Online: ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವವರೇ ಎಚ್ಚರ, ಈ ತಪ್ಪು ಮಾಡಿದ್ರೆ ನಿಮ್ಮ ಖಾತೆ ಖಾಲಿಯಾಗೋದು ಗ್ಯಾರಂಟಿ.
ಆನ್ಲೈನ್ ಶಾಪಿಂಗ್ ಮಾಡುವಾಗ ಯಾವೆಲ್ಲ ತಪ್ಪುಗಳನ್ನು ಮಾಡಬಾರದು ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ.
Online Shopping Scam: ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಆನ್ಲೈನ್(Online) ಅಲ್ಲಿ ವಸ್ತುಗಳನ್ನು ಖರೀದಿಸುತ್ತಾರೆ. ನಾವು ಆನ್ಲೈನ್ ಅಲ್ಲಿ ಆರ್ಡರ್ ಮಾಡುವ ವಸ್ತುಗಳನ್ನು ಅವರು ಮನೆ ಬಾಗಿಲಿಗೆ ತಂದು ಕೊಡುತ್ತಾರೆ. ನಮಗೆ ಅಗತ್ಯವಿರುವ ಎಲ್ಲ ವಸ್ತುಗಳು ಸಹ ಆನ್ಲೈನ್ ಅಲ್ಲಿ ಲಭ್ಯವಾಗುತ್ತದೆ.
ನಿಮ್ಮ ಸ್ಮಾರ್ಟ್ ಫೋನ್(Smart Phone) ಗಳಲ್ಲಿ ವಸ್ತುವಿನ ಫೋಟೋ ಅಥವಾ ವಿಡಿಯೋ ನೋಡುವ ಮೂಲಕ ಅದು ಹೇಗಿದೆ ಎಂದು ತಿಳಿದು ನಂತರ ನೀವು ಅದನ್ನು ಆರ್ಡರ್ ಮಾಡಬಹುದು. ಇದಕ್ಕೆ ಬಿಲ್ ಅನ್ನು ವಸ್ತುಗಳನ್ನು ಪಡೆದುಕೊಂಡ ನಂತರವೂ ಮಾಡಬಹುದು ಅಥವಾ ಆನ್ಲೈನ್ ಅಲ್ಲಿಯೂ ಮಾಡಬಹುದು.
ಇನ್ನು ಆನ್ಲೈನ್ ಅಲ್ಲಿ ಶಾಪಿಂಗ್ ಮಾಡಿ ಪಾವತಿ ಮಾಡುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಆನ್ಲೈನ್ ಪಾವತಿಯಲ್ಲಿ ಸಣ್ಣ ತಪ್ಪು ಮಾಡಿದರು ಸಹ ಕ್ಷಣ ಮಾತ್ರದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿರುವ ಹಣ ಖಾಲಿಯಾಗಬಹುದು. ವಂಚಕರು ಜನರನ್ನು ಎಲ್ಲಿ ಮೋಸಗೊಳಿಸಬಹುದು ಎನ್ನುದನ್ನು ಕಾದು ನೋಡುತ್ತಿರುತ್ತಾರೆ.
ಆನ್ಲೈನ್ ಶಾಪಿಂಗ್ ನಲ್ಲಿ ಎಂದಿಗೂ ಇಂತಹ ತಪ್ಪುಗಳನ್ನು ಮಾಡಬೇಡಿ
ಜನರು ಹೆಚ್ಚಾಗಿ ಆನ್ಲೈನ್ ಶಾಪಿಂಗ್ ಗಳ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ. ಇದರಿಂದ ನಮ್ಮ ಸಮಯದ ಉಳಿತಾಯ ಕೂಡ ಆಗುತ್ತದೆ. ಹಾಗೆ ಆನ್ಲೈನ್ ಅಲ್ಲಿ ವಸ್ತುಗಳನ್ನು ಖರೀದಿಸುವಾಗ ಇಂತಹ ಎಚ್ಚರಿಕೆಯ ಕ್ರಮಗಳನ್ನು ಪಾಲಿಸುದು ಉತ್ತಮ.
*ಆನ್ಲೈನ್ ಅಲ್ಲಿ ಅನೇಕ ನಕಲಿ ವೆಬ್ ಸೈಟ್ ಹಾಗೂ ಅಪ್ಲಿಕೇಶನ್ ಗಳು ಇರುತ್ತದೆ, ಇವುಗಳು ನೈಜವಾಗಿಯೇ ಕಾಣುತ್ತದೆ ಹಾಗಾಗಿ ಆನ್ಲೈನ್ ಪಾವತಿಯಲ್ಲಿ ಎಚ್ಚರ ವಹಿಸುದು ಅಗತ್ಯ. ನಕಲಿ ವೆಬ್ ಸೈಟ್ ಹಾಗೂ ಅಪ್ಲಿಕೇಶನ್ ಗಳಿಂದ ಶಾಪಿಂಗ್ ಮಾಡಿ ವಂಚನೆಗೆ ಒಳಗಾಗಬೇಡಿ.
*ವಂಚಕರು ಜನರಿಗೆ ಮೋಸ ಮಾಡಲು ಆಕರ್ಷಕ ಕೊಡುಗೆಗಳನ್ನು ನೀಡುವ ನೆಪದಲ್ಲಿ ಸ್ಮಾರ್ಟ್ ಫೋನ್ ಗಳಿಗೆ ಲಿಂಕ್ ಗಳನ್ನೂ ಕಳಿಸುತ್ತಾರೆ, ನೀವು ಆ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫೋನ್ ಹ್ಯಾಕ್ ಮಾಡಿ ನಿಮಗೆ ಮೋಸ ಮಾಡುತ್ತಾರೆ. ಹಾಗಾಗಿ ಅಂತಹ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಎಂದಿಗೂ ಮೋಸ ಹೋಗಬೇಡಿ.
*ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಆನ್ಲೈನ್ ಪಾವತಿಗಳನ್ನೇ ಮಾಡುತ್ತಾರೆ ಮತ್ತು ತಮ್ಮ ಕ್ರೆಡಿಟ್ -ಡೆಬಿಟ್ ಕಾರ್ಡ್ ಸಂಖ್ಯೆ ಅಥವಾ ನೆಟ್ ಬ್ಯಾಂಕಿಂಗ್ ಐಡಿ ಪಾಸ್ವರ್ಡ್ ಅನ್ನು ಶಾಪಿಂಗ್ ವೆಬ್ ಸೈಟ್ ನಲ್ಲಿಯೇ ಉಳಿಸುತ್ತಾರೆ. ಇಂತಹ ತಪ್ಪುಗಳನ್ನು ಮಾಡುದರಿಂದ ನೀವು ತೊಂದರೆಗೆ ಸಿಲುಕಬಹುದು.
ಹಾಗಾಗಿ ಯಾವಾಗಲು ಹಸ್ತ ಚಾಲಿತವಾಗಿಯೇ ಬ್ಯಾಂಕಿಂಗ್ ಮಾಹಿತಿಯನ್ನು ಭರ್ತಿ ಮಾಡಿ, ಅಥವಾ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಬಳಸಿಕೊಳ್ಳಿ. ಇನ್ನುಮುಂದೆ ಸಾಕಷ್ಟು ರಿಯಾಯಿತಿಗಳನ್ನು ನೀಡುವ ವೆಬ್ ಸೈಟ್ ಅಥವಾ ಅಪ್ಲಿಕೇಶನ್ ಗಳಿಂದ ಶಾಪಿಂಗ್ ಮಾಡಬೇಡಿ. ವಿಶ್ವಾಸಾರ್ಹ ವೆಬ್ ಸೈಟ್ ಗಳ ಮೂಲಕ ಮಾತ್ರ ಶಾಪಿಂಗ್ ಮಾಡುವುದು ಉತ್ತಮ.