Pan: ಪಾನ್ ಕಾರ್ಡ್ ಇದ್ದವರಿಗೆ ಕೇಂದ್ರದ ಇನ್ನೊಂದು ಘೋಷಣೆ, ಈ ತಪ್ಪು ಮಾಡಿದ್ರೆ ಬ್ಯಾಂಕ್ ಖಾತೆ ಬಂದ್ ಮತ್ತು ದಂಡ.
ಪಾನ್ ಕಾರ್ಡ್ ಇದ್ದವರ ಖಾತೆಯಲ್ಲಿ ಈ ತಪ್ಪು ಕಂಡುಬಂದರೆ ಅವರ ಬ್ಯಾಂಕ್ ಖಾತೆ ಬಂದ್ ಆಗಲಿದೆ.
Pan Card Latest Update: ಶಾಶ್ವತ ಖಾತೆ ಸಂಖ್ಯೆ ( Permanent Account Number ) ಅಂದರೆ ಪಾನ್ ಕಾರ್ಡ್ ಇದು ಎಲ್ಲಾ ರೀತಿಯ ಹಣಕಾಸು ವ್ಯವಹಾರಗಳಿಗೆ ಮುಖ್ಯವಾದ ದಾಖಲೆಯಾಗಿದೆ. ದೇಶದಲ್ಲಿನ ಜನರಿಗೆ ಆಧಾರ್ ಕಾರ್ಡ್ ಎಷ್ಟು ಅಗತ್ಯವೋ ಹಾಗೆ ಪಾನ್ ಕಾರ್ಡ್ ಕೂಡ ಬಹಳ ಮುಖ್ಯವಾದ ದಾಖಲೆಯಾಗಿದೆ. ತೆರಿಗೆ ಪಾವತಿಸುವವರು ಪಾನ್ ಕಾರ್ಡ್ ಅನ್ನು ಅಗತ್ಯವಾಗಿ ಹೊಂದಿರುತ್ತಾರೆ. ಹಾಗೆ ಪಾನ್ ಕಾರ್ಡ್ (Pan Card)ಜೊತೆ ಆಧಾರ್ ಕಾರ್ಡ್ (Aadhar Card)ಲಿಂಕ್ ಆಗಿರುದು ಕಡ್ಡಾಯವಾಗಿದೆ.
ನಿಷ್ಕ್ರಿಯವಾಗಿರಬಹುದು ಇಂತವರ ಪಾನ್ ಕಾರ್ಡ್
ಸರ್ಕಾರ ಜನರಿಗೆ ಈಗಾಗಲೇ ಪಾನ್ ಹಾಗೂ ಆಧಾರ್ ಜೋಡಣೆ ಮಾಡುವಂತೆ ಆದೇಶ ನೀಡಿದೆ. ಈ ಹಿಂದೆ ಮಾರ್ಚ್ 31 2023 ಕೊನೆಯ ದಿನಾಂಕವನ್ನು ಸರ್ಕಾರ ಆಧಾರ್ ಪಾನ್ ಜೋಡಣೆಗೆ ನಿಗದಿಪಡಿಸಿತ್ತು. ಆದರೆ ಸಾಕಷ್ಟು ಜನರ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದ ಕಾರಣ ಗಡುವನ್ನು ವಿಸ್ತರಿಸಿತ್ತು.
ಇನ್ನು ಪಾನ್ ಆಧಾರ್ ಲಿಂಕ್ ಗೆ ಮಾರ್ಚ್ 31 ರಿಂದ ಜೂನ್ 30 ರ ತನಕ ಗಡುವನ್ನು ವಿಸ್ತರಿಸಿದೆ. ಇನ್ನು ಜೂನ್ 30 ಮುಗಿದರು ಕೂಡ ಕೆಲವರ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗಿಲ್ಲ ಅಂತವರ ಕಾರ್ಡ್ ಅನ್ನು ಸರ್ಕಾರ ನಿಷ್ಕ್ರಿಯಗೊಳಿಸಬಹುದು.
ಪಾನ್ ಬಹುತೇಕ ಕೆಲಸಕ್ಕೆ ಅಗತ್ಯ
ಹಣಕಾಸು ಚಟುವಟಿಕೆಗಳಿಗೆ ಪಾನ್ ಕಾರ್ಡ್ ಅಗತ್ಯವಾಗಿರುತ್ತದೆ. ಇದು ವ್ಯಕ್ತಿ ಅಥವಾ ಕಂಪನಿಯ ತೆರಿಗೆಯ ಹೊಣೆಗಾರಿಕೆಯನ್ನು ನಿರ್ವಹಿಸುತ್ತದೆ. ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವಾಗ ಪಾನ್ ಕಾರ್ಡ್ ಅತ್ಯಗತ್ಯವಾಗಿರುತ್ತದೆ. ಏಕೆಂದರೆ ಇದು ತೆರಿಗೆ (Tax) ಪಾವತಿಸುವ ಸಮಯದಲ್ಲಿ ನೆಡೆಯುವ ವಂಚನೆಗಳನ್ನು ಕಡಿಮೆ ಮಾಡುತ್ತದೆ. ಇದನ್ನು ನೀವು ನಿಮ್ಮೊಂದಿಗೆ ತೆಗೆದುಕೊಂಡು ಹೋಗುದು ಸ್ವಲ್ಪ ಅಪಾಯಕಾರಿ. ನೀವು ಕಳೆದುಕೊಂಡರೆ ಮತ್ತು ಅದು ಬೇರೆಯವರಿಗೆ ಸಿಕ್ಕರೆ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಈ ಒಂದು ತಪ್ಪು ಮಾಹಿತಿ ನೀಡಿದರೆ ನಿಮ್ಮ ಖಾತೆ ಸಂಪೂರ್ಣ ಖಾಲಿ
ಪಾನ್ ಕಾರ್ಡ್ ಬಹು ಮುಖ್ಯವಾದ ದಾಖಲೆಯಾಗಿದೆ. ಇದರ 10 ಅಂಕಿಯ ಸಂಖ್ಯೆಯನ್ನು ಬಹಳ ಜಾಗರೂಕತೆಯಿಂದ ಭರ್ತಿ ಮಾಡಬೇಕು. ಹಾಗೆ ಒಬ್ಬ ವ್ಯಕ್ತಿ ಒಂದು ಪಾನ್ ಕಾರ್ಡ್ ಅನ್ನು ಮಾತ್ರ ಹೊಂದಿರಬೇಕು. ಒಂದಕ್ಕಿಂತ ಹೆಚ್ಚಿನ ಪಾನ್ ಕಾರ್ಡ್ ಹೊಂದಿದ್ದರೆ ಆದಾಯ ತೆರಿಗೆ ಇಲಾಖೆ ಪಾನ್ ಕಾರ್ಡ್ ಅನ್ನು ರದ್ದು ಮಾಡುತ್ತದೆ ಹಾಗೆ ದಂಡವನ್ನು ವಿಧಿಸುತ್ತದೆ. ಇದಲ್ಲದೆ ಪಾನ್ ಕಾರ್ಡ್ ನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ 10,000 ದಂಡದ ಜೊತೆಗೆ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಬಹುದು.