Painter B.K.S Varma: ಕರ್ನಾಟಕದ ಪ್ರಸಿದ್ಧ ಕಲಾವಿದ ಬಿ.ಕೆ.ಎಸ್ ವರ್ಮಾ ವಿಧಿವಶ.

Painter B.K.S Varma Passed Away: ಹಲವು ದಿನಗಳಿಂದ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಿ.ಕೆ.ಎಸ್ ವರ್ಮಾ (B.K.S Varma)ನಿಧನರಾಗಿದ್ದಾರೆ . ಇವರು ಕಳೆದ ಮೂರೂ ತಿಂಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 8:20 ಕ್ಕೆ ಹೆಬ್ಬಾಳ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಿ.ಕೆ.ಎಸ್ ವರ್ಮಾ ನಿಧನರಾದ ಸುದ್ದಿ ಕೇಳಿ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

Famous Karnataka artist BKS Verma passed away.
Image Credit: instagram

ಕರ್ನಾಟಕದ ಪ್ರಸಿದ್ಧ ಕಲಾವಿದ ಬಿ.ಕೆ.ಎಸ್ ವರ್ಮಾ ವಿಧಿವಶ
ಕರ್ನಾಟಕದ ಪ್ರಸಿದ್ಧ ಕಲಾವಿದ ಬಿ ಕೆ ಎಸ್ ವರ್ಮಾ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಲಾವಿದ ವರ್ಮಾ ಅವರಿಗೆ 76 ವರ್ಷ ವಯಸ್ಸು. ಹೇಳಬೇಕಂದರೆ ಅವರು ಬೇಗ ವಿಧಿವಶರಾದರು ಎನ್ನಬಹುದು.

ಬಿ ಕೆ ಎಸ್ ವರ್ಮಾ ಅವರು ಪರಿಸರ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

Artist B.K.S Verma who was suffering from illness passed away
Image Credit: instagram

ಭುವನೇಶ್ವರಿ, ವೃಕ್ಷದಲ್ಲಿ ಡಾ. ರಾಜಕುಮಾರ್ ಸೇರಿದಂತೆ ಹಲವು ಚಿತ್ರಗಳು ಇವರಿಗೆ ಹೆಚ್ಚೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. ಅನೇಕ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಅವರು ಚಿತ್ರ ಕಲಾವಿದರನ್ನು ತಯಾರಿ ಮಾಡಿದ್ದರು.

Join Nadunudi News WhatsApp Group

ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಬಿ.ಕೆ.ಎಸ್ ವರ್ಮಾ
ಬಿ.ಕೆ.ಎಸ್ ವರ್ಮಾ ಅವರು ಕಲೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಅವರ ಸಾಧನೆಗೆ ಲಲಿತ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿ ಲಭಿಸಿದೆ.

Painting artist B.K.S Varma passed away in hospital
Image credit: instagram

ಬೆಂಗಳೂರು ವಿವಿ ಯಿಂದ 2011 ರಲ್ಲಿ ಅವರಿಗೆ ಗೌರವ ನೀಡಲಾಗಿದೆ. 6 ನೇ ವಯಸ್ಸಿಗೆ ಹವ್ಯಾಸವಾಗಿ ರೇಖಾಚಿತ್ರ ಪ್ರಾರಂಭಿಸದ್ದ ಅವರು ನಿರಂತರವಾಗಿ ಆರು ಏಳು ದಶಕಗಳ ಕಾಲ ಚಿತ್ರಕಲೆಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

Famous film artist B.K.S Varma passed away due to illness
Image Credit: instagram

 

Join Nadunudi News WhatsApp Group