Ads By Google

Pan Card: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪಾನ್ ಕಾರ್ಡ್ ಮಾಡಿಸುವುದು ಹೇಗೆ…? ಇಲ್ಲಿದೆ ಡೀಟೇಲ್ಸ್.

Pan Surname

Image Source: India Today

Ads By Google

Pan Card For Minors: ದೇಶದಲ್ಲಿ ಆಧಾರ್ ಕಾರ್ಡ್ ನಷ್ಟೇ ಪಾನ್ ಕಾರ್ಡ್ (Pan Card) ಕೊಡ ಮುಖ್ಯ ದಾಖಲೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ರೀತಿಯ ಸರ್ಕಾರೀ ಅಥವಾ ಸರ್ಕಾರೇತರ ಕೆಲಸಗಳಿಗೆ ಪಾನ್ ಕಾರ್ಡ್ ಅಗತ್ಯವಾಗಿದೆ.

ಇನ್ನು ಅಪ್ರಾಪ್ತ ವಯಸ್ಕರಿಗೂ PAN ಕಾರ್ಡ್ ಆದಾಯ ಇಲಾಖೆ ಅವಕಾಶ ನೀಡಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕೂಡ PAN ಕಾರ್ಡ್ ಮಾಡಬಹುದು. ಏಕೆಂದರೆ ಕೆಲ ಸಮಯದಲ್ಲಿ ಅಪ್ರಾಪ್ತ ವಯಸ್ಸಿನವರಿಗೂ ಕೂಡ ಪಾನ್ ಕಾರ್ಡ್ ಅಗತ್ಯವಾಗುತ್ತದೆ. ಅಪ್ರಾಪ್ತ ಮಕ್ಕಳಿಗೆ ಪಾನ್ ಕಾರ್ಡ್ ಅರ್ಜಿ ವಿಧಾನ ಹಾಗು ಬೇಕಾಗುವ ದಾಖಲೆಗಳ ಬಗ್ಗೆ ಮಾಹಿತಿ ತಿಳಿಯೋಣ.

Image Credit: Herzindagi

ಅಪ್ರಾಪ್ತ ಮಕ್ಕಳಿಗೂ PAN Card ಮಾಡಿಸಬಹುದೇ…?
ಇನ್ನು ನಿಯಮಗಳ ಪ್ರಕಾರ ITR ಸಲ್ಲಿಕೆಗೆ ಆದಾಯ ಇಲಾಖೆ ಯಾವುದೇ ವಯಸ್ಸಿನ ಮಿತಿಯನ್ನು ಅಳವಡಿಸಿಲ್ಲ. ಅಪ್ರಾಪ್ತ ವಯಸ್ಸಿನ ಮಕ್ಕಳು ಮಾಸಿಕ 15,000 ರೂ. ಗಿಂತ ಹೆಚ್ಚು ಹಣ ಗಳಿಸಿದರೆ ಅಂತವರು ITR ಸಲ್ಲಿಸಬೇಕಾಗುತ್ತದೆ. ITR ಸಲ್ಲಿಕೆಗೆ ಪಾನ್ ಕಾರ್ಡ್ ಮುಖ್ಯ. ಹೀಗಾಗಿ ಆದಾಯ ಇಲಾಖೆ ಪಾನ್ ಕಾರ್ಡ್ ಹೊಂದಲು ವಯಸ್ಸನು ನಿಗದಿಪಡಿಸಿಲ್ಲ. ಅಪ್ರಾಪ್ತ ವಯಸ್ಕರು ಕೂಡ ಪಾನ್ ಕಾರ್ಡ್ ಅನ್ನು ಹೊಂದಬಹುದಾಗಿದೆ.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು..?
*ಅಪ್ರಾಪ್ತರ ಜನ್ಮ ದಿನಾಂಕದ ಪುರಾವೆ (DOB)

*ಅಪ್ರಾಪ್ತ ವಯಸ್ಕರ ಪೋಷಕರ ವಿಳಾಸ ಮತ್ತು ಗುರುತಿನ ಪುರಾವೆ.

*ಅರ್ಜಿದಾರರ ವಿಳಾಸ ಮತ್ತು ಗುರುತಿನ ಪುರಾವೆ ಕೂಡ ಅಗತ್ಯವಿದೆ.

*ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್‌ ಪೋರ್ಟ್, ಅಪ್ರಾಪ್ತ ವಯಸ್ಕರ ಪೋಷಕರ ಡ್ರೈವಿಂಗ್ ಲೈಸೆನ್ಸ್‌ ನಂತಹ ಯಾವುದೇ  ದಾಖಲೆಯನ್ನು ಗುರುತಿನ ಪುರಾವೆಯಾಗಿ ಬಳಸಬಹುದು.

Image Credit: Paytm

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪಾನ್ ಕಾರ್ಡ್ ಮಾಡಿಸುವುದು ಹೇಗೆ…?
•ಅಪ್ರಾಪ್ತ ವಯಸ್ಸಿನ ಮಕ್ಕಳ ಪೋಷಕರು ಅವರ ಹೆಸರಿನಲ್ಲಿ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.

•ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ Pan Card ಗೆ ಅರ್ಜಿ ಸಲ್ಲಿಸಲು ಮೊದಲು NSDL ನ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡಿ

•ಫಾರ್ಮ್ 49A ಅನ್ನು ಭರ್ತಿಮಾಡಲು ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.

•ಅಪ್ರಾಪ್ತ ವಯಸ್ಸಿನ ಪ್ರಮಾಣಪತ್ರ ಮತ್ತು ಪೋಷಕರ ಫೋಟೋ ಸೇರಿದಂತೆ ಇತರ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಪೋಷಕರ ಸಹಿಯನ್ನು ಮಾತ್ರ ಅಪ್ಲೋಡ್ ಮಾಡಬೇಕಾಗುತ್ತದೆ.

•ಕೊನೆಯದಾಗಿ ರೂ. 107 ಪಾವತಿಯೊಂದಿಗೆ ಮುಂದುವರಿಯಿರಿ.

•ಸಲ್ಲಿಸು ಬಟನ್ ಕ್ಲಿಕ್ ಮಾಡಿ. ಸ್ವೀಕೃತಿ ಸಂಖ್ಯೆಯನ್ನು ಒದಗಿಸಲಾಗುವುದು, ಇದನ್ನು ಅಪ್ಲಿಕೇಶನ್‌ ನ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಬಳಸಬಹುದು.

•ಅರ್ಜಿ ಸಲ್ಲಿಕೆಯ 15 ದಿನಗಳ ನಂತರ ಪಾನ್ ಕಾರ್ಡ್ ಅನ್ನು ಪಡೆಯಬಹುದು.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in