Pan Card: ಪಾನ್ ಕಾರ್ಡ್ ಹೊಂದಿರುವವರು ಎಚ್ಚರ, ಈ ತಪ್ಪಿನಿಂದ ಖಾಲಿ ಆಗಲಿದೆ ನಿಮ್ಮ ಖಾತೆ.
ಪಾನ್ ಕಾರ್ಡ್ ಬಳಸುವವರು ಈ ತಪ್ಪುಗಳನ್ನ ಮಾಡಿದರೆ ಬ್ಯಾಂಕ್ ಖಾತೆ ಖಾಲಿಯಾಗುವ ಸಾಧ್ಯತೆ ಹೆಚ್ಚು.
Pan Card Latest Update: ಇತ್ತೀಚಿಗೆ ಆಧಾರ್ ಕಾರ್ಡ್ ನ ಜೊತೆಗೆ ಪಾನ್ ಕಾರ್ಡ್ (Pan Card) ಮುಖ್ಯ ದಾಖಲೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇನ್ನು ತೆರಿಗೆ ಪಾವತಿದಾರರಿಗೆ ಪಾನ್ ಕಾರ್ಡ್ ಅಗತ್ಯವಾಗಿರುತ್ತದೆ.
ಈಗಾಗಲೇ ಸರ್ಕಾರ ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ (Pan Aadhar Link) ಮಾಡಲು ಆದೇಶವನ್ನು ನೀಡಿದೆ. ಪಾನ್ ಹಾಗೂ ಆಧಾರ್ ಲಿಂಕ್ ಗೆ ಸರ್ಕಾರ ನೀಡಿರುವ ಗಡುವು ಈಗಾಗಲೇ ಮುಕ್ತಾಯಗೊಂಡಿದೆ. ಇನ್ನು ಪಾನ್ ಆಧಾರ್ ನೊಂದಿಗೆ ಲಿಂಕ್ ಆಗದಿದ್ದವರ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆ.
ಈಗಾಗಲೇ ನಿಷ್ಕ್ರಿಯವಾಗಿರಬಹುದು ಇಂತವರ ಪಾನ್ ಕಾರ್ಡ್
ಸರ್ಕಾರ ಜನರಿಗೆ ಈಗಾಗಲೇ ಪಾನ್ ಹಾಗೂ ಆಧಾರ್ ಜೋಡಣೆ ಮಾಡುವಂತೆ ಆದೇಶ ನೀಡಿದೆ. ಈ ಹಿಂದೆ ಮಾರ್ಚ್ 31 2023 ಕೊನೆಯ ದಿನಾಂಕವನ್ನು ಸರ್ಕಾರ ಆಧಾರ್ ಪಾನ್ ಜೋಡಣೆಗೆ ನಿಗದಿಪಡಿಸಿತ್ತು. ಆದರೆ ಸಾಕಷ್ಟು ಜನರ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದ ಕಾರಣ ಗಡುವನ್ನು ವಿಸ್ತರಿಸಿತ್ತು.
ಇನ್ನು ಪಾನ್ ಆಧಾರ್ ಲಿಂಕ್ ಗೆ ಮಾರ್ಚ್ 31 ರಿಂದ ಜೂನ್ 30 ರ ತನಕ ಗಡುವನ್ನು ವಿಸ್ತರಿಸಿದೆ. ಇನ್ನು ಜೂನ್ 30 ಮುಗಿದರು ಕೂಡ ನಿಮ್ಮ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದರೆ ನಿಮ್ಮ ಪಾನ್ ಕಾರ್ಡ್ ಅನ್ನು ಸರ್ಕಾರ ನಿಷ್ಕ್ರಿಯಗೊಳಿಸಿದೆ.
ಇಂತಹ ಕೆಲಸಗಳಿಗೆ ಪಾನ್ ಕಾರ್ಡ್ ಅಗತ್ಯ
ಆರ್ಥಿಕ ಚಟುವಟಿಕೆಗಳಿಗೆ ಪಾನ್ ಕಾರ್ಡ್ ಅಗತ್ಯವಾಗಿದೆ. ಬ್ಯಾಂಕ್ ಖಾತೆ, ನಿಗದಿತ ಠೇವಣಿಯ ಹೂಡಿಕೆ, ಡಿಮ್ಯಾಟ್ ಅಕೌಂಟ್ ಹಾಗೂ ತೆರಿಗೆ ಪಾವತಿಗೆ ಪಾನ್ ಕಾರ್ಡ್ ಮುಖ್ಯವಾಗಿರುತ್ತದೆ. ನಿಮ್ಮ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದರೆ ನೀವು ಬಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇನ್ನು ನೀವು ಪಾನ್ ಕಾರ್ಡ್ ಅನ್ನು ಹೊಂದಿದ್ದು ಈ ತಪ್ಪನ್ನು ನೀವು ಮಾಡಿದರೆ ನಿಮ್ಮ ಖಾತೆ ಸಂಪೂರ್ಣವಾಗಿ ಸ್ಥಗಿತವಾಗುವ ಸಾಧ್ಯತೆ ಕೂಡ ಇರುತ್ತದೆ. ನೀವು ಪಾನ್ ಕಾರ್ಡ್ ಅನ್ನು ಬಳಸುವ ಮುನ್ನ ಎಚ್ಚರದಿಂದಿರಿ.
ಈ ತಪ್ಪಿನಿಂದ ಖಾಲಿ ಆಗಲಿದೆ ನಿಮ್ಮ ಖಾತೆ
ಹತ್ತು ಅಂಕಿಗಳಿರುವ ಪಾನ್ ಕಾರ್ಡ್ ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ. ಹಣಕಾಸೇತರ ಮಾಹಿತಿ ಈ ಪಾನ್ ಕಾರ್ಡ್ ನಲ್ಲಿ ದಾಖಲಾಗಿರುತ್ತದೆ. ಇನ್ನು ಪಾನ್ ಕಾರ್ಡ್ ನಲ್ಲಿ ಇರುವ 10 ಸಂಖ್ಯೆಗಳು ಕೂಡ ಎಲ್ಲ ರೀತಿಯ ಮಾಹಿತಿಯನ್ನು ಹೊಂದಿರುತ್ತದೆ.
ನೀವು ಪಾನ್ ಕಾರ್ಡ್ ಅನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಾಬಾರದು. ನಿಮ್ಮ ಪಾನ್ ಕಾರ್ಡ್ ಬೇರೆಯವರಿಗೆ ಸಿಕ್ಕರೆ ಅವರು ಅದನ್ನು ದುರುಪಯೋಗ ಪಡಿಸಿಕೊಳ್ಳಬಹುದು. ನಿಮ್ಮ ಪಾನ್ ಕಾರ್ಡ್ ಮಾಹಿತಿಯ ಮೂಲಕ ನಿಮ್ಮ ಖಾತೆಯಲ್ಲಿರುವ ಹಣವನ್ನು ಖಾಲಿ ಮಾಡುವ ಸಾಧ್ಯತೆ ಇರುತ್ತದೆ. ಇನ್ನು ನಿಮ್ಮ ಪಾನ್ ಕಾರ್ಡ್ ನಲ್ಲಿ ಯಾವುದೇ ತಪ್ಪಾದ ಮಾಹಿತಿ ಕೊಡ ಇರಬಾರದು.