Pan Link: ಪಾನ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಎಚ್ಚರಿಕೆ, ಯಾವುದೇ ಮುಲಾಜಿಲ್ಲದೆ 10000 ರೂ ದಂಡ.
ಜೂನ್ 30 ರ ಒಳಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ಕಟ್ಟಬೇಕು 10,000 ರೂಪಾಯಿ ದಂಡ.
Pan And Aadhar Link Fines: ಕೆಲವು ತಿಂಗಳುಗಳ ಹಿಂದೆ ಆಧಾರ್ ಕಾರ್ಡ್ (Aadhar Card) ಹಾಗು ಪಾನ್ ಕಾರ್ಡ್ (Pan Card) ಲಿಂಕ್ ಸಂಬಂಧಿತ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿದವು. ಇನ್ನು ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೋಡಣೆಯ ದಿನಾಂಕವನ್ನು ಕೂಡ ವಿಸ್ತರಿಸಿತ್ತು.
ಇನ್ನು ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ ಸರ್ಕಾರ 1000 ದಂಡ ವಿಧಿಸಿತ್ತು. ಜೂನ್ 30 ರೊಳಗೆ ಪಾನ್ ಲಿಂಕ್ ಮಾಡದಿದ್ದರೆ ಪಿಂಚಣಿದಾರರಿಗೆ ಮತ್ತು ಹೆಚ್ಚಿನ ಹಣಕಾಸು ವ್ಯವಹಾರ ಮಾಡುವ ಜನರಿಗೆ ತೊಂದರೆ ಆಗಲಿದೆ.
ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಗೆ 1000 ದಂಡ
ಈ ಹಿಂದೆ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನವಾಗಿತ್ತು.ಆದರೆ ಜನಸಾಮಾನ್ಯರ ಕಷ್ಟವನ್ನು ಅರಿತು ಸರ್ಕಾರ ಈ ಗಡುವನ್ನು ಜೂನ್ 30 ರ ತನಕ ವಿಸ್ತರಿಸಿದೆ. ಆದರೆ ದಿನಾಂಕದ ಗಡುವನ್ನು ಮಾತ್ರ ವಿಸ್ತರಿಸಲಾಗಿದೆ.
1000 ದಂಡ ಪಾವತಿಸುವಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. ಇನ್ನು ಸಹ 1000 ಪಾವತಿಸಿ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ವಿನಾಯಿತಿ ಪಡೆದವರು ಆಧಾರ್ ಮತ್ತು ಪಾನ್ ಲಿಂಕ್ ಮಾಡುವ ಅಗತ್ಯವಿಲ್ಲ.
10,000 ರೂಪಾಯಿ ಉಳಿಸಲು ಈ ಕೆಲಸ ಮಾಡಿ
ಇನ್ನು ಜೂನ್ 30 ರೊಳಗೆ ಪಾನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಅದರ ನಂತರ 10000 ರೂಪಾಯಿ ದಂಡ ವಿಧಿಸಲಾಗುತ್ತದೆ. ನೀವು ಜೂನ್ 30 ರೊಳಗೆ ಪಾನ್ ಕಾರ್ಡ್ ಲಿಂಕ್ ಮಾಡಿದರೆ ಯಾವ ತೊಂದರೆಯು ಇರುವುದಿಲ್ಲ. ನೀವು 10000 ರೂಪಾಯಿಯನ್ನು ಉಳಿಸಬಹುದು.