Pan Card: ಈ ಕೆಲಸಗಳನ್ನ ಮಾಡಲು ಇನ್ನುಮುಂದೆ ಪಾನ್ ಕಾರ್ಡ್ ಬೇಕಾಗಿಲ್ಲ, ಕೇಂದ್ರ ಸರ್ಕಾರದ ಆದೇಶ.
ಈ ಕೆಲವು ಕೆಲಸಗಳನ್ನ ಮಾಡಲು ಪಾನ್ ಕಾರ್ಡ್ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸ್ಪಷ್ಟನೆಯಲ್ಲಿ ತಿಳಿಸಿದೆ.
Pan Card New Update: ಪಾನ್ ಕಾರ್ಡ್ ಭಾರತೀಯ ಜನರ ಅತಿ ಮುಖ್ಯವಾದ ದಾಖಲೆಯಾಗಿದೆ. ದೇಶದ ಜನರು ಯಾವುದೇ ಕೆಲಸವನ್ನು ಪೂರೈಸಿಕೊಳ್ಳಲು ಪಾನ್ ಕಾರ್ಡ್ (Pan Card) ಅಗತ್ಯವಾಗಿ ಬೇಕಾಗುತ್ತದೆ.
ಆಧಾರ್ ಕಾರ್ಡ್ ನಂತೆ ಇದೀಗ ಪಾನ್ ಕಾರ್ಡ್ ಸಹ ದೇಶದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಮೊದಲು ಭಾರತದಲ್ಲಿ ಆಧಾರ್ ಕಾರ್ಡ್ ಪ್ರಮುಖವಾದ ದಾಖಲೆಯಾಗಿತ್ತು. ಇದೀಗ ಪಾನ್ ಕಾರ್ಡ್ ಸಹ ಪ್ರಮುಖವಾದ ದಾಖಲೆಯಾಗಿದೆ.
ಪಾನ್ ಕಾರ್ಡ್ ಹೊಸ ಅಪ್ಡೇಟ್
ಆದಾಯ ತೆರಿಗೆ ಇಲಾಖೆಯು ಪಾನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಹಲವಾರು ಬಾರಿ ಅವಕಾಶವನ್ನು ನೀಡಿತ್ತು. ಗಡುವನ್ನು ಕೂಡ ವಿಸ್ತರಣೆ ಮಾಡುತ್ತಾ ಬಂದಿತ್ತು. ಆದರೆ ಜೂನ್ 30 ರ ಬಳಿಕ ಗಡುವು ವಿಸ್ತರಣೆ ಮಾಡಿಲ್ಲ. ಆದ್ದರಿಂದಾಗಿ ನಿಮ್ಮ ಪ್ಯಾನ್ ಕಾರ್ಡ್ ಈಗ ನಿಷ್ಕ್ರಿಯವಾಗಿರಲಿದೆ. ಇದರಿಂದಾಗಿ ಯಾವುದೇ ಹಣಕಾಸು ಕಾರ್ಯಗಳನ್ನು ನಡೆಸುವುದು ಸಹ ಕಷ್ಟವಾಗಲಿದೆ.
ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ನೀವು ಬ್ಯಾಂಕ್ ಫಿಕ್ಸಡ್ ಡೆಪಾಸಿಟ್ ಅಥವಾ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಆದಾಯ ತೆರಿಗೆ ರಿಟರ್ನ್ಸ್ ಅನ್ನು ಫೇಲ್ ಮಾಡಲು ಸಾಧ್ಯವಾಗುವುದಿಲ್ಲ.
ತೆರಿಗೆ ರೀ ಫಂಡ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಇನ್ನು ಹಲವಾರು ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರು ಕೂಡ ನೀವು ಕೆಲವೊಂದು ಹಣಕಾಸು ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿದೆ. ಆದರೆ ಈ ಹಣಕಾಸು ಕಾರ್ಯಗಳಿಗೆ ಅಧಿಕ ಟಿಡಿಎಸ್ ಮತ್ತು ಟಿಸಿಎಸ್ ಕಡಿತವಾಗಲಿದೆ. ಇದೀಗ ಯಾವುದೆಲ್ಲ ಕೆಲಸವನ್ನು ನೀವು ಪ್ಯಾನ್ ಕಾರ್ಡ್ ಇಲ್ಲದೆ ಮಾಡಬಹುದು ಎನ್ನುವುದನ್ನು ತಿಳಿಯೋಣ.
ಪಾನ್ ಕಾರ್ಡ್ ಇಲ್ಲದೆ ಟಿಡಿಎಸ್ ಪಾವತಿಸಿ ಮಾಡುವ ಕೆಲಸಗಳು
* ನೀವು ಬ್ಯಾಂಕ್ ನ ಫಿಕ್ಸೆಡ್ ಡೆಪಾಸಿಟ್ ಅಥವಾ ರಿಕರಿಂಗ್ ಡೆಪಾಸಿಟ್ ನಿಂದ ಒಂದು ಹಣಕಾಸು ವರ್ಷದಲ್ಲಿ 40 ಸಾವಿರ ರೂಪಾಯಿ ಗಳಿಸುತ್ತಿದ್ದರೆ ನಿಮಗೆ ಟಿಡಿಎಸ್ ವಿಧಿಸಲಾಗುತ್ತದೆ.
* ಒಂದು ಹಣಕಾಸಿನ ವರ್ಷದಲ್ಲಿ ಕಂಪನಿಗಳು ಅಥವಾ ಮ್ಯೂಚುವಲ್ ಫಂಡ್ ಗಳಿಂದ 5000 ರೂಪಾಯಿಗಿಂತ ಹೆಚ್ಚಿನ ಲಾಭಂಶವನ್ನು ಪಡೆಯುವುದುದರಿಂದ ಹೆಚ್ಚಿನ ಟಿಡಿಎಸ್ ವಿಧಿಸಲಾಗುತ್ತದೆ.
* ನೀವು 50 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊಲ್ಯದ ಸ್ಥಿರಾಸ್ತಿಯನ್ನು ಮಾರಾಟ ಮಾಡಿದರೆ ನೀವು ಹೆಚ್ಚಿನ ಟಿಡಿಎಸ್ ಅನ್ನು ಪಾವತಿಸಬೇಕಾಗುತ್ತದೆ.
* 10 ಲಕ್ಷ ರೂಪಾಯಿಗಿಂತ ಹೆಚ್ಚು ಮೌಲ್ಯದ ಕಾರನ್ನು ಖರೀದಿಸಿದರೆ ಹೆಚ್ಚಿನ ಟಿಸಿಎಸ್ ಅನ್ನು ಪಾವತಿಸಬೇಕಾಗುತ್ತದೆ.
* ತೆರಿಗೆ ಬಾಕಿ ಇರುವಾಗ ನಿಮ್ಮ ಇಪಿಎಫ್ ಖಾತೆಯಿಂದ 50 ಸಾವಿರ ರೂಪಾಯಿಗಿಂತ ಅಧಿಕ ಹಣವನ್ನು ವಿತ್ ಡ್ರಾ ಮಾಡಿದರೆ ಅಧಿಕ ಟಿಡಿಎಸ್ ತೆರೆಯಬೇಕಾಗುತ್ತದೆ.
* 50 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಟಿಡಿಎಸ್ ವಿಧಿಸಲಾಗುತ್ತದೆ.
* ನೀವು ಗುತ್ತಿಗೆ ಕೆಲಸಕ್ಕೆ ಯಾರನ್ನಾದರೂ ನೇಮಿಸಿಕೊಂಡರೆ ಮತ್ತು ಅವರಿಗೆ ಒಂದೇ ಒಪ್ಪಂದಕ್ಕೆ 30000 ರೂಪಾಯಿ ಅಥವಾ ಒಟ್ಟಾಗಿ ಒಂದು ಲಕ್ಷ ರೂಪಾಯಿಗಿಂತ ಅಧಿಕ ಪಾವತಿಸಿದರೆ, ನೀವು ಹೆಚ್ಚಿನ ಟಿಡಿಎಸ್ ಪಾವತಿಸಬೇಕಾಗುತ್ತದೆ.
* 15000 ರೂಪಾಯಿಗಿಂತ ಹೆಚ್ಚಿನ ಕಮಿಷನ್ ಅಥವಾ ಬ್ರೋಕರೇಜ್ ಪಾವತಿಗಳನ್ನು ಸ್ವೀಕರಿಸುವುದರಿಂದ ಹೆಚ್ಚಿನ ಟಿಡಿಎಸ್ ವಿಧಿಸಲಾಗುತ್ತದೆ.