Oppo: 64 MP ಕ್ಯಾಮೆರಾ ಮತ್ತು 8GB RAM, ಅತೀ ಕಡಿಮೆ ಬೆಲೆಗೆ ಇನ್ನೊಂದು ಮೊಬೈಲ್ ಲಾಂಚ್ ಮಾಡಿದ OPPO.
ಅಗ್ಗದ ಬೆಲೆಗೆ ಇನ್ನೊಂದು ಆಕರ್ಷಕ ಮೊಬೈಲ್ ಲಾಂಚ್ ಮಾಡಿದ OPPO.
OPPO F21 Pro Smart Phone: ಭಾರತದಲ್ಲಿ ಬಹು ಬೇಡಿಕೆ ಇರುವ ಮೊಬೈಲ್ ಕಂಪನಿಗಳಲ್ಲಿ ಒಪ್ಪೋ (OPPO) ಕೂಡ ಒಂದು. ಒಪ್ಪೋ ದವರು ಅನೇಕ ವಿಶೇಷತೆ ಹೊಂದಿದ ಮೊಬೈಲ್ ಅನ್ನು ತನ್ನ ಗ್ರಾಹಕರಿಗಾಗಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತದೆ.
ಅದರಂತೆ ಮಡಚುವ ಮೊಬೈಲ್ ಬಹಳ ವಿಭಿನ್ನ ವಾಗಿದೆ, ಹಾಗು ಗ್ರಾಹಕರನ್ನು ಆಕರ್ಷಿಸುತ್ತಿದೆ. ಒಪ್ಪೋ ಕಂಪೆನಿ ಮಾರುಕಟ್ಟೆಗೆ ಒಪ್ಪೋ ಎಫ್21 ಪ್ರೋ ( OPPO F21 Pro)ಸ್ಮಾರ್ಟ್‌ಫೋನ್ ಪರಿಚಯಿಸಿದ್ದು, ಇದೀಗ ಈ ಸ್ಮಾರ್ಟ್ ಪೋನ್ ಮೇಲೆ ಬಾರೀ ರಿಯಾಯಿತಿಯನ್ನು ಘೋಷಣೆ ಮಾಡಿದೆ.
ಒಪ್ಪೋ ಎಫ್21 ಪ್ರೋ ( OPPO F21 Pro)ಸ್ಮಾರ್ಟ್‌ಫೋನ್ ನ ವಿಶೇಷತೆ
ಒಪ್ಪೋ ಕಂಪನಿಯು ಹಲವು ವಿಶೇಷತೆ ಹೊಂದಿರುವ ಫೋನ್ ಅನ್ನು ಪರಿಚಯಿಸಿದ್ದು 6.43-ಇಂಚಿನ AMOLED ಡಿಸ್ಪ್ಲೇಯನ್ನು ಒಳಗೊಂಡಿದೆ. OPPO F21 Pro ಸ್ಮಾರ್ಟ್ ಪೋನ್ 8GB RAM, 64MP ಕ್ಯಾಮೆರಾ ಜೊತೆಗೆ ಅತ್ಯುತ್ತಮ ಪ್ರೊಸೆಸರ್ ಒಳಗೊಂಡಿದೆ.
ಜೊತೆಗೆ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಲೆನ್ಸ್ ಕ್ಯಾಮೆರಾ ಮತ್ತು ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸ್ಮಾರ್ಟ್‌ಪೋನ್‌ನಲ್ಲಿ ಅಳವಡಿಸಲಾಗಿದೆ. ಜೊತೆಗೆ 4500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ನೀಡಲಾಗಿದ್ದು, 33W ಚಾರ್ಜಿಂಗ್ ಮೂಲಕ ವೇಗವಾಗಿ ಮೊಬೈಲ್ ಚಾರ್ಜಿಂಗ್ ಮಾಡಬಹುದಾಗಿದೆ.
ಒಪ್ಪೋ ಎಫ್21 ಪ್ರೋ ( OPPO F21 Pro)ಸ್ಮಾರ್ಟ್‌ಫೋನ್ ನ ಬೆಲೆ
ಹಲವು ವೈಶಿಷ್ಟತೆ ಹೊಂದಿದ OPPO F21 Pro ಸ್ಮಾರ್ಟ್ ಪೋನ್ ಬೆಲೆ 27,999 ರೂಪಾಯಿ ಆಗಿರುತ್ತದೆ. ಆದರೆ ಇದೀಗ ಈ ಫೋನ್ ಗೆ ಅಧಿಕ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ (Flipkart Big Billion Day Sale) ಈ ಮೊಬೈಲ್ ಪೋನ್ ಮೇಲೆ ದೊಡ್ಡ ಮೊತ್ತದ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಈ ಆಫರ್‌ನಲ್ಲಿ ಕೇವಲ 19,980 ರೂ.ಗೆ ಅಂದರೆ ಬರೋಬ್ಬರಿ ಶೇ.28ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ.
ಒಪ್ಪೋ ಎಫ್21 ಪ್ರೋ ( OPPO F21 Pro)ಸ್ಮಾರ್ಟ್‌ಫೋನ್ ನ ರಿಯಾಯಿತಿ ಆಫರ್
ಒಪ್ಪೋ ಎಫ್21 ಪ್ರೋ ( OPPO F21 Pro)ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಬಹಳ ಕಡಿಮೆ ಬೆಲೆ ಹಾಗು ಆಫರ್ ನೊಂದಿಗೆ ಸಿಗಲಿದೆ , ವಿವಿಧ ಬ್ಯಾಂಕುಗಳ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಇನ್ನಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಪ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Flipkart Axis Bank Credit Card) ಮೂಲಕ ಈ ಸ್ಮಾರ್ಟ್ ಪೋನ್ ಖರೀದಿಸಿದರೆ ಶೇ.5 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್‌ನಲ್ಲಿ ಶೇ.10ರಷ್ಟು ರಿಯಾಯಿತಿ. ಪಡೆಯಬಹುದಾಗಿದೆ. ಜೊತೆಗೆ EMI ಆಯ್ಕೆಯನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. ಪ್ರತೀ ತಿಂಗಳು ಕೇವಲ 3,330 ರೂ. ಹೊರತಾಗಿ ಈ ಪೋನ್ ಗಳ ಖರೀದಿಯ ಮೇಲೆ ಇನ್ನಷ್ಟು ಆಫರ್‌ಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ.