Aadhar And Pan: ಇಂತಹ ಜನರು ಪಾನ್ ಕಾರ್ಡ್ ಲಿಂಕ್ ಮಾಡುವ ಅಗತ್ಯವಿಲ್ಲ, ಕೇಂದ್ರದ ಸರ್ಕಾರದ ಘೋಷಣೆ.

ಈ ಕೆಲವು ಜನರು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವ ಅಗತ್ಯ ಇಲ್ಲ ಎಂದು ಕೇಂದ್ರ ಸರ್ಕಾರ ಆದೇಶವನ್ನ ಹೊರಡಿಸಿದೆ.

Aadhar And Pan Link Latest Update: ಕೆಲವು ತಿಂಗಳುಗಳ ಹಿಂದೆ ಆಧಾರ್ ಕಾರ್ಡ್ (Aadhar Card) ಹಾಗು ಪಾನ್ ಕಾರ್ಡ್ (Pan Card) ಲಿಂಕ್ ಸಂಬಂಧಿತ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿದವು. ಇನ್ನು ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೋಡಣೆಯ ದಿನಾಂಕವನ್ನು ಕೂಡ ವಿಸ್ತರಿಸಿತ್ತು.

ಇನ್ನು ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ ಸರ್ಕಾರ 1000 ದಂಡ ವಿಧಿಸಿತ್ತು. ಜೂನ್ 30 ರೊಳಗೆ ಪಾನ್ ಲಿಂಕ್ ಮಾಡದಿದ್ದರೆ ಪಿಂಚಣಿದಾರರಿಗೆ ಮತ್ತು ಹೆಚ್ಚಿನ ಹಣಕಾಸು ವ್ಯವಹಾರ ಮಾಡುವ ಜನರಿಗೆ ತೊಂದರೆ ಆಗಲಿದೆ.

Aadhar And Pan Link Latest Update
Image Credit: timesnownews

ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಗೆ 1000 ದಂಡ
ಈ ಹಿಂದೆ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನವಾಗಿತ್ತು.ಆದರೆ ಜನಸಾಮಾನ್ಯರ ಕಷ್ಟವನ್ನು ಅರಿತು ಸರ್ಕಾರ ಈ ಗಡುವನ್ನು ಜೂನ್ 30 ರ ತನಕ ವಿಸ್ತರಿಸಿದೆ. ಆದರೆ ದಿನಾಂಕದ ಗಡುವನ್ನು ಮಾತ್ರ ವಿಸ್ತರಿಸಲಾಗಿದೆ.

1000 ದಂಡ ಪಾವತಿಸುವಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. ಇನ್ನು ಸಹ 1000 ಪಾವತಿಸಿ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ವಿನಾಯಿತಿ ಪಡೆದವರು ಆಧಾರ್ ಮತ್ತು ಪಾನ್ ಲಿಂಕ್ ಮಾಡುವ ಅಗತ್ಯವಿಲ್ಲ.

ಯಾರಿಗೆ ಪಾನ್ ಮತ್ತು ಆಧಾರ್ ಲಿಂಕ್ ಮಾಡುವ ಅಗತ್ಯವಿಲ್ಲ
*ಮೇ 2017 ರಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ ವಿನಾಯಿತಿ ವರ್ಗದ ಅಡಿಯಲ್ಲಿ ಯಾರು ಬರುತ್ತಾರೆ ಎಂಬ ವಿವರಗಳನ್ನು ನೀಡಲಾಗಿದೆ.

Join Nadunudi News WhatsApp Group

June 30 is the last date to link Aadhaar card and PAN, if not linked within this day, more fines will have to be paid.
Image Credit: housing

*ಅಸ್ಸಾಂ, ಮೇಘಾಲಯ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ವಾಸಿಸುವ ಜನರು.
*ಆದಾಯ ತೆರಿಗೆ ಕಾಯಿದೆ 1961 ರ ಪ್ರಕಾರ ಅನಿವಾಸಿ ಜನರು ಪಾನ್ ಮತ್ತು ಆಧಾರ್ ಲಿಂಕ್ ಮಾಡುವ ಅಗತ್ಯ ಇಲ್ಲ.
*80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಆಧಾರ್ ಪ್ಯಾನ್ ಲಿಂಕ್ ನ ಅವಶ್ಯಕತೆಯೂ ಮೇಲೆ ತಿಳಿಸಲಾದ ಯಾವುದೇ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ.

ಇನ್ನು ಆಧಾರ್ ಕಾರ್ಡ್ ಮತ್ತು ಪಾನ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನಾಂಕ ಆಗಿದ್ದು ಈ ದಿನದ ಒಳಗೆ ಲಿಂಕ್ ಮಾಡದೆ ಇದ್ದರೆ ಇನ್ನಷ್ಟು ಹೆಚ್ಚಿನ ದಂಡವನ್ನ ಕಟ್ಟಬೇಕು.

Join Nadunudi News WhatsApp Group