Oukitel: ಕೇವಲ 12 ಸಾವಿರಕ್ಕೆ ಖರೀದಿಸಿ ಬಿದ್ದರು ಒಡೆಯದ ಶಕ್ತಿಶಾಲಿ ಮೊಬೈಲ್, 10,000 mAh ಬ್ಯಾಟರಿ.
10,600mAh ಬ್ಯಾಟರಿ ಸಾಮರ್ಥ್ಯ ಹೊಂದಿದ Oukitel ಕಂಪನಿಯ ವಾಟರ್ ಪ್ರೊಫ್ ಸ್ಮಾರ್ಟ್ ಫೋನ್ ಬಿಡುಗಡೆ.
Oukitel WP28 Smartphone: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಸ್ಮಾರ್ಟ್ ಫೋನ್ (Smartphone) ಗಳು ಲಗ್ಗೆ ಇಡುತ್ತಿವೆ. ವಿವಿಧ ಪ್ರತಿಷ್ಠಿತ ಕಂಪನಿಗಳು ಹೊಸ ಮಾದರಿಯ ಫೋನ್ ಗಳನ್ನೂ ಪರಿಚಯಿಸುತ್ತಿವೆ.
ಈಗಾಗಲೇ ರಿಯಲ್ ಮೀ, ವಿವೊ, ಟೆಕ್ನೋ, ಮೋಟೋ, ಸ್ಯಾಮ್ ಸಂಗ್ ಸೇರಿದಂತೆ ಇನ್ನಿತರ ವಿವಿಧ ಮಾದರಿಯ ಫೋನ್ ಗಳು ಮಾರುಕಟ್ಟೆಯಲ್ಲಿವೆ. ಆದರೆ ಇದೀಗ Oukitel ತನ್ನ ಹೊಚ್ಚ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ. ಈ Oukitel ಇನ್ನಿತರ ಸ್ಮಾರ್ಟ್ ಫೋನ್ ಮಾದರಿಗಳಿಗೆ ಸಕ್ಕತ್ ಪೈಪೋಟಿ ನೀಡಲಿದೆ.
Oukitel WP28 ಸ್ಮಾರ್ಟ್ ಫೋನ್ (Oukitel WP28 Smartphone)
ಇದೀಗ Oukitel ಕಂಪನಿಯು Oukitel WP28 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಬಂಪರ್ ಕೊಡುಗೆಯನ್ನು ಕೂಡ ನೀಡುತ್ತಿದೆ. ಇದರ ವಿಶೇಷವೆಂದರೆ ಈ Oukitel WP28 ಸ್ಮಾರ್ಟ್ ಫೋನ್ ಸಂಪೂರ್ಣ ವಾಟರ್ ಪ್ರೂಫ್ ಆಗಿದೆ.
ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು ಉತ್ತಮ ಗುಣಮಟ್ಟದ ಕ್ಯಾಮರಾವನ್ನು ಕೂಡ ಅಳವಡಿಸಲಾಗಿದೆ. Oukitel WP28 ಸ್ಮಾರ್ಟ್ ಫೋನ್ ಹಾರ್ಡ್ ಆಗಿದ್ದು ಯಾವುದೇ ರೀತಿಯಲ್ಲಿ ಬಿದ್ದರು ಕೂಡ ಹಾನಿಯಾಗುವುದಿಲ್ಲ. ಈ ಸ್ಮಾರ್ಟ್ ಫೋನ್ ಬಳಕೆಗೆ ಸುಲಭವಾಗಲು ವಿವಿಧ ವಿನ್ಯಾಸವನ್ನು ಅಳವಡಿಸಲಾಗಿದೆ.
ಬರೋಬ್ಬರಿ 10,600mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್ ಫೋನ್ ಲಭ್ಯ
ಈ Oukitel WP28 ಸ್ಮಾರ್ಟ್ ಫೋನ್ 720×1600 ರೆಸಲ್ಯೂಶನ್ ಹೊಂದಿರುವ 6.52-ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ವಿಡಿಯೋ ವೀಕ್ಷಣೆ, ಗೇಮಿಂಗ್ ಹಾಗೂ ವೆಬ್ ಬ್ರೌಸರ್ ಗಳನ್ನೂ ಸಂಪೂರ್ಣವಾಗಿ ಬಳಸಿಕೊಳ್ಳಬಹುದು. ಈ ಸ್ಮಾರ್ಟ್ ಫೋನ್ ಶಕ್ತಿಯುತ 10,600mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.
ಕೇವಲ 12 ಸಾವಿರಕ್ಕೆ ಖರೀದಿಸಿ ಬಿದ್ದರು ಒಡೆಯದ ಶಕ್ತಿಶಾಲಿ ಮೊಬೈಲ್
ಇನ್ನು ಈ ಸ್ಮಾರ್ಟ್ ಫೋನ್ ನ ಕ್ಯಾಮರಾ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್ ನಲ್ಲಿ ಉತ್ತಮ 48MP ಕ್ಯಾಮೆರಾವನ್ನು ಪಡೆಯುತ್ತೀರಿ. ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯಬಹುದಾಗಿದೆ.
ಈ ಫೋನ್ ನ ಮುಂಭಾಗದಲ್ಲಿ ಸೆಲ್ಫಿಗಾಗಿ 5MP ಫೇಸಿಂಗ್ ಕ್ಯಾಮೆರಾ ಲಭ್ಯವಿದೆ. ಈ ಫೋನ್ ನ ಬೆಲೆ ಸರಿ ಸುಮಾರು 11500 ರೂ. ನಿಗದಿಪಡಿಸಲಾಗಿದೆ. ಗ್ರಾಹಕರು ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.