Paris Coffee: ಪ್ಯಾರಿಸ್ ನಲ್ಲಿ ಚಿರು ಜೊತೆ ನಡೆದ ವಿಶೇಷ ಘಟನೆ ತಿಳಿಸಿದ ಮೇಘನಾ ರಾಜ್
ಮೂರ್ನಾಲ್ಕು ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್ ಫ್ಯಾರೀಸ್ ಟ್ರಿಪ್ ನ ಬಗ್ಗೆ ನಟಿ ಮಾತನಾಡಿದ್ದಾರೆ.
Paris Expensive Coffee: ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಮೇಘನಾ ರಾಜ್ (Meghana Raj) ಅವರು ಆಗಾಗ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಾಗುತ್ತಾರೆ. ಇನ್ನು ನಟಿ ಸಾಕಷ್ಟು ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಿರುವ ಕಾರಣ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ನಟಿ ಮೇಘನಾ ರಾಜ್ ಇದೀಗ ತತ್ಸಮ ತದ್ಭವ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.
ನಟಿ ವಿವಾಹದ ಬಳಿಕ ಚಿತ್ರರಂಗದಿಂದ ದೂರ ಇದ್ದಿದ್ದರು. ಇನ್ನು ಮೇಘನಾ ರಾಜ್ ಅಭಿನಯದ ಚಿತ್ರ ಇನ್ನೇನು ಸದ್ಯದಲ್ಲೇ ತೆರೆ ಕಾಣಲಿದೆ. ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ನಟಿ ಸೋಶಿಯಲ್ ಮೀಡಿಯಾದಲ್ಲಿ(Social Media) ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಲೇ ಇರುತ್ತಾರೆ. ಇನ್ನು ನಟಿ ಮೇಘನಾ ರಾಜ್ ಅವರ ಎರಡನೇ ಮದುವೆಯ ಬಗ್ಗೆ ಆಗಾಗ ಸುದ್ದಿಗಳು ವೈರಲ್ ಆಗುತ್ತವೆ. ನಟಿ ಸಾಕಷ್ಟು ಬಾರಿ ತಮ್ಮ ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಚಿರು ಜೊತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ ನಟಿ
ಇನ್ನು ನಟಿ ಮೇಘನಾ ರಾಜ್ ಚಿರು ಅವರನ್ನು ನೆನೆದು ಆಗಾಗ ಭಾವುಕರಾಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಚಿರು ಅವರ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇನ್ನು ತಮ್ಮ ಹೊಸ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿ ಆಗಿರುವ ನಟಿ ಸಂದರ್ಶನದಲ್ಲಿ ಚಿರು ಅವರ ಜೊತೆ ಕಳೆದ ಸುಂದರ ಕ್ಷಣಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫ್ಯಾರೀಸ್ ನಲ್ಲಿ ತಾವು ಕುಡಿದ ದುಬಾರಿ ಕಾಫಿಯ ಬಗ್ಗೆ ಮೇಘನಾ ಮಾಹಿತಿ ಹಂಚಿಕೊಂಡಿದ್ದಾರೆ.
ಫ್ಯಾರೀಸ್ ನಲ್ಲಿ ದುಬಾರಿ ಕಾಫಿ ಕುಡಿದ ನಟಿ
ಮೂರ್ನಾಲ್ಕು ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್ ಫ್ಯಾರೀಸ್ ಟ್ರಿಪ್ ನ ಬಗ್ಗೆ ನಟಿ ಮಾತನಾಡಿದ್ದಾರೆ. ಅಲ್ಲಿನ ಸಾಕಷ್ಟು ಪ್ಲೇಸ್ ಗಳಿಗೆ ಭೇಟಿ ನೀಡಿದ್ದಾರೆ. ಪ್ರತಿ ದಿನ ಮೇಘನಾ ಸಂಜೆ ಕಾಫಿ ಕುಡಿಯುತ್ತಿದ್ದರು. ಹೀಗಾಗಿ ಫ್ಯಾರೀಸ್ ನಲ್ಲಿ ಕೂಡ ನಟಿ ಕಾಫಿ ಕುಡಿಯುವ ಅಭ್ಯಾಸ ಮುಂದುವರೆಸಿದ್ದರು. ಮೇಘನಾ ಅವರು ಕಾಫಿ ಕೇಳಿದಾಗ ಚಿರು ಫ್ಯಾರೀಸ್ ನ ಕೆಫೆಯಲ್ಲಿ ಕಾಫಿ ಕೊಡಿಸಿದ್ದಾರೆ. ಕಾಫಿ ಕುಡಿದು ರೂಮ್ ಗೆ ಹೋದ ಮೇಲೆ ಚಿರು ಕಾಫಿ ಬೆಲೆ ಹೇಳಿದಾಗ ಮೇಘನಾ ಅಚ್ಚರಿ ಪಟ್ಟಿದ್ದಾರೆ.
ಒಂದು ಕಾಫಿಗೆ 11 ಸಾವಿರ ಬಿಲ್
ಮೇಘನಾ ರಾಜ್ ಫ್ಯಾರೀಸ್ ನಲ್ಲಿ ಕುಡಿದ ಕಾಫಿಯ ಬೆಲೆ ಬರೋಬ್ಬರಿ 11 ಸಾವಿರ. ನಿಜ ಹೇಳಬೇಕು ಅಂದ್ರೆ ಆ ಕಾಫಿಗೆ ಅಷ್ಟು ಹಣ ಎಂದು ನನಗೆ ಗೊತ್ತಿರಲಿಲ್ಲ ಅಲ್ಲಿದ ಹಣ ನೋಡಿಕೊಂಡು ನಾವು ಒಂದು ಲೆಕ್ಕ ಮಾಡಿಕೊಂಡು ಹೋಗಿ ಕಾಫಿ ಕುಡಿದಿದ್ದು. ಕಾಫಿ ಕುಡಿದ ಸ್ವಲ್ಪ ಹೊತ್ತಿಗೆ ಚೆನ್ನಾಗಿಲ್ಲ ಎಂದು ನಾನು ಹೋಟೆಲ್ ನವರಿಗೆ ಹೇಳಿದೆ ಆದರೂ ತೆಗೆದುಕೊಂಡಿರುವುದಕ್ಕೆ ಕುಡಿದು ಬಂದೆ. ಆಗ ಎಷ್ಟು ಹೇಳಿದರು ಅದನ್ನು ಚಿರು ಕೊಟ್ಟು ಬಂದಿದ್ದಾರೆ. ರೂಮ್ ಗೆ ಬಂದ ನಂತರ ಎಲ್ಲಿ ಎಷ್ಟು ಖರ್ಚು ಆಗಿದೆ ಅಂತ ನೋಡುವಾದ ಕೆಫೆ ಬಿಲ್ ನೋಡಿದ್ದಾರೆ. ಅಲ್ಲಿ ಒಂದು ಕಾಫಿಗೆ 11 ಸಾವಿರ ರೂಪಾಯಿ ಆಗಿತ್ತು.
ನನ್ನಿಂದಲೇ ಮೋದಿ ಯುಪಿಐ ಶುರುಮಾಡಿದ್ದರು
ದೇವರೆ ಒಂದು ಕಪ್ ದಬ್ಬ ಕಾಫಿಗೆ ಅಷ್ಟು ಎಂದು ಕೇಳಿ ಬೇಸರ ಆಯ್ತು. ಆದರೆ ಇರಲಿ ಬಿಡು ಬೇಬಿ ನಿನಗೆ ಅಲ್ವಾ ಕಾಫಿ ನೀನು ಕೇಳಿದೆ ನಾನು ಕೊಡಿಸಿದೆ ಎಂದು ಚಿರು ಹೇಳಿದ್ದರು ಎಂದು ಮೇಘನಾ ಹೇಳಿದ್ದಾರೆ.
ವಿಶೇಷ ಪ್ರವಾಸ ಮಾಡುವಾಗ ನಮ್ಮ ತಲೆಯಲ್ಲಿ ಇಷ್ಟು ಹಣ ಎಂದು ಲೆಕ್ಕ ಇರುತ್ತೆ. ಅಲ್ಲಿ ಖರ್ಚು ಮಾಡುವಾಗ ಲೆಕ್ಕ ಮಾಡುತ್ತೇವೆ. ಕನ್ವರ್ಟ್ ಮಾಡುವುದರಲ್ಲಿ ಎಡವುತ್ತೇವೆ. ಹೀಗಾಗಿ ನರೇಂದ್ರ ಮೋದಿ ಅವರು ನನಗೋಸ್ಕರ ಅಲ್ಲಿ ಕೂಡ ಯುಪಿಐ ಆರಂಭಿಸಿದ್ದಾರೆ.ನಿಜ ಹೇಳಬೇಕು ಎಂದರೆ ನನ್ನಿಂದಲೇ ಫ್ಯಾರೀಸ್ ನಲ್ಲಿ ಯುಪಿಐ ಆರಂಭವಾಗಿರುವುದು ಎಂದಿದ್ದಾರೆ.