ್ನು ಪಡೆದುಕೊಳ್ಳುತ್ತಾರೆ. ಕೆಲ ವೆಬ್ ಸೈಟ್ ಗಳು ಚಿತ್ರಗಳನ್ನು ಉಚಿತವಾಗಿ ನೀಡುತ್ತದೆ. ಹೀಗೆ ನೀವು ಉಚಿತವಾಗಿ ಚಿತ್ರಗಳನ್ನು ನೋಡಲು ಲಿಂಕ್ ಗಳನ್ನೂ ಆರಿಸಬೇಕಾಗುತ್ತದೆ. ಈ ಲಿಂಕ್ ಕ್ಲಿಕ್ ಮಾಡುವುದು ಅಷ್ಟು ಸೂಕ್ತವಲ್ಲ.

Fraud by smart phone
Image Credit: Irishtimes

ಸಿನಿಮಾಗಳನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರ
ಇತ್ತೀಚಿಗೆ ಇದರ ಮೂಲಕ ಕೂಡ ವಂಚನೆ ಹೆಚ್ಚುತ್ತಿದೆ. ಚಿತ್ರವನ್ನು ಡೌನ್ ಲೋಡ್ ಮಾಡಲು ನೀವು ಆರಿಸಿದ ಲಿಂಕ್ ಕೆಲ ಎಪಿಕೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವಂತೆ ಹೇಳುತ್ತದೆ. ಈ ರೀತಿಯಾಗಿ ಡೌನ್ಲೋಡ್ ಮಾಡಿಕೊಳ್ಳುವ ಆಪ್ ಗಳು ನಿಮ್ಮ ಡೇಟಾವನ್ನು ಕದಿಯುತ್ತದೆ. ಎಪಿಕೆ ಅಪ್ಲಿಕೇಶನ್ ಗಳು ವೈರಸ್ ರೂಪದಲ್ಲಿ ನಿಮ್ಮ ಡೇಟಾವನ್ನು ಕದ್ದು ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕುತ್ತವೆ.

Join Nadunudi News WhatsApp Group

ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಬೇಡಿ
ಇನ್ನು ಸಿನಿಮಾಗಳನ್ನು ಡೌನ್ಲೋಡ್ ಮಾಡಿಕೊಳ್ಳುವಾಗ ಇತರ ಲಿಂಕ್ ಗಳು ಕೆಲವು ಅನುಮತಿಯನ್ನು ಕೇಳುತ್ತವೆ. ಆ ಸಮಯದಲ್ಲಿ ನಕಲಿ ಲಿಂಕ್ ಗಳಿದ್ದರೆ ಕೆಲವೊಮ್ಮೆ ನಿಮ್ಮ ಬ್ಯಾಂಕ್ ಮಾಹಿತಿಯ ಅನುಮತಿಯನ್ನು ಕೇಳುತ್ತವೆ. ಈ ವೇಳೆ ನೀವು ಜಾಗರೂಕರಾಗಿರಬೇಕು.

Online Scam Alert
Image Credit: Economictimes

ಈ ಸಮಯದಲ್ಲಿ ನೀವು ಬ್ಯಾಂಕ್ ಮಾಹಿತಿಯನ್ನು ನೀಡಿದರೆ ಕ್ಷಣಾರ್ಧದಲ್ಲಿ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುತ್ತದೆ. ಹೀಗಾಗಿ ನೀವು ಯಾವುದೇ ರೀತಿಯ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡುವ ಮುನ್ನ ಬಹಳ ಜಾಗರೂಕರಾಗಿರಿ. ನಿಮ್ಮ ಒಂದು ಸಣ್ಣ ತಪ್ಪು ದೊಡ್ಡ ಪ್ರಮಾಣದಲ್ಲಿ ನಷ್ಟವನ್ನು ನೀಡುವ ಸಾಧ್ಯತೆ ಇರುತ್ತದೆ.

Join Nadunudi News WhatsApp Group