Pan Card And Aadhaar Card Link Deadline: ಪಾನ್ ಕಾರ್ಡ್ ಒಂದು ಅತ್ಯಗತ್ಯ ಗುರುತಿನ ದಾಖಲೆಯಾಗಿದ್ದು, ITR ಸಲ್ಲಿಸಲು ಮಾತ್ರವಲ್ಲದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಹ ಪಾನ್ ಕಾರ್ಡ್ ಅತಿ ಅಗತ್ಯವಾಗಿದೆ. ಆದರೆ, ಇತ್ತೀಚಿಗೆ ಕೆಲವು ಜನರು ನಕಲಿ ಪಾನ್ ಕಾರ್ಡ್ ಅನ್ನು ಬಳಸಿಕೊಂಡು ವಂಚನೆಯನ್ನ ಮಾಡುತ್ತಿದ್ದಾರೆ, ಈ ಕಾರಣದಿಂದ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಿದೆ. ಈ ನಡುವೆ ಕೇಂದ್ರ ಸರ್ಕಾರ ಈಗ ಕೊನೆಯ ಎಚ್ಚರಿಕೆ ಕೊಟ್ಟಿದ್ದು ಜನವರಿ 1 ರಿಂದ ಪಾನ್ ಕಾರ್ಡ್ ಇದ್ದವರು 1000 ರೂ ದಂಡ ಪಾವತಿ ಮಾಡಬೇಕಾಗುತ್ತದೆ.
ಜನವರಿ 1 ರಿಂದ ಇಂತವರ ಪಾನ್ ಕಾರ್ಡ್ ನಿಷ್ಕ್ರಿಯ
ಜನವರು 1,2026 ರಿಂದ ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಆಗದಿದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಅಂದರೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ಡಿಸೆಂಬರ್ 31 ಕೊನೆಯ ದಿನಾಂಕ ಆಗಿದೆ. ಈಗಾಗಲೇ ಹೆಚ್ಚಿನ ಜನರು ಲಿಂಕ್ ಮಾಡಿಸಿಕೊಂಡಿದ್ದಾರೆ. ಒಮ್ಮೆ ಪಾನ್ ಕಾರ್ಡ್ ನಿಷ್ಕ್ರಿಯವಾದರೆ ನೀವು ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.
ಏಕೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಕಡ್ಡಾಯ
ಪಾನ್ ಕಾರ್ಡ್ ಪ್ರಮುಖವಾದ ವ್ಯಾವಹಾರಿಕ ದಾಖಲೆಯಾಗಿದೆ ಮತ್ತು ಆಧಾರ್ ಕಾರ್ಡ್ ದೇಶದ ಪ್ರಮುಖವಾದ ಗುರುತಿನ ಚೀಟಿಯಾಗಿದೆ. ಬ್ಯಾಂಕ್ ಖಾತೆ, ITR ಸೇರಿದಂತೆ ಎಲ್ಲಾ ರೀತಿಯ ವಹಿವಾಟುಗಳಿಗೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ದೇಶದಲ್ಲಿ ನಕಲಿ ವಹಿವಾಟುಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಿದೆ. ಒಂದು ವೇಳೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯ ಮಾಡಲಾಗುತ್ತದೆ. ಇದರಿಂದ ನೀವು ಜೀವನದಲ್ಲಿ ಹಣಕಾಸು ವಹಿವಾಟುಗಳನ್ನು ಮಾಡಲು ಸಾಧ್ಯವಿಲ್ಲ.
ಈ ಕೊನೆಯ ಗಡುವು ಯಾರಿಗೆ ಅನ್ವಯ ಆಗಲಿದೆ
2024 ರ ಅಕ್ಟೋಬರ್ 1 ಕ್ಕಿಂತ ಮೊದಲು Aadhaar Enrollment ID ಬಳಸಿಕೊಂಡು ಪಾನ್ ಕಾರ್ಡ್ ಪಡೆದವರಿಗೆ ಈ ಗಡುವು ನೀಡಲಾಗಿದೆ. ಅವರು ಈಗ ತಮ್ಮ ಪೂರ್ಣ 12 ಅಂಕಿ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕು. ಸಾಮಾನ್ಯವಾಗಿ 2023 ರಿಂದಲೇ ಈ ಲಿಂಕ್ ಕಡ್ಡಾಯ, ಆದರೆ ಡಿಸೆಂಬರ್ 31, 2025 ವರೆಗೆ ಅವಕಾಶ ನೀಡಲಾಗಿದೆ. ಈ ಅವಧಿಯೊಳಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ 1000 ರೂಪಾಯಿ ಶುಲ್ಕ ಪಾವತಿ ಮಾಡಿ ಲಿಂಕ್ ಮಾಡಬೇಕಾಗುತ್ತದೆ.
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಆಗುವ ಪರಿಣಾಮಗಳು
# ತೆರಿಗೆ ರಿಟರ್ನ್ ಫೈಲ್ ಮಾಡಲು ಸಾಧ್ಯವಿಲ್ಲ
# ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಿಲ್ಲ
# ತೆರಿಗೆ ಮರುಪಾವತಿ (Refund) ಸ್ಥಗಿತಗೊಳ್ಳುತ್ತದೆ.
# ಬ್ಯಾಂಕ್ ವಹಿವಾಟು ಅಥವಾ ಮ್ಯೂಚುವಲ್ ಫಂಡ್ ಹೂಡಿಕೆಯ ಮೇಲೆ ಹೆಚ್ಚಿನ TDS ಕಡಿತಗೊಳಿಸಲಾಗುತ್ತದೆ.
# 50,000 ಕ್ಕಿಂತ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ.
# ಬ್ಯಾಂಕುಗಳಿಂದ ಸಾಲ ಪಡೆಯುವಾಗಲೂ ತೊಂದರೆ ಎದುರಾಗಲಿದೆ.
# ITR Refund ಸಿಗಲ್ಲ ಮತ್ತು ಹೆಚ್ಚುವರಿ TDS ಕಟ್ ಆಗುತ್ತೆ
# ಹೂಡಿಕೆ ಮಾಡಲು ಕಷ್ಟ ಆಗುತ್ತೆ
ಈ ರೀತಿಯಾಗಿ ಆನ್ಲೈನ್ ಮೂಲಕ ಲಿಂಕ್ ಮಾಡಿ
# ಮೊದಲು ನೀವು https://www.incometax.gov.in/iec/foportal/ ಗೆ ಭೇಟಿ ನೀಡಿ
# LINK AADHAR ಮೇಲೆ ಕ್ಲಿಕ್ ಮಾಡಿ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ OTP ಯಿಂದ ವೆರಿಫೈ ಮಾಡಿಕೊಳ್ಳಿ.
# ಜನವರಿ 1 ರ ನಂತರ ಮಾಡಿದರೆ 1000 ಶುಲ್ಕವನ್ನ ಪಾವತಿ ಮಾಡಬೇಕು.
# ನಂತರ SMS ಮೂಲಕ, UIDPAN < ಸ್ಪೇಸ್ > 12 ಅಂಕಿ ಆಧಾರ್ < ಸ್ಪೇಸ್ 10 ಅಂಕಿ ಪಾನ್ ಹಾಕಿ, 567678 ಅಥವಾ 56161 ಗೆ ಕಳಿಸಿ.
# ನಂತರ ” Link Aadhaar Status “ ಮೂಲಕ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

