Ads By Google

Passport Verification: ಇನ್ನುಮುಂದೆ ಈ ದಾಖಲೆ ಇಲ್ಲದಿದ್ದರೆ ಪಾಸ್ಪೋರ್ಟ್ ಮಾಡಲು ಸಾಧ್ಯವಿಲ್ಲ, ಕೇಂದ್ರದ ಹೊಸ ನಿಯಮ.

Passport Application Rule

Image Credit: indiafilings

Ads By Google

Passport Application New Rule: ಕೇಂದ್ರ ಸರ್ಕಾರ ಇತ್ತೀಚಿಗೆ ಸಾಕಷ್ಟು ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ದೇಶದಲ್ಲಿ ಇತ್ತೀಚಿಗೆ ವಂಚನೆಗಳು ಹೆಚ್ಚುತ್ತಿದೆ. ವಂಚನೆಯನ್ನು ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

ಇನ್ನು ವ್ಯಕ್ತಿಯ ಗುರುತಿನ ಪುರಾವೆ ಮಾಡಿಸುವುದರಲ್ಲಿ ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಸಾಮಾನ್ಯವಾಗಿ ವಿದೇಶಿ ಪ್ರಯಾಣಕ್ಕೆ Passport ಅಗತ್ಯವಾಗಿದೆ. ಇದೀಗ Passport ನಿಯಮದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.

Image Credit: Informalnewz

ಹೊಸ Passport ಅರ್ಜಿದಾರರಿಗೆ ಮಹತ್ವದ ಮಾಹಿತಿ
ವಿದೇಶ ಪ್ರಯಾಣಕ್ಕಾಗಿ ಎಲ್ಲರು ಕೂಡ Passport ಹೊಂದಿರಬೇಕು. Passport ಇಲ್ಲದಿದ್ದರೆ ವಿದೇಶಿ ಪ್ರಯಾಣ ಸಾದ್ಯವಾಗುವುದಿಲ್ಲ. ಇದೀಗ ಕೇಂದ್ರ ಸರ್ಕಾರ ಹೊಸ Passport ಮಾಡಿಸುವುವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇನ್ನು ಕೇಂದ್ರ ಸರಕಾರದ ನಿಯಮದಡಿ Passport ನಾನು ಮಾಡಿಸಬೇಕಾಗುತ್ತದೆ. ನೀವು ಹೊಸ Passport ಗೆ ಅರ್ಜಿ ಸಲ್ಲಿಸುವ ಯೋಜನಎಯಲ್ಲಿದ್ದರೆ ಕೇಂದ್ರ ಸರ್ಕಾರದ ಈ ಹೊಸ ನಿಯಮದ ಬಗ್ಗೆ ತಿಳಿಯುವುದು ಉತ್ತಮ.

Passport Application Rule
ಇದೀಗ Ministry of External Affairs (ವಿದೇಶಾಂಗ ವ್ಯವಹಾರಗಳ ಸಚಿವಾಲಯ) ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಪಾಸ್ ಪೋರ್ಟ್ ಅರ್ಜಿ ಪ್ರಕ್ರಿಯೆಯಲ್ಲಿ ಆಗಸ್ಟ್ 5 ರಿಂದ ಬದಲಾವಣೆ ಆಗಿದೆ. ಈ ಬಗ್ಗೆ MEA ಅಧಿಕೃತ ಘೋಷಣೆ ಹೊರಡಿಸಿದೆ. ಈ ಹೊಸ ನಿಯಮವು ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

Image Credit: Indiafilings

Passport Verification ಗೆ DigiLocker ಕಡ್ಡಾಯ
ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಗಳು www.passportindia.gov.in ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಈ ಕೆಲಸ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಕೆಯ ಮೊದಲು ಸರ್ಕಾರ ಒದಗಿಸಿದ ವೇದಿಕೆಯಾದ DigiLocker ಮೂಲಕ ಅಗತ್ಯ ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗಿದೆ.

ವಿವಿಧ ಪ್ರದೇಶಗಳಲ್ಲಿರುವ ಪಾಸ್ ಪೋರ್ಟ್ ಕೇಂದ್ರಗಳು ಮತ್ತು ಪೋಸ್ಟ್ ಆಫೀಸ್ ಪಾಸ್ಟ್ ಪೋರ್ಟ್ ಸೇವಾ ಕೇಂದ್ರಗಳಲ್ಲಿ ಭೌತಿಕ ದಾಖಲೆ ಪರಿಶೀಲನೆಯ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇನ್ನು ಅರ್ಜಿದಾರರು ಈಗಾಗಲೇ ಡಿಜಿಲಾಕರ್ ಮೂಲಕ ಅಪ್ಲೋಡ್ ಮಾಡಿದ್ದರೆ ತಮ್ಮ ಮೂಲ ದಾಖಲೆಗಳನ್ನು ನೀಡುವ ಅಗತ್ಯ ಇರುವುದಿಲ್ಲ.

Image Credit: Economictimes

ಡಿಜಿಲಾಕರ್ ಅನ್ನು ಬಳಸಿಕೊಳ್ಳುವ ಮೂಲಕ ಸಲ್ಲಿಸಿದ ದಾಖಲೆಗಳ ಹೆಚ್ಚಿನ ನಿಖರತೆ ಮತ್ತು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಇನ್ನು ಅರ್ಜಿ ಸಲ್ಲಿಕೆಗೆ ಸಹಾಯವಾಗಲು ಆನ್ಲೈನ್ ಅರ್ಜಿ ಸಲ್ಲಿಕೆಗಳಿಗಾಗಿ ಡಿಜಿಲಾಕರ್ ಮೂಲಕ ಆಧಾರ್ ದಾಖಲೆಗಳ ಸ್ವೀಕಾರವನ್ನು ಸಚಿವಾಲಯ ವಿಸ್ತರಿಸಿದೆ. ಇನ್ನು ಡಿಜಿ ಲಾಕರ್ ಬಳಸಿದರೆ ಪಾಸ್ ಪಾಸ್ ಪೋರ್ಟ್ ಅರ್ಜಿಯ ವೆರಿಫಿಕೇಷನ್ ಪ್ರಕ್ರಿಯೆಯಲ್ಲಿ ಯಾವುದೇ ಕಾರ್ಡ್ ಕಾಪಿ ತರುವ ಅಗತ್ಯ ಇರುವುದಿಲ್ಲ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in