Pan Card Download: ಆಧಾರ್ ನಂಬರ್ ಮೂಲಕ ಪಾನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಆಧಾರ್ ನಂಬರ್ ಮೂಲಕ ಪಾನ್ ಕಾರ್ಡ್ ಅನ್ನು ಮನೆಯಲ್ಲಿಯೇ ಕುಳಿತುಕೊಂಡು ಪಡೆದುಕೊಳ್ಳಬಹುದಾಗಿದೆ.

Pan Card Download By Using Aadhaar Number: ವ್ಯಕ್ತಿಯ ವೈಯಕ್ತಿಕ ದಾಖಲೆಯಲ್ಲಿ Aadhaar Card ಮತ್ತು Pan Card ಆಗಿ ಮುಖ್ಯ ದಾಖಲೆಯಾಗಿದೆ. ಈ ಕಾರಣಕ್ಕೆ ಸರ್ಕಾರ ಎರಡು ದಾಖಲೆಗಳಿಗೂ Link ಮಾಡಿಸಲು ಸೂಚಿಸಿದೆ. ಇನ್ನು ತೆರಿಗೆ ಪಾವತಿಸುವ ಪ್ರತಿಯೊಬ್ಬರೂ ಕೊಡ ಆಧಾರ್ ಕಾರ್ ಅನ್ನು ಹೊಂದುವುದು ಕಡ್ಡಾಯ.

ಯಾವುದೇ ಅಕೌಂಟ್ ತೆರೆಯಲು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸೇರಿದಂತೆ ಯಾವುದೇ ಕೆಲಸಕ್ಕಾದರೂ ಸದ್ಯ Pan ಕಾರ್ಡ್ ಕೂಡ ಅಗತ್ಯವಾಗಿದೆ. ಇದೀಗ ಪಾನ್ ಕಾರ್ಡ್ ಕುರಿತಾಗಿ ಒಂದೊಳ್ಳೆ ಸುದ್ದಿ ಹೊರಬಿದ್ದಿದೆ. ನೀವು ನಿಮ್ಮ ಪಾನ್ ಕಾರ್ಡ್ ಅನ್ನು ಮನೆಯಲ್ಲಿಯೇ ಕುಳಿತುಕೊಂಡು ಪಡೆದುಕೊಳ್ಳಬಹುದಾಗಿದೆ.

Pan Card Download By Using Aadhaar Number
Image Credit: Indiafilings

ಪಾನ್ ಕಾರ್ಡ್ ಕಳೆದುಹೋದರೆ ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ
ಹೌದು, ಕೆಲವೊಮ್ಮೆ ನಾವು ಪಾನ್ ಕಾರ್ಡ್ ಅನ್ನು ಕಳೆದುಕೊಂಡಿರುತ್ತವೆ. ಅಥವಾ ಯಾವುದಾದರು ಕೆಲಸಕ್ಕೆ ಬಂದ ಸಮಯಲ್ಲಿ ಅಲ್ಲಿ ಪಾನ್ ಕಾರ್ಡ್ ಅಗತ್ಯವಿದ್ದು, ನಾವು ಪಾನ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗದೆ ಇರುವ ಸಮಯ ಕೂಡ ಬರುತ್ತದೆ. ಈ ವೇಳೆ ಚಿಂತಿಸುವ ಅಗತ್ಯವಿಲ್ಲ.

ಏಕೆಂದರೆ ನೀವು ಸುಲಭವಾಗಿ ಆಧಾರ್ ನಂಬರ್ ಅನ್ನು ಬಳಸಿಕೊಂಡು ಕ್ಷಣಾರ್ಧದಲ್ಲಿ ನಿಮ್ಮ ಪಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲಬಹುದು. ಅದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಆಧಾರ್ ನಂಬರ್ ಮೂಲಕ ಪಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Pan Card And Aadhar Card
Image Credit: Businesstoday

ಆಧಾರ್ ನಂಬರ್ ಮೂಲಕ ಪಾನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ…?
•ಮೊದಲಿಗೆ ಆದಾಯ ತೆರಿಗೆ ವೆಬ್‌ ಸೈಟ್ https://www.incometax.gov.in/iec/foportal ಗೆ ಲಾಗಿನ್ ಮಾಡಿ.

Join Nadunudi News WhatsApp Group

•ನಂತರ ‘Instant E PAN’ ಮೇಲೆ ಕ್ಲಿಕ್ ಮಾಡಿ.

•ಇದಾದ ಮೇಲೆ ‘ಹೊಸ ಇ ಪ್ಯಾನ್’ ಕ್ಲಿಕ್ ಮಾಡಿ.

•ಈಗ ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ.

•ನಿಮ್ಮ ಪ್ಯಾನ್ ಸಂಖ್ಯೆ ನಿಮಗೆ ನೆನಪಿಲ್ಲದಿದ್ದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.

•ಇಲ್ಲಿ ಹಲವು ನಿಯಮಗಳು ಮತ್ತು ಷರತ್ತುಗಳನ್ನು ನೀಡಲಾಗಿದೆ, ಅವುಗಳನ್ನು

•ಎಚ್ಚರಿಕೆಯಿಂದ ಓದಿ ಮತ್ತು ನಂತರ ‘ಸ್ವೀಕರಿಸಿ’ ಕ್ಲಿಕ್ ಮಾಡಿ.

PAN Card Latest News Update
Image Credit: News 18

•ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ನಮೂದಿಸಿ.

•ಈಗ ನೀಡಿರುವ ವಿವರಗಳನ್ನು ಓದಿದ ನಂತರ ದೃಢೀಕರಿಸಿ.

•ಈಗ ನಿಮ್ಮ PAN ಅನ್ನು PDF ಫಾರ್ಮ್ಯಾಟ್‌ ನಲ್ಲಿ ನಿಮ್ಮ ಇಮೇಲ್ ಐಡಿಗೆ

•ಕಳುಹಿಸಲಾಗುತ್ತದೆ.

•ನಿಮ್ಮ ‘ಇ-ಪ್ಯಾನ್’ ಅನ್ನು ಅಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

Join Nadunudi News WhatsApp Group