Pakistan Petrol: ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಎಷ್ಟು…? ಜನರ ಪರಿಸ್ಥಿತಿ ಕಂಡರೆ ಅಯ್ಯೋ ಪಾಪ ಅನಿಸುತ್ತದೆ.

ನಮ್ಮ ದೇಶಕ್ಕೆ ಹೋಲಿಕೆ ಮಾಡಿದರೆ ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಎಷ್ಟು.

Pakistan Petrol And Diesel Price: ಆರ್ಥಿಕವಾಗಿ ಹಿಂದುಳಿದ ದೇಶದ ಪಟ್ಟಿಯಲ್ಲಿ ಪಾಕಿಸ್ತಾನ ಅಗ್ರಗಣ್ಯದಲ್ಲಿ ಇದೆ ಎನ್ನಬಹುದಾಗಿದೆ. ಪಾಕಿಸ್ತಾನದಲ್ಲಿ ಜನರಿಗೆ ಊಟಕ್ಕೂ ತುಂಬ ಕಷ್ಟ ಆಗಿರುವುದು ನಾವು ಕಾಣುತ್ತಿದ್ದೇವೆ. ಬೆಲೆ ಏರಿಕೆಯ ಕಾರಣ ಪಾಕಿಸ್ತಾನದ ಜನರ ಪರಿಸ್ಥಿತಿ ಬಹಳ ಹದಗೆಟ್ಟಿದ್ದು ಜನರು ಕಷ್ಟದಲ್ಲಿ ಜೀವನವನ್ನ ಮಾಡುತ್ತಿದ್ದಾರೆ. 

ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಕುಗ್ಗುತ್ತಿದ್ದಂತೆ ಮೂಲ ಸೌಕರ್ಯಗಳ ಕೊರತೆ ಉಂಟಾಗಿದ್ದು, ಮೂಲ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಜನ ಜೀವನ ಅಸ್ತವೆಸ್ತಾ ಆಗಿರುತ್ತದೆ. ಹಾಗೆ  ದಿವಾಳಿಯಾದ ಪಾಕ್‌ ನಲ್ಲಿ ಪೆಟ್ರೋಲ್ ಬೆಲೆ ಕೇಳಿದರೆ ಬೇಸರ ಆಗುತ್ತದೆ ಎಂದು ಹೇಳಬಹುದು. ಹೌದು ಪಾಕಿಸ್ತಾನದಲ್ಲಿ ಪೆಟ್ರೋಲ್ ಗಗನಕ್ಕೆ ಏರಿದ್ದು ಜನ ಜೀವನ ಅಸ್ತವೆಸ್ತವಾಗಿದೆ.

Petrol price has increased again in Pakistan
Image Credit: tribune

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು
ಪಾಕಿಸ್ತಾನದಲ್ಲಿ ಕಳೆದ ಒಂದು ದಶಕದಿಂದ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದೆ. ಪಾಕ್‌ ನ ಹಣದುಬ್ಬರ ಮತ್ತು ಬಡ್ಡಿದರ ಏರಿಕೆಯಿಂದಾಗಿ ಪಾಕಿಸ್ತಾನದ ಜನರು ಕಂಗಾಲಾಗುವಂತೆ ಮಾಡಿದೆ. ಆರ್ಥಿಕ ಬಿಕ್ಕಟ್ಟು, ರಾಜಕೀಯ ಅಸ್ಥಿರತೆಯಿಂದ ಪಾಕಿಸ್ತಾನ ಕಂಗೆಟ್ಟು ಹೋಗಿದೆ .ಕಳೆದ ತಿಂಗಳು ಪಾಕ್‌ ಸಂಸತ್‌ ಅನ್ವರ್‌ ಉಲ್‌ ಹಖ್‌ ಕಾಖರ್‌ ಅವರನ್ನು ಹಂಗಾಮಿ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದು, ನವೆಂಬರ್‌ ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಸಾಧ್ಯತೆ ಇದೆ .

ಮಾಧ್ಯಮದ ವರದಿ ಪ್ರಕಾರ ಪಾಕಿಸ್ತಾನ 
ಮಾಧ್ಯಮದ ವರದಿಯಲ್ಲಿ ಪಾಕಿಸ್ತಾನ ಎಲ್ಲ ಹಂತದಲ್ಲೂ ಕೆಳಗಿದ್ದು ಅಲ್ಲಿ ಜೀವನ ಮಾಡುವುದು ಕಷ್ಟ ಸ್ಥಿತಿ ಎಂದು ಹೇಳಿದೆ. ಪಾಕಿಸ್ತಾನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎಂಬಂತೆ ಪೆಟ್ರೋಲ್‌ ಬೆಲೆ ಲೀಟರ್‌ಗೆ  300 ರೂಪಾಯಿಗೆ ಏರಿಕೆಯಾಗಿರುವುದಾಗಿದ್ದು ಅಲ್ಲಿನ ಜನರಿಗೆ ಇದು ನುಂಗಲಾರದ ತುಪ್ಪವಾಗಿದೆ. ಒಂದರ ಹಿಂದೆ ಒಂದೊಂದೇ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ ಇದೀಗ ಲೀಟರ್‌ ಪೆಟ್ರೋಲ್‌ ಬೆಲೆಯನ್ನು 14.91 ರೂಪಾಯಿ ಹೆಚ್ಚಳ ಮಾಡಿದ್ದು, ಹೈಸ್ಪೀಡ್‌ ಡೀಸೆಲ್‌ ಬೆಲೆಯನ್ನು 18.44 ರೂಪಾಯಿ ಏರಿಕೆ ಮಾಡಿರುವುದಾಗಿ ಪಾಕ್‌ ವಿತ್ತ ಸಚಿವಾಲಯ ತಿಳಿಸಿದೆ.

We can see that the price of petrol in Pakistan has increased again
Image Credit: tribune

ಪಾಕಿಸ್ತಾನದಲ್ಲಿ ಪೆಟ್ರೋಲ್‌ ಹಾಗು  ಡೀಸೆಲ್‌ ಬೆಲೆ ವಿವರ
ಪಾಕಿಸ್ತಾನದಲ್ಲಿ ಮೂಲ ವಸ್ತುಗಳ ಬೆಲೆ ಏರಿಕೆಯೊಂದಿಗೆ ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್‌ ಹಾಗು  ಡೀಸೆಲ್‌ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ  ಲೀಟರ್‌ ಗೆ 305.36 ರೂಪಾಯಿಯಾಗಿದ್ದು, ಡೀಸೆಲ್‌ ಬೆಲೆ ಲೀಟರ್‌ ಗೆ 311.84 ರೂಪಾಯಿಗೆ ಏರಿಕೆಯಾಗಿದೆ. ಈ ರೀತಿಯ ಬೆಲೆ ಏರಿಕೆಯಿಂದ ಪಾಕಿಸ್ತಾನ ಕೆಂಗೆಟ್ಟು ಹೋಗಿದ್ದು ಅಲ್ಲಿನ ಜನರ ಜೀವನ ನೆನೆಸಿಕೊಂಡರೆ ಪಾಪ ಅನ್ನಿಸುವಂತಿದೆ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವ ಇವರು  ಪೆಟ್ರೋಲ್‌ ಹಾಗು  ಡೀಸೆಲ್‌ ಖರೀಧಿ ಮಾಡುವುದು ಅಸಾಧ್ಯ ಎನ್ನಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group