Pan Validity: ನಿಮ್ಮ ಪಾನ್ ಕಾರ್ಡಿಗೆ ಎಷ್ಟು ವರ್ಷ ವ್ಯಾಲಿಡಿಟಿ ಇರುತ್ತದೆ…? ಪಾನ್ ಕಾರ್ಡ್ ರೂಲ್ಸ್.
ಪಾನ್ ಕಾರ್ಡ್ ವ್ಯಾಲಿಡಿಟಿ ಕುರಿತಂತೆ ಸರ್ಕಾರ ಹೇಳುವುದೇನು.
Pan Card Validity: ದೇಶದಲ್ಲಿ Pan Card ಎಷ್ಟು ಮುಖ್ಯ ದಾಖಲೆಯಾಗಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. Pan Card ವ್ಯಕ್ತಿಯ ಎಲ್ಲ ಕೆಲಸಗಳಿಗೂ ಅಗತ್ಯ ದಾಖಲೆಯಾಗಿದೆ. ಇನ್ನು ಕೇಂದ್ರ ಸರ್ಕಾರ ಈಗಾಗಲೇ Aadhar Pan Link ಮಾಡಲು ಸೂಚನೆ ನೀಡಿದೆ. ಪಾನ್ ಹಾಗೂ ಆಧಾರ್ ಲಿಂಕ್ ಗೆ ಸರ್ಕಾರ ನೀಡಿರುವ ಗಡುವು ಈಗಾಗಲೇ ಮುಕ್ತಾಯಗೊಂಡಿದೆ. ಇನ್ನು ಪಾನ್ ಆಧಾರ್ ನೊಂದಿಗೆ ಲಿಂಕ್ ಆಗದಿದ್ದವರ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆ.
ಆರ್ಥಿಕ ಚಟುವಟಿಕೆಗಳಿಗೆ ಪಾನ್ ಕಾರ್ಡ್ ಅಗತ್ಯವಾಗಿದೆ. ಬ್ಯಾಂಕ್ ಖಾತೆ, ನಿಗದಿತ ಠೇವಣಿಯ ಹೂಡಿಕೆ, ತೆರಿಗೆ ಪಾವತಿಗೆ ಪಾನ್ ಕಾರ್ಡ್ ಮುಖ್ಯವಾಗಿರುತ್ತದೆ. ನಿಮ್ಮ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದರೆ ನೀವು ಬಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹತ್ತು ಅಂಕಿಗಳಿರುವ ಪಾನ್ ಕಾರ್ಡ್ ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ.
ಈ ತಿಂಗಳ ಅಂತ್ಯದವರೆಗೆ Aadhar Pan Link ಗೆ ಅವಕಾಶ
ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಅದನ್ನು ನೀವು ನಿರ್ಲಕ್ಷಿಸಿದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಇದೀಗ ಮತ್ತೆ Aadhar Pan Link ಗೆ ಅವಕಾಶ ನೀಡಿದೆ. ಅಧಿಕೃತ ವೆಬ್ ಸೈಟ್ http://www.utiitsl.com/ ಅಥವಾ http://www.egov-nsdl.co.in/ ಭೇಟಿ ನೀಡಿ ಸೆಪ್ಟೆಂಬರ್ ಅಂತ್ಯದೊಳಗೆ ಲಿಂಕ್ ಮಾಡಿಕೊಳ್ಳಬಹುದು.
Pan Card ವ್ಯಾಲಿಡಿಟಿ ಎಷ್ಟು ವರ್ಷ..?
ಇನ್ನು ಜನರಿಗೆ ಪಾನ್ ಕಾರ್ಡ್ ವ್ಯಾಲಿಡಿಟಿಯ ಬಗ್ಗೆ ಗೊಂದಲವಿರಬಹುದು. ಪ್ಯಾನ್ ಕಾರ್ಡ್ ಎನ್ನುವುದು ಒಮ್ಮೆ ಮಾಡಿದ ದಾಖಲೆ, ಅದು ಜೀವಮಾನಕ್ಕೆ ಮಾನ್ಯವಾಗಿರುತ್ತದೆ. ಪಾನ್ ಕಾರ್ಡ್ ನವೀಕರಿಸುವ ಅಗತ್ಯ ಇರುವುದಿಲ್ಲ. ವ್ಯಕ್ತಿಯ ಮರಣದ ನಂತರವೇ ಪ್ಯಾನ್ ಕಾರ್ಡ್ ಅನ್ನು ರದ್ದುಗೊಳಿಸಬಹುದು. ನಿಮಗೆ ಪಾನ್ ಕಾರ್ಡ್ ನವೀಕರಣ ಮಾಡುವಂತೆ ಯಾವುದೇ ಸಂದೇಶ ಬಂದರು ಅದು ನಿಮ್ಮನ್ನು ಮೋಸಗೊಳಿಸುವ ಉದೇಶ್ಶದಿಂದ ಬಂದಿದೆ ಎಂದರ್ಥ.
ಪಾನ್ ಕಾರ್ಡ್ ನಲ್ಲಿನ ಒಂದೊಂದು ಸಂಖ್ಯೆಯು ಒಂದೊಂದು ಅರ್ಥವನ್ನು ಹೊಂದಿದೆ
ಪ್ಯಾನ್ ಕಾರ್ಡ್ ನಲ್ಲಿ 10 ಅಂಕಿಗಳನ್ನು ನಮೂದಿಸಲಾಗುತ್ತದೆ. ಪ್ಯಾನ್ ಕಾರ್ಡ್ ನಲ್ಲಿರುವ ಮೊದಲ ಮೂರು ಅಕ್ಷರಗಳು ವರ್ಣಮಾಲೆಯಾಗಿರುತ್ತದೆ. AAA ನಿಂದ ZZZ ವರೆಗಿನ ಯಾವುದೇ ಅಕ್ಷರಗಳನ್ನು ಪ್ಯಾನ್ ಕಾರ್ಡ್ ನಲ್ಲಿ ನಮೂದಿಸಬಹುದು. ಪ್ಯಾನ್ ಕಾರ್ಡ್ ನಲ್ಲಿನ ನಾಲ್ಕನೇ ವರ್ಣಮಾಲೆಯು ನೀವು ಏನಾಗಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ.
P ಅಂತ ಇದ್ದರೆ ವ್ಯಕ್ತಿ ಎಂದು, F ಅಂತ ಇದ್ದರೆ ಸಂಸ್ಥೆಗೆ ಸೇರಿದೆ ಎಂದು, T ಅಂತ ಇದ್ದರೆ ನಂಬಿಕೆ ಎಂದು, B ವ್ಯಕ್ತಿಯ ದೇಹವನ್ನು ಸೂಚಿಸುತ್ತದೆ, G ಸರ್ಕಾರವನ್ನು ಸೂಚಿಸುತ್ತದೆ, H ಅಂತ ಇದ್ದರೆ ಹಿಂದೂ ಅವಿಭಜಿತ ಕುಟುಂಬವನ್ನು ಸೂಚಿಸುತ್ತದೆ. ಪ್ಯಾನ್ ಕಾರ್ಡ್ ನಲ್ಲಿನ ಐದನೇ ಅಕ್ಷರವು ಉಪನಾಮದ ಮೊದಲ ಅಕ್ಷರವಾಗಿದೆ. ಇನ್ನು ಪ್ಯಾನ್ ಕಾರ್ಡ್ ನಲ್ಲಿ ನಾಲ್ಕು ಸಂಖ್ಯೆಗಳು ಹಾಗೂ ಕೊನೆಯಲ್ಲಿ ಒಂದು ವರ್ಣಮಾಲೆ ಇರುತ್ತದೆ.