Sunroof Cars: 15 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತೆ ಸನ್ ರೂಫ್ ಇರುವ ಈ SUV ಕಾರ್ಸ್, ಮಧ್ಯಮ ವರ್ಗಕ್ಕೆ ಬೆಸ್ಟ್ ಕಾರ್.
ಪನೋರಮಿಕ್ ಸನ್ ರೂಫ್ ಇರುವ ಬಜೆಟ್ ಕಾರ್ ಗಳ ಬಗ್ಗೆ ಮಾಹಿತಿ.
Panoramic Sunroof Cars: ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರುಗಳು ಬಿಡುಗಡೆಯಾಗಿವೆ. ಕಾರು ಖರೀದಿ ಮಾಡುವವರಿಗೆ ಹಣಕಾಸಿನ ವಿಚಾರದಲ್ಲಿ ಬಿಟ್ಟು ಆಯ್ಕೆಯ ವಿಷಯದಲ್ಲಿ ಕೊರತೆಯಂತೂ ಆಗುವುದಿಲ್ಲ.
ಇನ್ನು ಕಾರ್ ಖರೀದಿಸುವ ಮುನ್ನ ಜನರು ಕಾರುಗಳಲ್ಲಿ ಏನೇನು ವೈಶಿಷ್ಟ್ಯ ಇದೆ ಅನ್ನುವುದರ ಬಗ್ಗೆ ಗಮನ ಹರಿಸುತ್ತಾರೆ. ಅದೇ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಜನರು ಕಾರ್ ಖರೀದಿ ಮಾಡುವ ಮುನ್ನ ಕಾರಿನಲ್ಲಿ ಸನ್ ರೂಫ್ ಇದೆಯೇ ಅನ್ನುವುದರ ಬಗ್ಗೆ ಕೂಡ ಗಮನ ಹರಿಸುತ್ತಾರೆ.
Panoramic Sunroof Cars
ಇತ್ತೀಚಿಗೆ ಪನೋರಮಿಕ್ ಸನ್ ರೂಫ್ ಇರುವ ಅನೇಕ ಕಾರ್ ಗಳು ಮಾರುಕಟ್ಟೆಗೆ ಬರುತ್ತಿವೆ. ಪನೋರಮಿಕ್ ಸನ್ ರೂಫ್ ಪ್ರೀಮಿಯಂ ವೈಶಿಷ್ಟ್ಯವಾಗಿದ್ದು ದುಬಾರಿ ಕಾರ್ ಗಳಲ್ಲಿ ಮಾತ್ರ ಇರುತ್ತದೆ. ಇದೀಗ ನಾವು ಪನೋರಮಿಕ್ ಸನ್ ರೂಫ್ ಇರುವ ಬಜೆಟ್ ಕಾರ್ ಗಳ ಬಗ್ಗೆ ಮಾಹಿತಿ ತಿಳಿಯೋಣ.
15 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತೆ ಸನ್ ರೂಫ್ ಇರುವ ಈ SUV ಕಾರ್ಸ್
*Hyundai Creta
Panoramic Sunroof ವಿಭಾಗದಲ್ಲಿ Hyundai Creta ಮೊದಲ ಸ್ಥಾನದಲ್ಲಿದೆ. ಈ ಕಾರ್ ಶಕ್ತಿಯುತ ಎಂಜಿನ್ ಹೊರತುಪಡಿಸಿ, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. Hyundai Creta ಎಕ್ಸ್ ಶೋರೂಮ್ ಬೆಲೆ 13.96 ಲಕ್ಷ ಆಗಿದೆ.
*MG Astor
MG Astor ನಲ್ಲಿ Panoramic Sunroof ಅನ್ನು ಅಳವಡಿಸಲಾಗಿದೆ. ಈ ಕಾರ್ ಶಕ್ತಿಶಾಲಿ ಎಂಜಿನ್ ಜೊತೆಗೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ MG Astor ನ ಎಕ್ಸ್ ಶೋರೂಮ್ ಬೆಲೆ 14.21 ಲಕ್ಷ ಆಗಿದೆ.
*Kia Seltos
Kia Seltos ನಲ್ಲಿ Panoramic Sunroof ಅನ್ನು ಅಳವಡಿಸಲಾಗಿದೆ. ಈ ಕಾರ್ ನ ಬೆಲೆ ಮಾರುಕಟ್ಟೆ ಹಾಗೂ ಎಕ್ಸ್ ಶೋರೂಮ್ ಪ್ರಕಾರ 15 ಲಕ್ಷ ಆಗಿದೆ.
*Maruti Suzuki Grand Vitara
ಮಾರುತಿಯ ಶಕ್ತಿಶಾಲಿ SUV ಆದ Maruti Suzuki Grand Vitara ದಲ್ಲಿ ಕಂಪನಿ Panoramic Sunroof ಅನ್ನು ಅಳವಡಿಸಿದೆ. ಇದರ ಎಕ್ಸ್ ಶೋರೂಮ್ ಬೆಲೆ 15.41 ಲಕ್ಷ ಆಗಿದೆ. Maruti Suzuki Grand Vitara ಉತ್ತಮ ಮೈಲೇಜ್ ನೀಡುತ್ತದೆ.
*Toyota Hyryder
Toyota Hyryder SUV ಗೆ Panoramic Sunroof ಅನ್ನು ಅಳವಡಿಸಲಾಗಿದೆ. ಇದರ ಎಕ್ಸ್ ಶೋರೂಮ್ ಬೆಲೆ 16.04 ಲಕ್ಷ ಆಗಿದೆ. ಈ SUV ಫಾರ್ಚುನರ್ನ ಮಿನಿ ಆವೃತ್ತಿಯಾಗಿದೆ.