Pan Card News: ಇನ್ನುಮುಂದೆ ಈ ಬ್ಯಾಂಕಿನ ಈ ಕೆಲಸ ಮಾಡಲು ಪಾನ್ ಕಾರ್ಡ್ ಅಗತ್ಯವಿಲ್ಲ, ಹೊಸ ನಿಯಮ ಜಾರಿಗೆ.

ಇನ್ನುಮುಂದೆ ಬ್ಯಾಂಕಿನಲ್ಲಿ ಈ ಕೆಲಸಗಳಿಗೆ ಪಾನ್ ಕಾರ್ಡ್ ಅಗತ್ಯ ಇಲ್ಲ.

Pan Card Latest Update: ವೈಯಕ್ತಿಕ ಮಾಹಿತಿಯಲ್ಲಿ ಒಂದಾದ Pan Card ಅನ್ನು ಎಲ್ಲರು ಅಗತ್ಯವಾಗಿ ಹೊಂದಿರಬೇಕಾಗುತ್ತದೆ. ಸದ್ಯ Pan Card ನ ಮಾಹಿತಿ ನೀಡದಿದ್ದರೆ ಯಾವುದೇ ಕೆಲಸ ಕೂಡ ಪೂರ್ಣಗೊಳ್ಳುವುದು ಎಂದರು ತಪ್ಪಾಗಲಾರದು. Pan Card ಇತ್ತೀಚೆಗೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಇನ್ನು ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಪಾನ್ ಕಾರ್ಡ್ ಅನ್ನು Aadhaar ನೊಂದಿಗೆ ಲಿಂಕ್ ಮಾಡುವಂತೆ ಈಗಾಗಲೇ ಸರ್ಕಾರ ಸೂಚನೆ ನೀಡಿದೆ.

Pan Card Latest Updates
Image Credit: Paytm

ಬ್ಯಾಂಕ್ ಅಕೌಂಟ್ ತೆರೆಯಲು ಪಾನ್ ಕಾರ್ಡ್ ಕಡ್ಡಾಯ
ಇನ್ನು ತೆರಿಗೆ ಪವತಿದಾರರಿಗೆ Pan Card ಮುಖ್ಯವಾಗಿದೆ. ತೆರಿಗೆ ಪಾವತಿಯ ಜೊತೆಗೆ ಯಾರೇ ಹೊಸ Bank Account ಅನ್ನು ತೆರೆಯಬೇಕಿದ್ದರು ಅವರು ಪಾನ್ ಕಾರ್ಡ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಹೋದಾಗ ಪಾನ್ ಕಾರ್ಡ್ ಇಲ್ಲ ಎಂದರೆ ಹೊಸ ಪಾನ್ ಕಾರ್ಡ್ ಮಾಡಿಸಿ ನಂತರ ಖಾತೆ ತೆರೆಯುವಂನಂತೆ ಹೇಳುತ್ತಾರೆ.

ಸದ್ಯಕ್ಕೆ ಬ್ಯಾಂಕ್ ಅಕೌಂಟ್ ತೆರೆಯಲು ಪಾನ್ ಕಾರ್ಡ್ ಕಡ್ಡಾಯವಾಗಿದೆ. ಆದಾಗ್ಯೂ ಕೆಲವೊಂದು ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಪಾನ್ ಕಾರ್ಡ್ ಅಗತ್ಯ ಇರುವುದಿಲ್ಲ. ಯಾವ ಬ್ಯಾಂಕ್ ನಲ್ಲಿ ಪಾನ್ ಕಾರ್ಡ್ ಮಾಹಿತಿ ಇಲ್ಲದೆ ಬ್ಯಾಂಕ್ ಖಾತೆಯನ್ನು ತೆರೆಯಬಹುದು? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Pan Card Latest Update
Image Credit: Krishijagran

ಇನ್ನುಮುಂದೆ ಈ ಬ್ಯಾಂಕಿನ ಈ ಕೆಲಸ ಮಾಡಲು ಪಾನ್ ಕಾರ್ಡ್ ಅಗತ್ಯವಿಲ್ಲ
ನೀವು ಬ್ಯಾಂಕ್ ನಲ್ಲಿ ಪಾನ್ ಕಾರ್ಡ್ ಇಲ್ಲದೆಯೂ ಕೂಡ ಖಾತೆಯನ್ನು ತೆರೆಯಬಹುದು. ಆದರೆ ಇದಕ್ಕಾಗಿ ಬ್ಯಾಂಕುಗಳು ಕೆಲವು ಷರತ್ತನ್ನು ವಿಧಿಸಿದೆ. ಪಾನ್ ಕಾರ್ಡ್ ಇಲ್ಲದೆಯೂ ಖಾತೆ ತೆರೆಯಬಹುದಾದ ವಿದೇಶಿಯರು ಮತ್ತು ವಿದೇಶಿ ಕಂಪನಿಗಳಿಗೆ ಹೊಸ ನಿಯಮವನ್ನು ಮಾಡಲಾಗಿದೆ. ಈ ನಿಯಮವು ಎಲ್ಲಾ ಬ್ಯಾಂಕ್‌ ಗಳಲ್ಲಿ ಲಭ್ಯವಿರುವುದಿಲ್ಲ.

ಸಾಗರೋತ್ತರ ಮತ್ತು ವಿದೇಶಿ ಕಂಪನಿಗಳಿಗೆ IFSC ಗಿಫ್ಟ್ ಸಿಟಿಯಲ್ಲಿ ಬ್ಯಾಂಕ್ ಖಾತೆ ತೆರೆಯಲು ಪ್ಯಾನ್ ಕಾರ್ಡ್ ಅಗತ್ಯವಿಲ್ಲ. ಇದಕ್ಕಾಗಿ ಅವರು ಈಗ ಘೋಷಣೆಯನ್ನು ಸಲ್ಲಿಸಬೇಕಾಗುತ್ತದೆ. ಇನ್ನು International Financial Services Centre ನಲ್ಲಿ (IFSC) ಬ್ಯಾಂಕ್ ಖಾತೆಯನ್ನು ತೆರೆಯುವ ವಿದೇಶಿ ಅಥವಾ ವಿದೇಶಿ ಕಂಪನಿಯು ಫಾರ್ಮ್-60 ಅಡಿಯಲ್ಲಿ ಘೋಷಣೆಯನ್ನು ಮಾಡಬೇಕಾಗುತ್ತದೆ. ಹಾಗೆಯೆ ಭಾರತದಲ್ಲಿ ಯಾವುದೇ ತೆರಿಗೆ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ನೀಡಬೇಕು.

Join Nadunudi News WhatsApp Group

Join Nadunudi News WhatsApp Group