Minor Pan Card Rules: ಇಂತಹ ಮಕ್ಕಳಿಗೆ ಕಡ್ಡಾಯವಾಗಿ ಮಾಡಿಸಬೇಕು ಪಾನ್ ಕಾರ್ಡ್, ಪೋಷಕರಿಗೆ ಕೇಂದ್ರದ ಖಡಕ್ ಆದೇಶ.
ಅಪ್ರಾಪ್ತ ಮಕ್ಕಳಿಗೆ ಪಾನ್ ಕಾರ್ಡ್ ಅರ್ಜಿ ವಿಧಾನ ಹಾಗು ಬೇಕಾಗುವ ದಾಖಲೆಗಳ ವಿವರ.
Pan Card Compulsory For Minor’s: PAN ಕಾರ್ಡ್ ಸದ್ಯ ಮುಖ್ಯ ದಾಖಲೆಯಾಗಿದ್ದು, Income Tax Return ಅನ್ನು ಸಲ್ಲಿಸಬೇಕಾದರೆ PAN Card ಡಾಕ್ಯುಮೆಂಟ್ ಅಗತ್ಯವಾಗಿದೆ. ಇನ್ನು ಅಪ್ರಾಪ್ತ ವಯಸ್ಕರಿಗೂ PAN ಕಾರ್ಡ್ ಆದಾಯ ಇಲಾಖೆ ಅವಕಾಶ ನೀಡಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕೂಡ PAN ಕಾರ್ಡ್ ಮಾಡಬಹುದು.
ಏಕೆಂದರೆ ಕೆಲ ಸಮಯದ್ಲಲಿ ಪ್ರಾಪ್ತ ವಯ್ಸ್ಕರಿಗೂ ಕೂಡ ಪಾನ್ ಕಾರ್ಡ್ ಅಗತ್ಯವಾಗುತ್ತದೆ. ಅಪ್ರಾಪ್ತ ಮಕ್ಕಳಿಗೆ ಪಾನ್ ಕಾರ್ಡ್ ಅರ್ಜಿ ವಿಧಾನ ಹಾಗು ಬೇಕಾಗುವ ದಾಖಲೆಗಳ ಬಗ್ಗೆ ವಿವರ ಇಲ್ಲಿದೆ.
ಅಪ್ರಾಪ್ತ ಮಕ್ಕಳಿಗೂ PAN Card ಕಡ್ಡಾಯ
ಇನ್ನು ನಿಯಮಗಳ ಪ್ರಕಾರ ITR ಸಲ್ಲಿಕೆಗೆ ಆದಾಯ ಇಲಾಖೆ ಯಾವುದೇ ವಯಸ್ಸಿನ ಮಿತಿಯನ್ನು ಅಳವಡಿಸಿಲ್ಲ. ಅಪ್ರಾಪ್ತ ವಯಸ್ಸಿನ ಮಕ್ಕಳು ಮಾಸಿಕ 15,000 ರೂ. ಗಿಂತ ಹೆಚ್ಚು ಹಣ ಗಳಿಸಿದರೆ ಅಂತವ್ರು ITR ಸಲ್ಲಿಸಬೇಕಾಗುತ್ತದೆ. ITR ಸಲ್ಲಿಕೆಗೆ ಪಾನ್ ಕಾರ್ಡ್ ಮುಖ್ಯ. ಹೀಗಾಗಿ ಆದಾಯ ಇಲಾಖೆ ಪಾನ್ ಕಾರ್ಡ್ ಹೊಂದಲು ವಯಸ್ಸನು ನಿಗದಿಪಡಿಸಿಲ್ಲ.
ಇಂತಹ ಮಕ್ಕಳಿಗೆ ಕಡ್ಡಾಯವಾಗಿ ಮಾಡಿಸಬೇಕು ಪಾನ್ ಕಾರ್ಡ್
*ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಿದಾಗ.
*ಇನ್ನು ತಂದೆ ಅಥವಾ ತಾಯಿ ಹೂಡಿಕೆ ಮಾಡಿದರೆ, ಆ ಹೂಡಿಕೆಗೆ ಅಪ್ರಾಪ್ತ ಮಗುವನ್ನು ನಾಮಿನಿ ಮಾಡಿದಾಗ.
*ನಿಮ್ಮ ಮಗುವಿನ ಹೆಸರಿನಲ್ಲಿ ನೀವು ಬ್ಯಾಂಕ್ ಖಾತೆಯನ್ನು ತೆರೆಯಲು ಬಯಸಿದಾಗ.
*ಅಪ್ರಾಪ್ತರು ಮಾಸಿಕ ಗಳಿಕೆ ಮಾಡಿದಾಗ.
ಈ ರೀತಿಯಾಗಿ ಅಪ್ರಾಪ್ತ ಮಕ್ಕಳ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ
*ಅಪ್ರಾಪ್ತ ವಯಸ್ಸಿನ ಮಕ್ಕಳ ಪೋಷಕರು ಅವರ ಹೆಸರಿನಲ್ಲಿ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
* ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ Pan Card ಗೆ ಅರ್ಜಿ ಸಲ್ಲಿಸಲು ಮೊದಲು NSDL ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
*ಫಾರ್ಮ್ 49A ಅನ್ನು ಭರ್ತಿಮಾಡಲು ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
*ಅಪ್ರಾಪ್ತ ವಯಸ್ಸಿನ ಪ್ರಮಾಣಪತ್ರ ಮತ್ತು ಪೋಷಕರ ಫೋಟೋ ಸೇರಿದಂತೆ ಇತರ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಪೋಷಕರ ಸಹಿಯನ್ನು ಮಾತ್ರ ಅಪ್ಲೋಡ್ ಮಾಡಬೇಕಾಗುತ್ತದೆ.
*ಕೊನೆಯದಾಗಿ ರೂ. 107 ಪಾವತಿಯೊಂದಿಗೆ ಮುಂದುವರಿಯಿರಿ.
*ಸಲ್ಲಿಸು ಬಟನ್ ಕ್ಲಿಕ್ ಮಾಡಿ. ಸ್ವೀಕೃತಿ ಸಂಖ್ಯೆಯನ್ನು ಒದಗಿಸಲಾಗುವುದು, ಇದನ್ನು ಅಪ್ಲಿಕೇಶನ್ ನ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಬಳಸಬಹುದು.
*ಅರ್ಜಿ ಸಲ್ಲಿಕೆಯ 15 ದಿನಗಳ ನಂತರ ಪಾನ್ ಕಾರ್ಡ್ ಅನ್ನು ಪಡೆಯಬಹುದು.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು..?
*ಅಪ್ರಾಪ್ತರ ಜನ್ಮ ದಿನಾಂಕದ ಪುರಾವೆ (DOB)
*ಅಪ್ರಾಪ್ತ ವಯಸ್ಕರ ಪೋಷಕರ ವಿಳಾಸ ಮತ್ತು ಗುರುತಿನ ಪುರಾವೆ.
*ಅರ್ಜಿದಾರರ ವಿಳಾಸ ಮತ್ತು ಗುರುತಿನ ಪುರಾವೆ ಕೂಡ ಅಗತ್ಯವಿದೆ.
*ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್‌ಪೋರ್ಟ್, ಅಪ್ರಾಪ್ತ ವಯಸ್ಕರ ಪೋಷಕರ ಡ್ರೈವಿಂಗ್ ಲೈಸೆನ್ಸ್ ನಂತಹ ಯಾವುದೇ ದಾಖಲೆಯನ್ನು ಗುರುತಿನ ಪುರಾವೆಯಾಗಿ ಬಳಸಬಹುದು.