Oppo Reno 10: ಒಂದೇ ದಿನದಲ್ಲಿ ಎರಡು ಭರ್ಜರಿ ಮೊಬೈಲ್ ಬಿಡುಗಡೆ, ಮೊಬೈಲ್ ಖರೀದಿಸಲು ಮುಗಿಬಿದ್ದ ಜನರು.
ಒಂದೇ ದಿನ ಮೂರೂ ಆಕರ್ಷಕ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡಿದ ಒಪ್ಪೋ.
Oppo Reno 10 5G Smartphones: ಇತ್ತೀಚಿಗೆ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನುಗಳ ಹಾವಳಿ ಹೆಚ್ಚಾಗಿ ನಡೆಯುತ್ತಿದೆ. ಅದರಲ್ಲೂ ಒಪೊ ಕಂಪನಿಯ ಸ್ಮಾರ್ಟ್ ಫೋನುಗಳು ಹೊಸ ಛಾಪನ್ನು ಮೂಡಿಸುತ್ತಿದೆ. ಇಂದು ಒಪೊ ಕಂಪನಿಯ ಹೊಸ 3 ಸ್ಮಾರ್ಟ್ ಫೋನುಗಳು ಬಿಡುಗಡೆಯಾಗಿದೆ.
ಒಪ್ಪೋ ರೆನೋ 10 5 ಜಿ, ಒಪೊ ರೆನೋ 10 ಪ್ರೊ 5 ಜಿ ಮತ್ತು ಒಪೊ ರೆನೋ 10 ಪ್ರೊ + 5 ಜಿ ಸ್ಮಾರ್ಟ್ ಫೋನುಗಳು ಇಂದು ಭಾರತದಲ್ಲಿ ಅನಾವರಣಗೊಂಡಿದೆ. ಈ ಫೋನುಗಳು ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೆ ಇದೆ. ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಒಪ್ಪೋ ಭಾರತದಲ್ಲಿ ಇಂದು ಒಂದೇ ದಿನ ಮೂರೂ ಆಕರ್ಷಕ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡಿದೆ.
ಒಪ್ಪೋ ರೆನೋ 10 5 ಜಿ
ಒಪ್ಪೋ ರೆನೋ 10 5 ಜಿ, ಒಪೊ ರೆನೋ 10 ಪ್ರೊ 5 ಜಿ ಮತ್ತು ಒಪೊ ರೆನೋ 10 ಪ್ರೊ + 5 ಜಿ ಸ್ಮಾರ್ಟ್ ಫೋನ್ ಗಳು ಇಂದು ದೇಶದಲ್ಲಿ ಅನಾವರಣಗೊಂಡಿದ್ದು ಇದರಲ್ಲಿ ಮೂರೂ ಕ್ಯಾಮೆರಾಗಳು ಬಹಳ ಅದ್ಭುತವಾಗಿದೆ. ಈ ಫೋನುಗಳು ಫೋಟೋಗ್ರಫಿಗೆ ಹೇಳಿಮಾಡಿಸಿದಂತಿದೆ. ಸೋನಿ ಲೆನ್ಸ್ ಈ ಸ್ಮಾರ್ಟ್ ಫೋನ್ ನಲ್ಲಿ ಅಳವಡಿಸಲಾಗಿದೆ. ಇನ್ನು ಈ ಮೂರೂ ಸ್ಮಾರ್ಟ್ ಫೋನುಗಳು ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯವರೆಗೆ ಲಭ್ಯವಿದೆ.
ಒಪ್ಪೋ ರೆನೋ 10 ಪ್ರೊ 5 ಜಿ ಸ್ಮಾರ್ಟ್ ಫೋನ್
ಒಪ್ಪೋ ರೆನೋ 10 ಪ್ರೊ 5 ಜಿ 12 GB RAM + 256 GB ಸ್ಟೋರೇಜ್ ಮಾದರಿಗಾಗಿ ಭಾರತದಲ್ಲಿ 54,999 ರೂಪಾಯಿ ಇದೆ. ಒಪ್ಪೋ ರೆನೊ 10 ಪ್ರೊ 5 g ಯ 12 GB RAM + 256 gb ಸ್ಟೋರೇಜ್ ರೂಪಾಂತರಕ್ಕೆ 39,999 ರೂಪಾಯಿ.
ಒಪ್ಪೋ ರೆನೋ 10 ಪ್ರೊ ಪ್ಲಸ್ 5 ಜಿ ಸ್ಮಾರ್ಟ್ ಫೋನ್ ನ ವಿಶೇಷತೆ
ಒಪ್ಪೋ ರೆನೋ 10 ಪ್ರೊ 5 ಜಿ ಸ್ಮಾರ್ಟ್ ಫೋನ್ 50 MP Sony IMX 890 ಪ್ರಾಥಮಿಕ ಸಂವೇದಕವನ್ನು ಹೊಂದಿದೆ. ಇದು 64 mp ಟೆಲಿಫೋಟೋ ಲೆನ್ಸ್ 8 MP ಅಲ್ಟ್ರಾವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ. ರೆನೋ 10 ಪ್ರೋ 80W SUPERVOOC ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 4,600mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.