OPS Update: ಸರ್ಕಾರೀ ನೌಕರರಿಗೆ ಸರ್ಕಾರದ ಗ್ಯಾರೆಂಟಿ, ಹಳೆ ಪಿಂಚಣಿ ಬಗ್ಗೆ ಕೇಂದ್ರದ ಹೊಸ ನಿರ್ಧಾರ.

ಹಳೆ ಪಿಂಚಣಿ ಬಗ್ಗೆ ಕೇಂದ್ರದ ಹೊಸ ನಿರ್ಧಾರ

Old Pension Scheme Latest Update: ಕೇಂದ್ರ ನೌಕರರು ಮತ್ತು ವಿವಿಧ ರಾಜ್ಯ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸುವಂತೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ.

ಸರ್ಕಾರಿ ನೌಕರರ ಬೇಡಿಕೆಗಳನ್ನು ಒಪ್ಪಿಕೊಂಡು ಹಿಮಾಚಲ ಪ್ರದೇಶ, ಛತ್ತೀಸ್‌ಗಢ, ಪಂಜಾಬ್, ರಾಜಸ್ಥಾನ ಮತ್ತು ಜಾರ್ಖಂಡ್‌ ನಲ್ಲಿಯೂ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಮರುಸ್ಥಾಪಿಸಲು ನಿರಾಕರಿಸಿದೆ. ಸದ್ಯ ಕೇಂದ್ರದಿಂದ ಹಳೆಯ ಪಿಂಚಣಿಯ ಯೋಜನೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬಿದ್ದಿದೆ.

Old Pension Scheme Latest News
Image Credit: Informalnewz

ಸರ್ಕಾರೀ ನೌಕರರಿಗೆ ಸರ್ಕಾರದ ಗ್ಯಾರೆಂಟಿ
ನಿವೃತ್ತಿಯ ನಂತರ NPS ಅಡಿಯಲ್ಲಿ ಯಾವುದೇ ನಿಶ್ಚಿತ ಪ್ರಯೋಜನವಿಲ್ಲ ಎಂದು ನೌಕರರ ಸಂಘಗಳು ದೂರುತ್ತವೆ. ಆದಾಗ್ಯೂ, OPS ನಲ್ಲಿ ಉದ್ಯೋಗಿಗೆ ಸ್ಥಿರ ಪಿಂಚಣಿ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ NPS ವ್ಯಾಪ್ತಿಗೆ ಬರುವ ಕೇಂದ್ರ ನೌಕರರು ನಿವೃತ್ತಿಯ ನಂತರ OPS ಗೆ ಸಮಾನವಾದ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಭರವಸೆ ನೀಡಲು ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS) ವ್ಯಾಪ್ತಿಗೆ ಬರುವ ನೌಕರರಿಗೆ ನಿವೃತ್ತಿಯ ನಂತರ ಅವರ ಮಾಸಿಕ ವೇತನದ 50% ಅನ್ನು ಪಿಂಚಣಿಯಾಗಿ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ಹಳೆ ಪಿಂಚಣಿ ಬಗ್ಗೆ ಕೇಂದ್ರದ ಹೊಸ ನಿರ್ಧಾರ
ನೌಕರರು ನಿವೃತ್ತಿಯ ನಂತರ ಠೇವಣಿ ಮಾಡಿದ ಮೊತ್ತದ ಆಧಾರದ ಮೇಲೆ ಮಾತ್ರ ಪಿಂಚಣಿ ಪಡೆಯುತ್ತಾರೆ. ಸೋಮನಾಥನ್ ಸಮಿತಿಯು ಪ್ರಪಂಚದಾದ್ಯಂತದ ದೇಶಗಳ ಪಿಂಚಣಿ ಯೋಜನೆಗಳು ಮತ್ತು ಆಂಧ್ರಪ್ರದೇಶ ಸರ್ಕಾರ ಮಾಡಿದ ಬದಲಾವಣೆಗಳನ್ನು ಅಧ್ಯಯನ ಮಾಡಿದೆ. ಅಲ್ಲದೆ, ಈ ಸಮಿತಿಯು ಸರ್ಕಾರವು ಪಿಂಚಣಿಯಾಗಿ ನಿಗದಿತ ಮೊತ್ತವನ್ನು ಖಾತರಿಪಡಿಸುವ ಪರಿಣಾಮವನ್ನು ಅಧ್ಯಯನ ಮಾಡುತ್ತಿದೆ. ಇದರ ಪ್ರಕಾರ 40-45% ಪಿಂಚಣಿ ಸಾಧ್ಯ ಎಂದು ಕಂಡುಕೊಳ್ಳಾಗಿದೆ. ಆದರೆ ಇದರಿಂದ 25-30 ವರ್ಷ ಕೆಲಸ ಮಾಡುವ ನೌಕರರ ಆತಂಕ ದೂರವಾಗಿಲ್ಲ. ಹೀಗಾಗಿ ಸರಕಾರ ಈಗ ಶೇ.50 ರಷ್ಟು ಪಿಂಚಣಿ ಖಾತರಿ ನೀಡುವ ಬಗ್ಗೆ ಚಿಂತನೆ ನಡೆಸಿದೆ.

Govt Employees Old Pension
Image Credit: Outlookindia

Join Nadunudi News WhatsApp Group

Join Nadunudi News WhatsApp Group