Visa: ಪಾಸ್ಪೋರ್ಟ್ ಇದ್ದವರಿಗೆ ಗುಡ್ ನ್ಯೂಸ್, ಇನ್ನುಮುಂದೆ ಈ ದೇಶಗಳಿಗೆ ಹೋಗಲು ವೀಸಾ ಬೇಕಾಗಿಲ್ಲ.
ವೀಸಾ ಇಲ್ಲದೆ ಪಾಸ್ ಪೋರ್ಟ್ ನೊಂದಿಗೆ ವಿದೇಶ ಪ್ರಯಾಣ ಮಾಡಬಹುದು.
Passport And Visa: ಜನರಿಗೆ ವಿದೇಶಕ್ಕೆ ಹೋಗಲು ಮುಖ್ಯವಾಗಿ ಪಾಸ್ ಪೋರ್ಟ್ ಮತ್ತು ವೀಸಾ ಬೇಕೇ ಬೇಕು. ವಿದೇಶಗಳಿಗೆ ಪ್ರಯಾಣಿಸುವ ಸಮಯದಲ್ಲಿ ಮೊದಲಿಗೆ ಮನಸ್ಸಿನಲ್ಲಿ ಬರುವ ಅಂಶವೆಂದರೆ ಅದು ಪಾಸ್ ಪೋರ್ಟ್ ಆಗಿದೆ. ಆದರೆ ಇತ್ತೀಚಿಗೆ ಒಂದು ವರದಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಕೇವಲ ದೇಶದ ಪಾಸ್ ಪೋರ್ಟ್ ಇಟ್ಟುಕೊಂಡು, ವೀಸಾ ಇಲ್ಲದೆ ಯಾವೆಲ್ಲ ದೇಶಗಳಿಗೆ ಹೋಗಬಹುದು ಎಂದು ತಿಳಿಸಿದೆ.
ಪಾಸ್ ಪೋರ್ಟ್ ನೊಂದಿಗೆ ವೀಸಾ ಇಲ್ಲದೆ ವಿದೇಶಗಳಿಗೆ ಪ್ರಯಾಣಿಸಬಹುದು
ಭಾರತೀಯ ಪಾಸ್ ಪೋರ್ಟ್ ನೊಂದಿಗೆ ನೀವು ವೀಸಾ ಇಲ್ಲದೆ ಕೆಲವು ದೇಶಗಳಿಗೆ ಭೇಟಿ ನೀಡಬಹುದು. ಇತ್ತೀಚಿಗೆ 2023 ರ ಪಾಸ್ ಪೋರ್ಟ್ ಗಳ ಪಟ್ಟಿಯನ್ನು ಹೆನ್ಲಿ ಪಾಸ್ ಪೋರ್ಟ್ ಇಂಡೆಕ್ಸ್ ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿ ಸಿಂಗಾಪುರ ಅಗ್ರಸ್ಥಾನ ಪಡೆದಿದೆ. ಹೆನ್ಲಿ ಪಾಸ್ ಪೋರ್ಟ್ ಸೂಚ್ಯಂಕದಲ್ಲಿ ಜಪಾನ್ ಮೂರನೇ ಸ್ಥಾನಕ್ಕೆ ಬಂದಿದೆ.
ಸಿಂಗಾಪುರ್ ಪಾಸ್ ಪೋರ್ಟ್ ನೊಂದಿಗೆ ನೀವು ವೀಸಾ ಇಲ್ಲದೆ 193 ದೇಶಗಳಿಗೆ ಪ್ರಯಾಣಿಸಬಹುದು. ಭಾರತೀಯ ಪಾಸ್ ಪೋರ್ಟ್ ಎಂದರೆ ಅದು ನಮ್ಮ ದೇಶದ ಪಾಸ್ ಪೋರ್ಟ್ ಗೆ ಎಷ್ಟು ಶಕ್ತಿ ಇದೆ, ಭಾರತೀಯ ಪಾಸ್ ಪೋರ್ಟ್ ನಲ್ಲಿ ವೀಸಾ ಇಲ್ಲದೆ ಎಷ್ಟು ದೇಶಗಳಿಗೆ ಭೇಟಿ ನೀಡಬಹುದು ಎಂಬುದು ಕುತೂಹಲಕಾರಿಯಾಗಿದೆ.
ವೀಸಾ ಇಲ್ಲದೆ ಹೋಗಬಹುದಾದ ದೇಶಗಳು
ಹೆನ್ಲಿ ಪಾಸ್ ಪೋರ್ಟ್ ಸೂಚ್ಯಂಕದಲ್ಲಿ ಭಾರತ ಮೊದಲಿಗಿಂತ ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ. ನೀವು ಭಾರತೀಯ ಪಾಸ್ ಪಾಟ್ ನೊಂದಿಗೆ ವೀಸಾ ಮುಕ್ತವಾಗಿ 57 ದೇಶಗಳಿಗೆ ಪ್ರಯಾಣಿಸಬಹುದು.
ವೀಸಾ ಇಲ್ಲದೆಯೇ ಹೋಗಬಹುದಾದ ದೇಶಗಳೆಂದರೆ ಕುಕ್ ದ್ವೀಪಗಳು, ಫಿಜಿ, ಮಾರ್ಷಲ್, ದ್ವೀಪ, ಮೈಕ್ರೋನೇಷಿಯಾ, ನಿಯು, ಪಲಾವ್, ದ್ವೀಪ, ಸಮೋವಾ, ತುವಾಲು, ವನವಾಟು, ಇರಾನ್, ಜೋರ್ಡಾನ್, ಓಮನ್, ಕ್ಯು, ಅಲ್ಬೇನಿಯಾ, ಬಾರ್ಬಡೋಸ್, ಬ್ರಿಟಿಷ್ ವರ್ಜಿನ್ ದ್ವೀಪಗಳು, ಡೊಮಿನಿಕಾ, ಗ್ರಾನಡಾ, ಹೈಟಿ, ಜಮೈಕಾ, ಮಾಂಟ್ಸೆರಾಟ್, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟ್ರಿನಿಡಾಡ್ ಮತ್ತು ಟೊಬಾಗೊ.
ಕಾಂಬೋಡಿಯಾ, ಇಂಡೋನೇಷ್ಯಾ, ಭೂತಾನ್, ಸೇಂಟ್ ಲೂಸಿಯಾ, ಲಾವೋಸ್. ಮಕಾವೊ, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್, ಟಿಮೋರ್-ಲೆಸ್ಟೆ, ಬೊಲಿವಿಯಾ, ಗ್ಯಾಬೊನ್, ಗಿನಿಯಾ-ಬಿಸ್ಸೌ, ಮಡಗಾಸ್ಕರ್, ಮಾರಿಟಾನಿಯಾ, ಮಾರಿಷಸ್, ಮೊಜಾಂಬಿಕ್, ರುವಾಂಡಾ, ಸೆನೆಗಲ್, ಸೀಶೆಲ್ಸ್, ಸಿಯೆರಾ ಲಿಯೋನ್, ಸೊಮಾಲಿಯಾ, ಟಾಂಜಾನಿಯಾ, ಟುಗೊ, ಟುನೀಶಿಯಾ, ಉಗಾಂಡಾ, ಇಥಿಯೋಪಿಯಾ, ಜಿಂಬಾಬ್ವೆ, ಕೇಪ್ ವರ್ಡೆ ದ್ವೀಪ, ಕೊಮೊರೊ ದ್ವೀಪ, ಎಲ್ ಸಾಲ್ವಡಾರ್, ಬೋಟ್ಸ್ವಾನ, ಬುರುಂಡಿ.