Pan Surname: ಮದುವೆಯ ನಂತರ ಪಾನ್ ಕಾರ್ಡ್ ನಲ್ಲಿ ಗಂಡನ ಹೆಸರು ಹಾಕಿಸುವುದು ಹೇಗೆ, ಮಹಿಳೆಯರೇ ತಪ್ಪದೆ ಈ ಕೆಲಸ ಮಾಡಿ.

ಮದುವೆಯ ನಂತರ ಪಾನ್ ಕಾರ್ಡ್ ನಲ್ಲಿ ಗಂಡನ ಹೆಸರನ್ನ ಈ ರೀತಿಯಲ್ಲಿ ಸೇರಿಸಬಹುದು.

Pan Card Surname Change Online: ವೈಯಕ್ತಿಕ ಮಾಹಿತಿಯಲ್ಲಿ ಒಂದಾದ Pan Card ಅನ್ನು ಎಲ್ಲರು ಅಗತ್ಯವಾಗಿ ಹೊಂದಿರಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪಾನ್ ಕಾರ್ಡ್ ಆಧಾರ್ ಕಾರ್ಡ್ (Aadhar Card) ನಷ್ಟೆ ಮಹತ್ವವನ್ನು ಪಡೆದುಕೊಂಡಿದೆ. ಎಲ್ಲಾ ಹಣಕಾಸು ವಿಷಯಗಳು ಬ್ಯಾಂಕ್ ಗೆ ಲಿಂಕ್ ಆಗಿರುದರಿಂದ ಪಾನ್ ಕಾರ್ಡ್ ಅನಿವಾರ್ಯವಾಗಿದೆ.

ಬೈಕ್ ಹಾಗೂ ಭೂಮಿ ಖರೀದಿಗೂ ಕೂಡ ಪಾನ್ ಕಾರ್ಡ್ ಮುಖ್ಯವಾಗಿದೆ. ಮದುವೆಯ ನಂತರ ಮಹಿಳೆಯರ ಉಪನಾಮ ಬದಲಾಗುತ್ತದೆ. ಹಾಗಾಗಿ ಅವರು ತಮ್ಮ ವಯಕ್ತಿಕ ದಾಖಲೆಗಳಲ್ಲಿರುವ ಉಪನಾಮವನ್ನು ಮದುವೆಯ ನಂತರ ಬದಲಿಸಬೇಕಾಗುತ್ತದೆ. ಇದೀಗ ನಾವು ನಿಮಗೆ ಪಾನ್ ಕಾರ್ಡ್ ನಲ್ಲಿರುವ ಉಪನಾಮವನ್ನು ಬದಲಾಯಿಸುವ ಸುಲಭ ವಿಧಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.

Pan Card Surname Change Online
Image Credit: Thehansindia

ಪಾನ್ ಕಾರ್ಡ್ ನ ಉಪನಾಮ ಬದಲಾವಣೆ
ಮದುವೆಯ ನಂತರ ಮಹಿಳೆ Pan Surname ಬದಲಾವಣೆ ಮಾಡುವುದು ಕಡ್ಡಾಯವಾಗಿದೆ. ಇದಕ್ಕಾಗಿ ನಾವು ಎಲ್ಲಿಗೆ ಹೋಗಬೇಕು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುದು ಸಹಜವಾಗಿದೆ. ಆದರೆ ಇದೀಗ ನೀವು ನಿಮ್ಮ ಪಾನ್ ಕಾರ್ಡ್ ನಲ್ಲಿರುವ ಉಪನಾಮವನ್ನು ಮನೆಯಲ್ಲೇ ಕುಳಿತು ಸುಲಭವಾಗಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಕೆಳಗೆ ನೀಡಿರುವ ಸರಳ ಹಂತವನ್ನು ಅನುಸರಿಸುವ ಮೂಲಕ ನಿಮ್ಮ ಪಾನ್ ಕಾರ್ಡ್ ನಲ್ಲಿರುವ ಉಪನಾಮವನ್ನು ಬದಲಾಯಿಸಿಕೊಳ್ಳಬಹುದಾಗಿದೆ.

ಅಗತ್ಯವಿರುವ ದಾಖಲೆಗಳು
*ವಿವಾಹ ಪ್ರಮಾಣ ಪತ್ರ

*ಪತಿಯ ಹೆಸರು ಇರುವ ಪಾಸ್ ಪೋರ್ಟ್ ಪ್ರತಿ

Join Nadunudi News WhatsApp Group

*ಗೆಜೆಟೆಡ್ ಅಧಿಕಾರಿ ನೀಡಿದ ಪ್ರಮಾಣಪತ್ರ, ಇತ್ಯಾದಿ

Pan Card Surname Change Latest
Image Credit: Silvermason

ಉಪನಾಮ ಬದಲಿಸುವ ವಿಧಾನ
ಮೊದಲು ನಿಮ್ಮ ಹತ್ತಿರ ಇರುವ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ TNSDL (www .tin -nsdl .com ) ವೆಬ್ ಸೈಟ್ ಗೆ ಭೇಟಿನೀಡಬೇಕು. ಸರ್ವಿಸ್ ವಿಭಾಗದಲ್ಲಿ ಪಾನ್ ಆಯ್ಕೆ ಮಾಡಿ ಕೆಳಗೆ ಸ್ಕ್ರಾಲ್ ಮಾಡಿ. ತದ ನಂತರ ಪಾನ್ ಕಾರ್ಡ್ ತಿದ್ದುಪಡಿ ಆಯ್ಕೆಗೆ ಹೋಗಿ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಇತ್ಯಾದಿ ವಿವರಗಳನ್ನು ಭರ್ತಿ ಮಾಡಬೇಕು. ಅಂತಿಮವಾಗಿ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಬೇಕು.

ಇದಾದ ನಂತರ ತಿದ್ದುಪಡಿ ಪುಟ ಕಾಣಿಸುತ್ತದೆ ಅದರನ್ನು ನೀವು ನಿಮಗೆ ಬೇಕಾದ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದಾಗಿದೆ. ಹಾಗೆ ಪಾವತಿಯನ್ನು ಆನ್ಲೈನ್ ಅಥವಾ ಕಾರ್ಡ್ ಗಳ ಮೂಲಕ ಮಾಡಿಕೊಳ್ಳಬಹುದಾಗಿದೆ. ಪಾವತಿ ಕೆಲಸ ಮುಗಿದ ನಂತರ ನಿಮಗೆ ನವೀಕರಿಸಿದ ಫಾರಂ ನೀಡಲಾಗುತ್ತದೆ. ಇದನ್ನು ಡೌನ್ಲೋಡ್ ಅಥವಾ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಬೇಕು. ಇವೆಲ್ಲ ಮುಗಿದ ನಂತರ ಎರಡು ಫೋಟೋಗಳನ್ನು ಫಾರಂ ಮೇಲೆ ಅಂಟಿಸಿ ಸಹಿ ಮಾಡಬೇಕು.

ಅಗತ್ಯವಿರುವ ಪುರಾವೆಯನ್ನು ಸೇರಿಸಿ, ನೀವು NSDL ಮೂಲಕ ಬದಲಾವಣೆ ಮಾಡಿದ್ದರೆ, NSDL ಮೂಲಕವೇ ಪೋಸ್ಟ್ ಮಾಡಬೇಕಾಗುತ್ತದೆ. ಅಥವಾ UTIITSL ಮೂಲಕ ನವೀಕರಿಸಿದರೆ UTIITSL ಮೂಲಕವೇ ಪೋಸ್ಟ್ ಮಾಡಬೇಕಾಗುತ್ತದೆ. ಹೀಗೆ ಮಾಡುವ ಮೂಲಕ ನೀವು ನಿಮ್ಮ ಪಾನ್ ಕಾರ್ಡ್ ನ ಉಪನಾಮವನ್ನು ಸುಲಭವಾಗಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

Join Nadunudi News WhatsApp Group