Pan Aadhar Link: ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇದ್ದವರಿಗೆ 6,000 ರೂ ದಂಡ, ಕೇಂದ್ರ ಸರ್ಕಾರದ ಇನ್ನೊಂದು ಘೋಷಣೆ.
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸದಿದ್ದವರಿಗೆ ಸರ್ಕಾರದ ಮತ್ತೊಂದು ಆದೇಶ .
Pan Aadhar Link Fine In ITR: ಪ್ರಮುಖ ದಾಖಲೆಯಾಗಿರುವ ಪಾನ್ ಕಾರ್ಡ್ (Pan Card) ತೆರಿಗೆ ಪಾವತಿದಾರರಿಗೆ ಅಗತ್ಯವಾಗಿರುತ್ತದೆ. ಈಗಾಗಲೇ ಸರ್ಕಾರ ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ (Pan Aadhar Link) ಮಾಡಲು ಆದೇಶವನ್ನು ನೀಡಿದೆ. ಪಾನ್ ಹಾಗೂ ಆಧಾರ್ ಲಿಂಕ್ ಗೆ ಸರ್ಕಾರ ನೀಡಿರುವ ಗಡುವು ಈಗಾಗಲೇ ಮುಕ್ತಾಯಗೊಂಡಿದೆ. ಇನ್ನು ಪಾನ್ ಆಧಾರ್ ನೊಂದಿಗೆ ಲಿಂಕ್ ಆಗದಿದ್ದವರ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆ.
ಈ ತಿಂಗಳಿನಲ್ಲಿಯೇ ನಿಷ್ಕ್ರಿಯವಾಗಿದೆ ಇಂತವರ ಪಾನ್ ಕಾರ್ಡ್
ಈ ಹಿಂದೆ ಮಾರ್ಚ್ 31 2023 ಕೊನೆಯ ದಿನಾಂಕವನ್ನು ಸರ್ಕಾರ ಆಧಾರ್ ಪಾನ್ ಜೋಡಣೆಗೆ ನಿಗದಿಪಡಿಸಿತ್ತು. ಆದರೆ ಸಾಕಷ್ಟು ಜನರ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದ ಕಾರಣ ಗಡುವನ್ನು ವಿಸ್ತರಿಸಿತ್ತು. ಇನ್ನು ಪಾನ್ ಆಧಾರ್ ಲಿಂಕ್ ಗೆ ಮಾರ್ಚ್ 31 ರಿಂದ ಜೂನ್ 30 ರ ತನಕ ಗಡುವನ್ನು ವಿಸ್ತರಿಸಿದೆ.
ಇನ್ನು ಜೂನ್ 30 ಮುಗಿದರು ಕೂಡ ನಿಮ್ಮ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದರೆ ನಿಮ್ಮ ಪಾನ್ ಕಾರ್ಡ್ ಅನ್ನು ಸರ್ಕಾರ ನಿಷ್ಕ್ರಿಯಗೊಳಿಸಿದೆ.
ಆರ್ಥಿಕ ಚಟುವಟಿಕೆಗಳಿಗೆ ಪಾನ್ ಕಾರ್ಡ್ ಅಗತ್ಯವಾಗಿದೆ. ಬ್ಯಾಂಕ್ ಖಾತೆ, ನಿಗದಿತ ಠೇವಣಿಯ ಹೂಡಿಕೆ, ಡಿಮ್ಯಾಟ್ ಅಕೌಂಟ್ ಹಾಗೂ ತೆರಿಗೆ ಪಾವತಿಗೆ ಪಾನ್ ಕಾರ್ಡ್ ಮುಖ್ಯವಾಗಿರುತ್ತದೆ. ನಿಮ್ಮ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದರೆ ನೀವು ಭಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇದ್ದವರಿಗೆ 6000 ರೂ ದಂಡ
ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅದು ತೆರಿಗೆ ಪಾವತಿದಾರರಿಗೆ ಬಾರಿ ನಷ್ಟವನ್ನು ನೀಡುತ್ತದೆ. ಆದಾಯ ತೆರಿಗೆ ನಿಯಮದ ಪ್ರಕಾರ, ಒಬ್ಬ ವ್ಯಕ್ತಿಯ ಪಾನ್ ಕಾರ್ಡ್ ನಿಷ್ಕ್ರಿಯವಾದರೆ ಆ ವ್ಯಕ್ತಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ನೀವು ಜೂನ್ 30 ರರೊಳಗೆ ಪಾನ್ ಆಧಾರ್ ಲಿಂಕ್ ಮಾಡಿದ್ದರು ಪಾನ್ ಸಕ್ರಿಯಗೊಳ್ಳಲು ಒಂದು ತಿಂಗಳು ಬೇಕಾಗುತ್ತದೆ. ಒಂದು ತಿಂಗಳ ಸಮಯದೊಳಗೆ ಐಟಿ ರಿಟರ್ನ್ ಸಲ್ಲಿಕೆಯ ಕೊನೆಯ ದಿನಾಂಕ ಕೂಡ ಹತ್ತಿರವಾಗಲಿದೆ.
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. 5 ಲಕ್ಷ ಆದಾಯಕ್ಕಿಂತ ಹೆಚ್ಚಿನ ಆದಾಯ ಪಡೆಯುವ ವ್ಯಕ್ತಿಯು ನಿಗದಿತ ಸಮಯದೊಳಗೆ ಐಟಿ ರಿಟರ್ನ್ ಪಾವತಿಸದಿದ್ದರೆ 5 ಸಾವಿರ ದಂಡವನ್ನು ಪಾವತಿಸಬೇಕಾಗುತ್ತದೆ. ಇನ್ನು ಆಧಾರ್ ಪಾನ್ ಲಿಂಕ್ ಗೆ 1000 ದಂಡವನ್ನು ನೀಡಬೇಕಾಗುತ್ತದೆ. ಇನ್ನು ನೀವು ಈ ತಿಂಗಳಿನಲ್ಲಿ ಪಾನ್ ಆಧಾರ್ ಲಿಂಕ್ ಆಗದಿದ್ದರೆ ಒಟ್ಟಾಗಿ 6000 ದಂಡವನ್ನು ಪಾವತಿಸಬೇಕಾಗುತ್ತದೆ.