Fake Website: ಪಾಸ್ಪೋರ್ಟ್ ಇದ್ದವರಿಗೆ ಮತ್ತು ಪಾಸ್ಪೋರ್ಟ್ ಮಾಡುವವರಿಗೆ ಕೇಂದ್ರದಿಂದ ಹೊಸ ರೂಲ್ಸ್, ಕೇಂದ್ರದ ಎಚ್ಚರಿಕೆ.

ಪಾಸ್ ಪೋರ್ಟ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಹತ್ವದ ಎಚ್ಚರಿಕೆ.

Government About Passport Fake Website: ಸಾಮಾನ್ಯವಾಗಿ ವಿದೇಶಿ ಪ್ರಯಾಣ ಮಾಡುವಾಗ Passport ಅಗತ್ಯ ಎನ್ನುವ ಬಗ್ಗೆ ಎಲ್ಲರಿಗು ತಿಳಿದಿದೆ. ಸದ್ಯ ದೇಶದಲ್ಲಿ ವಿದೇಶಿ ಪ್ರಯಾಣಕ್ಕೆ ಸಂಬಂಧಿಸಿದಂತೆ Visa, Passport ಇನ್ನಿತರ ದಾಖಲೆಗಳ ನೋಂದಣಿಗೆ ಸರ್ಕಾರ ವಿವಿಧ ನಿಯಮವನ್ನು ಜಾರಿಗೊಳಿಸಿದೆ. ಇದಕ್ಕೆ ಕಾರಣ ಇತ್ತೀಚಿಗೆ ಹೆಚ್ಚುತ್ತಿರುವ ವಂಚನಯಾಗಿದೆ. ಸದ್ಯ ಹೆಚ್ಚುತ್ತಿರುವ ವಂಚನೆಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಪಾಸ್ ಪೋರ್ಟ್ ಹೊಂದಿರುವವರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಈ ಮೂಲಕ ಪಾಸ್ ಪೋರ್ಟ್ ಹೊಂದಿರುವವವರನ್ನು ಕೇಂದ್ರ ಸರ್ಕಾರ ಎಚ್ಚರಿಸಿದೆ.

New Passport Rules
Image Credit: Economictimes Indiatimes

ಪಾಸ್ ಪೋಸ್ಟ್ ಹೊಂದಿರುವವರಿಗೆ ಕೇಂದ್ರದಿಂದ ಎಚ್ಚರಿಕೆ
ಸದ್ಯ ಹೆಚ್ಚುತ್ತಿರುವ ವಂಚನೆಯ ಪ್ರಕರಣಗಳಲ್ಲಿ ಇದೀಗ ಹೊಸದಾಗಿ Passport ಮೂಲಕ ವಂಚನೆ ಬೆಳಕಿಗೆ ಬಂದಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ಪೋರ್ಟ್ ಮಾಡಲು ಹೋಗುವವರಿಗೆ ಸೂಚನೆ ನೀಡಿದೆ. ಪಾಸ್‌ ಪೋರ್ಟ್ ಮಾಡುವ ನಕಲಿ ವೆಬ್‌ ಸೈಟ್‌ ಗಳ ಬಗ್ಗೆ ಜಾಗರೂಕರಾಗಿರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಜನರಿಗೆ ಆದೇಶಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ ಪೋರ್ಟ್ ಸೇವೆ ನೀಡುವ ವೆಬ್‌ ಸೈಟ್‌ ನಲ್ಲಿ ಆರು ನಕಲಿ ಪಾಸ್‌ ಪೋರ್ಟ್ ಮಾಡುವ ವೆಬ್‌ ಸೈಟ್‌ ಗಳ ಪಟ್ಟಿಯನ್ನು ನೀಡಿದೆ.

ಆರು ನಕಲಿ ಪಾಸ್‌ ಪೋರ್ಟ್ ಮಾಡುವ ವೆಬ್‌ ಸೈಟ್‌ ಗಳು ಈ ಕೆಳಗಿನಂತಿವೆ
*www.indiapassport.org
*www.online-passportindia.com
*www.passportindiaportal.in
*www.passport-india.in
*www.passport-seva.in
*www.applypassport.org

Passport Latest Update
Image Credit: Indiafilings

ಈ ವೆಬ್ ಸೈಟ್ ಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಿ
ನೀವು ಹೊಸತಾಗಿ ಪಾಸ್ ಪೋರ್ಟ್ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವೆಬ್‌ಸೈಟ್ www.passportindia.gov.in ಗೆ ಮಾತ್ರ ಲಾಗಿನ್ ಆಗುವ ಮೂಲಕ ಹೊಸ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದು. ಇದು ಧಿಕೃತ ಮೊಬೈಲ್ ಅಪ್ಲಿಕೇಶನ್ mPassport ಆಗಿದೆ. ಈ ವೆಬ್ ಸೈಟ್ ಹೊರತುಪಡಿಸಿ ಯಾವುದೇ ವೆಬ್ ಸೈಟ್ ಗೆ ಪಾಸ್ ಪೋಸ್ಟ್ ಅರ್ಜಿ ಸಲ್ಲಿಸಲು ಲಾಗಿನ್ ಆಗದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

Join Nadunudi News WhatsApp Group

Join Nadunudi News WhatsApp Group