Pan Card: ಪಾನ್ ಕಾರ್ಡ್ ಇದ್ದವರಿಗೆ ಕೇಂದ್ರದ ಇನ್ನೊಂದು ಘೋಷಣೆ, ಈ ಕೆಲಸ ಮಾಡದಿದ್ದರೆ ಬ್ಯಾಂಕ್ ಖಾತೆ ಬಂದ್.
ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸದಿದ್ದವರಿಗೆ ಮಹತ್ವದ ಮಾಹಿತಿ ನೀಡಿದ ಸರ್ಕಾರ.
Pan Card Closed: ಇತ್ತೀಚಿಗೆ ಆಧಾರ್ ಕಾರ್ಡ್ ನ ಜೊತೆಗೆ ಪಾನ್ ಕಾರ್ಡ್ (Pan Card) ಮುಖ್ಯ ದಾಖಲೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇನ್ನು ತೆರಿಗೆ ಪಾವತಿದಾರರಿಗೆ ಪಾನ್ ಕಾರ್ಡ್ ಅಗತ್ಯವಾಗಿರುತ್ತದೆ.
ಈಗಾಗಲೇ ಸರ್ಕಾರ ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ (Pan Aadhar Link) ಮಾಡಲು ಆದೇಶವನ್ನು ನೀಡಿದೆ. ಪಾನ್ ಹಾಗೂ ಆಧಾರ್ ಲಿಂಕ್ ಗೆ ಸರ್ಕಾರ ನೀಡಿರುವ ಗಡುವು ಈಗಾಗಲೇ ಮುಕ್ತಾಯಗೊಂಡಿದೆ. ಇನ್ನು ಪಾನ್ ಆಧಾರ್ ನೊಂದಿಗೆ ಲಿಂಕ್ ಆಗದಿದ್ದವರ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆ.
ನಿಷ್ಕ್ರಿಯವಾಗಿದೆ ಇಂತಹ ಜನರ ಪಾನ್ ಕಾರ್ಡ್
ಸರ್ಕಾರ ಜನರಿಗೆ ಈಗಾಗಲೇ ಪಾನ್ ಹಾಗೂ ಆಧಾರ್ ಜೋಡಣೆ ಮಾಡುವಂತೆ ಆದೇಶ ನೀಡಿದೆ. ಈ ಹಿಂದೆ ಮಾರ್ಚ್ 31 2023 ಕೊನೆಯ ದಿನಾಂಕವನ್ನು ಆಧಾರ್ ಪಾನ್ ಜೋಡಣೆಗೆ ನಿಗದಿಪಡಿಸಿತ್ತು. ಆದರೆ ಸಾಕಷ್ಟು ಜನರ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದ ಕಾರಣ ಗಡುವನ್ನು ವಿಸ್ತರಿಸಿತ್ತು. ಇನ್ನು ಪಾನ್ ಆಧಾರ್ ಲಿಂಕ್ ಗೆ ಮಾರ್ಚ್ 31 ರಿಂದ ಜೂನ್ 30 ರ ತನಕ ಗಡುವನ್ನು ವಿಸ್ತರಿಸಿದೆ. ಇನ್ನು ಜೂನ್ 30 ಮುಗಿದರೂ ಕೂಡ ನಿಮ್ಮ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದರೆ ನಿಮ್ಮ ಪಾನ್ ಕಾರ್ಡ್ ಅನ್ನು ಸರ್ಕಾರ ನಿಷ್ಕ್ರಿಯಗೊಳಿಸಿದೆ.
ಪಾನ್ ಕಾರ್ಡ್ ನಿಷ್ಕ್ರಿಯವಾದರೆ ಯಾವ ತೊಂದರೆ ಎದುರಾಗುತ್ತದೆ
ಆರ್ಥಿಕ ಚಟುವಟಿಕೆಗಳಿಗೆ ಪಾನ್ ಕಾರ್ಡ್ ಅಗತ್ಯವಾಗಿದೆ. ಬ್ಯಾಂಕ್ ಖಾತೆ, ನಿಗದಿತ ಠೇವಣಿಯ ಹೂಡಿಕೆ, ತೆರಿಗೆ ಪಾವತಿಗೆ ಪಾನ್ ಕಾರ್ಡ್ ಮುಖ್ಯವಾಗಿರುತ್ತದೆ. ನಿಮ್ಮ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದರೆ ನೀವು ಬಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಹತ್ತು ಅಂಕಿಗಳಿರುವ ಪಾನ್ ಕಾರ್ಡ್ ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ. ಹಣಕಾಸೇತರ ಮಾಹಿತಿ ಈ ಪಾನ್ ಕಾರ್ಡ್ ನಲ್ಲಿ ದಾಖಲಾಗಿರುತ್ತದೆ. ಇನ್ನು ಪಾನ್ ಕಾರ್ಡ್ ನಲ್ಲಿ ಇರುವ 10 ಸಂಖ್ಯೆಗಳು ಕೂಡ ಎಲ್ಲ ರೀತಿಯ ಮಾಹಿತಿಯನ್ನು ಹೊಂದಿರುತ್ತದೆ. ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅದು ತೆರಿಗೆ ಪಾವತಿದಾರರಿಗೆ ಬಾರಿ ನಷ್ಟವನ್ನು ನೀಡುತ್ತದೆ.
ಆದಾಯ ತೆರಿಗೆ ನಿಯಮದ ಪ್ರಕಾರ, ಒಬ್ಬ ವ್ಯಕ್ತಿಯ ಪಾನ್ ಕಾರ್ಡ್ ನಿಷ್ಕ್ರಿಯವಾದರೆ ಆ ವ್ಯಕ್ತಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಆದಾಯ ರಿಟರ್ನ್ ಬಾಕಿ ಪಾವತಿ ಕೂಡ ಕಷ್ಟವಾಗುತ್ತದೆ. ವ್ಯಕ್ತಿಯ ಪಾನ್ ಕಾರ್ಡ್ ನಿಷ್ಕ್ರಿಯವಾದರೆ ಆತನ ಬ್ಯಾಂಕ್ ಖಾತೆಯಲ್ಲಿನ ವಹಿವಾಟಿಗೆ ಯಾವುದೇ ಮಿತಿ ಇರುವುದಿಲ್ಲ. ಬ್ಯಾಂಕ್ ವಹಿವಾಟು ಮುಚ್ಚುವುದಿಲ್ಲ ಆದರೆ ನಿಮ್ಮ ಮಾಸಿಕ ವೇತನ ಖಾತೆಗೆ ಜಮಾ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಸಂಬಳದ ಮೂಲದಲ್ಲಿ ತೆರಿಗೆ ಕಡಿತವನ್ನು ಪಡೆಯಲು ಸಾಧ್ಯವಾಗುವುದಿಲ್ಲ.