Pan Card Inactive: ರಾತ್ರೋರಾತ್ರಿ ಇಂತಹ ಜನರ ಪಾನ್ ಕಾರ್ಡ್ ಕ್ಲೋಸ್ ಮಾಡಿದ ಕೇಂದ್ರ ಸರ್ಕಾರ, ಕೇಂದ್ರದ ದಿಟ್ಟ ನಿರ್ಧಾರ.

ದೇಶದಲ್ಲಿ ನಿಷ್ಕ್ರಿಯಗೊಂಡ ಪಾನ್ ಕಾರ್ಡ್ ನ ವಿವರದ ಬಗ್ಗೆ RTI ಮಾಹಿತಿ ನೀಡಿದೆ.

PAN Card Inactive In India: ಸದ್ಯ ದೇಶದಲ್ಲಿ Aadhaar Card ಹಾಗೂ Pan Card ಎಷ್ಟು ಮುಖ್ಯ ದಾಖಲೆಯಾಗಿದೆ ಎನ್ನುವ ಬಗ್ಗೆ ಈಗಾಗಲೇ ಎಲ್ಲರ ಗಮನಕ್ಕೆ ಬಂದಿರಬಹುದು. ಸದ್ಯ ಆಧಾರ್ ನಷ್ಟೇ ಪಾನ್ ಕಾರ್ಡ್ ಕೂಡ ಮುಖ್ಯ ದಾಖಲೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಆಧಾರ್ ಮಾಹಿತಿ ಇಲ್ಲದ ಸಮಯದಲ್ಲಿ ಆಧಾರ್ ಸ್ಥಾನವನ್ನು ಪಾನ್ ಕಾರ್ಡ್ ತುಂಬುತ್ತದೆ ಎನ್ನಬಹುದು. ಇನ್ನು ವ್ಯಕ್ತಿಯ ವೈಯಕ್ತಿಕ ದಾಖಲೆಯೊಂದಿಗೆ Aadhaar Card ಅನ್ನು ಲಿಂಕ್ ಮಾಡಲು ಸರ್ಕಾರ ಈಗಾಗಲೇ ಸೂಚಕ ನೀಡಿದೆ. ಸರ್ಕಾರದ ಯಾವುದೇ ಯೋಜನೆಯ ಲಾಭವನ್ನು ನೇರವಾಗಿ ಪಡೆಯಲು ವೈಯಕ್ತಿಕ ದಾಖಲೆಗಳಿಗೆ ಆಧಾರ್ ಲಿಂಕ್ ಮುಖ್ಯ.

PAN Card Latest Update
Image Credit: Navi

Aadhaar Pan Link
ಇನ್ನು ಮುಖ್ಯವಾಗಿ ಕೇಂದ್ರ ಸರ್ಕಾರ Permanent Account Number ಅಂದರೆ PAN ನ ದಾಖಲೆಗೆ Aadhaar Link ಮಾಡಲು ಈಗಾಗಲೇ ಜನ ಸಾಮಾನ್ಯರಿಗೆ ಎಚ್ಚರಿಕೆ ನೀಡಿದೆ. ಆದಾಯ ತೆರಿಗೆ ಪಾವತಿದಾರರಿಗೆ Pan Card ಅಗತ್ಯ ದಾಖಲೆಯಾಗಿರುವುದರಿಬಂದ ಆಧಾರ್ ಲಿಂಕ್ ಕಡ್ಡಾಯವಾಗಿದೆ. ಇನ್ನು ಆಧಾರ್ ಪಾನ್ ಲಿಂಕ್ ಆಗದೆ ಇದ್ದ ಸಂದರ್ಭದಲ್ಲಿ ಆತ ಪಾನ್ ಕಾರ್ಡ್ ನ ಯಾವುದೇ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎನ್ನಬಹುದು.

ಈಗಾಗಲೇ ಕೇಂದ್ರ ಸರ್ಕಾರ Aadhaar ಮತ್ತು Pan ಲಿಂಕ್ ಗೆ ಜುಲೈ 31 2023 ಕೊನೆಯ ದಿನಾಂಕವನ್ನು ನಿಗದಿಪಡಿಸಿತ್ತು. ಸರ್ಕಾರ ನಿಗದಿಪಡಿಸಿರುವ ಸಮಯದ ನಂತರ ಆಧಾರ್ ಲಿಂಕ್ ಮಾಡಿದ ಪ್ರತಿಯೊಬ್ಬರೂ ಕೂಡ 1000 ರೂ. ದಂಡವನ್ನು ಪಾವತಿಸಿ ಪಾನ್ ಆಧಾರ್ ಲಿಂಕ್ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಇನ್ನು ಸರ್ಕಾರ ಪಾನ್ ಆಧಾರ್ ಗೆ ಮತ್ತೆ ಮತ್ತೆ ಅವಕಾಶವನ್ನು ನೀಡಿದ್ದರೂ ಕೂಡ ಲಕ್ಷಾಂತರ ಜನರು ಇನ್ನು ಕೂಡ ಪಾನ್ ಆಧಾರ್ ಲಿಂಕ್ ಮಾಡದೆ ಇರುವುದು ಸದ್ಯ ಸರ್ಕಾರದ ಗಮನಕ್ಕೆ ಬಂದಿದೆ.

PAN Card Inactive In India
Image Credit: Moneylife

ದೇಶದಲ್ಲಿ 11.5 ಕೋಟಿ ಪಾನ್ ಕಾರ್ಡ್ ನಿಷ್ಕ್ರಿಯ
ಪಾನ್ ಲಿಂಕ್ ಮಾಡದವರ ಪಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಿದ್ದು, ದೇಶದಲ್ಲಿ ನಿಷ್ಕ್ರಿಯಗೊಂಡ ಪಾನ್ ಕಾರ್ಡ್ ನ ವಿವರದ ಬಗ್ಗೆ RTI ಮಾಹಿತಿ ನೀಡಿದೆ. ದೇಶದಲ್ಲಿ ಸುಮಾರು 70.24 ಕೋಟಿ ಜನರು ಪಾನ್ ಕಾರ್ಡ್ ದಾಖಲೆಯನ್ನು ಹೊಂದಿದ್ದಾರೆ. ಅದರಲ್ಲಿ 57.27 ಕೋಟಿ ಮಂದಿ ಮಾತ್ರ Aadhaar Pan Link ಪೂರ್ಣಗೊಳಿಸಿದ್ದಾರೆ. ಇನ್ನುಳಿದ 12 ಕೋಟಿಗೂ ಹೆಚ್ಚಿನ ಜನರು ತಮ್ಮ ಪಾನ್ ಕಾರ್ಡ್ ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಿಲ್ಲ. ಈಗಾಗಲೇ ಆಧಾರ್ ಲಿಂಕ್ ಮಾಡದ 11.5 ಕೋಟಿ ಪಾನ್ ಕಾರ್ಡ್ ನಿಷ್ಕ್ರಿಯಗೊಳಿಸಿರುವದಾಗಿ RTI ವಿವರ ನೀಡಿದೆ.

Join Nadunudi News WhatsApp Group

Join Nadunudi News WhatsApp Group