Vehicle Rules: ಇನ್ನುಮುಂದೆ ವಾಹನಗಳಲ್ಲಿ ಈ ಬಟನ್ ಕಡ್ಡಾಯ, ವಾಹನ ಮಾಲೀಕರಿಗೆ ಕೇಂದ್ರದಿಂದ ಹೊಸ ನಿಯಮ.
ಕರ್ನಾಟಕದ ಖಾಸಗಿ ಸಾರಿಗೆಗಳಲ್ಲಿ ಇನ್ನುಮುಂದೆ ಈ ಬಟನ್ ಕಡ್ಡಾಯ.
Panic Button And Vehicle Tracking Mandatory In Karnataka: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬರುವ ಮುನ್ನ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಉಚಿತ ಬಸ್ (Free Bus) ಪ್ರಯಾಣವನ್ನು ಜಾರಿಗೆ ತಂದಿದೆ. ಸಾಕಷ್ಟು ಮಹಿಳೆಯರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ಖಾಸಗಿ ಸಾರ್ವಜನಿಕ ಸಾರಿಗೆ ಮೇಲೆ ಸಾರಿಗೆ ಇಲಾಖೆ ನಿಗಾ ವಹಿಸಿದ್ದು ಜನರ ಸುರಕ್ಷತೆಯ ಕಾರಣದಿಂದ ಖಾಸಗಿ ವಾಹನಗಳಿಗೆ ಕೇಂದ್ರ ಸರ್ಕಾರ ಹೊಅ ನಿಯಮವನ್ನ ಜಾರಿಗೆ ತಂದಿದ್ದು ಎಲ್ಲಾ ವಾಹನಗಳ್ಲಲಿ ಈ ಬಟನ್ ಕಡ್ಡಾಯವಾಗಿ ಹಾಕಬೇಕು ಎಂದು ಕೇಂದ್ರ ಸ್ಪಷ್ಟನೆಯಲ್ಲಿ ತಿಳಿಸಿದೆ.
ಖಾಸಗಿ ವಾಹನಗಳಲ್ಲಿ ಕೂಡ ಪ್ಯಾನಿಕ್ ಬಟನ್ ಕಡ್ಡಾಯ
ಖಾಸಗಿ ಸಾರ್ವಜನಿಕ ಸಾರಿಗೆಗಳಿಗೆ ಕೂಡ ಕಡ್ಡಾಯವಾಗಿ ಪ್ಯಾನಿಕ ಬಟನ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಸಬೇಕೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಆದೇಶದಂತೆ ಈ ನಿಯಮವನ್ನು ಕೈಗೊಳ್ಳಲಾಗುವುದು. ಈ ಮೂಲಕ ಪ್ರಯಾಣಿಕರ ಸುರಕ್ಷತೆ ಹಾಗೂ ಖಾಸಗಿ ಸಾರಿಗೆ ಮೇಲೆ ನಿಗಾವಹಿಸಲಾಗುತ್ತದೆ. ಈ ನೂತನ ವ್ಯವಸ್ಥೆಯನ್ನು ಅಳವಡಿಸಲು ಖಾಸಗಿ ಸಾರಿಗೆ ಮಾಲೀಕರಿಗೆ ಸೂಚಿಸಲಾಗಿದೆ.
ಕರ್ನಾಟಕದ ಖಾಸಗಿ ಸಾರಿಗೆಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ
ಕೇಂದ್ರ ಸರ್ಕಾರವು ನಿರ್ಭಯ ಪ್ರಕರಣದ ನಂತರ ಪ್ರಯಾಣಿಕರ ಹಿತ ದ್ರಷ್ಟಿಯಿಂದ ಸರ್ಕಾರಿ ಸಾರಿಗೆ ಸಂಸ್ಥೆಗಳ ವಾಹನಗಳಲ್ಲಿ ಪ್ಯಾನಿಕ್ ಬಟನ್ ಹಾಗೂ ವೆಹಿಕಲ್ ಟ್ರಾಕಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಇದಾದ ನಂತರ ಖಾಸಗಿ ವಾಹನ ಗಳಲ್ಲೂ ಪ್ಯಾನಿಕ್ ಬಟನ್ ಹಾಗೂ ವೆಹಿಕಲ್ ಟ್ರಾಕಿಂಗ್ ವ್ಯವಸ್ಥೆಯನ್ನು ಅಳವಡಿಸಲು ಸೂಚನೆ ನೀಡಿತ್ತು.
ಆದರೆ ಕರ್ನಾಟಕ ಸೇರಿದಂತೆ ಇನ್ನುಳಿದ 2 ರಾಜ್ಯಗಳನ್ನು ಬಿಟ್ಟು ಉಳಿದೆಲ್ಲ ರಾಜ್ಯಗಳು ಈ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಇದೀಗ ಕರ್ನಾಟಕದಲ್ಲೂ ಕೂಡ ಪ್ಯಾನಿಕ್ ಬಟನ್ ಹಾಗೂ ವೆಹಿಕಲ್ ಟ್ರಾಕಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಈ ನಿಯಮವನ್ನು ಪಾಲಿಸದ ಖಾಸಗಿ ಸಾರಿಗೆ ಸಂಸ್ಥೆಗಳ ಮೇಲೆ ದಂಡ ವಿಧಿಸಲಾಗುದು ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.