Oscar Award Price: ಆಸ್ಕರ್ ಪ್ರಶಸ್ತಿಯ ಮೌಲ್ಯ ಕೇವಲ 82 ರೂಪಾಯಿ, ಬೆಲೆ ಕಡಿಮೆ ಅದರ ಮಹತ್ವ ದೊಡ್ಡದು.
Oscar Award Trophy Price : ಇತ್ತೀಚಿಗೆ ಸಿನಿಮಾಗಳ ವಿಚಾರವಾಗಿ ಆಸ್ಕರ್ (Oscar Award) ಪ್ರಶಸ್ತಿಯ ಬಗ್ಗೆ ಮಾತನಾಡಲಾಗುತ್ತಿದೆ. ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 13 ರಂದು ಆಸ್ಕರ್ ಪಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಈ ಸಮಾರಂಭಕ್ಕಾಗಿ ಒಂದು ತಿಂಗಳಿಂದ ನಿರಂತರವಾಗಿ ಅಕಾಡೆಮಿಯು ಹಗಲಿರುಳು ಕೆಲಸ ಮಾಡುತ್ತಿದೆ. ಜಗತ್ತಿನ ಪ್ರಸಿದ್ದ ಕಲಾವಿದರು ಮತ್ತು ತಂತ್ರಜ್ಞರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಪ್ರಶಸ್ತಿ ಕುರಿತಾಗಿ ಹಲವು ವಿಶೇಷ ಸಂಗತಿಗಳನ್ನು ಹುಡುಕಿ ಈ ಕುರಿತು ಪ್ರಚಾರ ಮಾಡಲಾಗುತ್ತಿದೆ.
ಆಸ್ಕರ್ ಪ್ರಶಸ್ತಿಯ ಮೂಲ್ಯ
ಆಸ್ಕರ್ ಪ್ರಶಸ್ತಿ ಮೌಲ್ಯದ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಈ ಪ್ರಶಸ್ತಿಯನ್ನು ಪ್ರಶಸ್ತಿ ವಿಜೇತರು ಯಾರಾದರೂ ಮಾರಲು ಬಯಸಿದರೆ ಅದು ಮೌಲ್ಯ ಕೇವಲ 82 ರೂಪಾಯಿಗಳು ಮಾತ್ರ. ಆಸ್ಕರ್ ಆಕಾಡೆಮಿಯೇ ಈ ಮೌಲವನ್ನು ನಿರ್ಧಾರ ಮಾಡಿದೆ.
ಅಲ್ಲದೆ ಈ ಪ್ರಶಸ್ತಿಯನ್ನು ಬೇರೆಲ್ಲೂ ಮಾರುವಂತಿಲ್ಲ. ಮಾರುವುದಾದರೆ ಅದನ್ನು ಅಕಾಡೆಮಿ ವಾಪಸ್ಸು ಮಾರಬೇಕು. ಈ ಕಾರಣದಿಂದಾಗಿಯೇ ಕಡಿಮೆ ಬೆಲೆಯನ್ನು ನಿಗದಿ ಮಾಡಿದೆ.
ಈ ಪ್ರಶಸ್ತಿಯನ್ನು ಯಾರು ಮಾರಬಾರದು ಎನ್ನುವ ಉದ್ದೇಶ ಕೂಸ ಇದರ ಹಿಂದಿದೆ. ಪ್ರಶಸ್ತಿ ನೀಡುವಾಗಲೇ ವಿಜೇತರು ಒಪ್ಪಂದಕ್ಕೆ ಸಹಿ ಕೂಡ ಮಾಡಬೇಕಾಗುತ್ತದೆ.
ಆಸ್ಕರ್ ಪ್ರಶಸ್ತಿ ತಯಾರಿಸುವ ವೆಚ್ಚ
ಮಾರಾಟದ ಬೆಲೆ 82 ರೂಪಾಯಿಗಳಾದರೆ ಅದನ್ನು ತಯಾರಿಸುವ ವೆಚ್ಚ ಬರೋಬ್ಬರಿ 32813 ರೂಪಾಯಿ ಆಗಿದೆ. 13 .5 ಇಂಚು ಎತ್ತರದ ಬಂಗಾರದ ಬಣ್ಣದ ಮೂರ್ತಿ ಇದಾಗಿದ್ದು, ತಲೆ ಮೇಲೆ ಕೂದಲು ಇಲ್ಲದ ವ್ಯಕ್ತಿಯೊಬ್ಬ ಕತ್ತಿಯೊಂದನ್ನು ಹಿಡಿದುಕೊಂಡು ನಿಂತಿರುವ ಮೂರ್ತಿ ಅದಾಗಿದೆ. ಪ್ರಶಸ್ತಿ ವಿಜೇತರಿಗೆ ಯಾವುದೇ ಗೌರವ ಮೊತ್ತವನ್ನು ನೀಡದೆ ಕೇವಲ ಈ ಮೂರ್ತಿಯನ್ನು ಮಾತ್ರ ನೀಡಲಾಗುತ್ತದೆ.