Ads By Google

Pathaan Box Office: ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಪಠಾಣ್, ದಾಖಲೆಯ ಕಲೆಕ್ಷನ್.

Pathan collected 51 crores on the first day
Ads By Google

Pathaan Movie Box Office Collection: ಪಠಾಣ್ ಚಿತ್ರದ (Pathan Movie) ಅಬ್ಬರ ಜೋರಾಗಿಯೇ ಕೇಳುತ್ತಿದೆ. ಪಠಾಣ್ ಚಿತ್ರ ರಿಲೀಸ್ ಗು ಮುನ್ನ ಸಾಕಷ್ಟು ಸದ್ದು ಮಾಡಿತ್ತು. ಬಿಕಿನಿ ವಿವಾದದ ಬೆನ್ನಲೇ ಪಠಾಣ್ ಚಿತ್ರ ಬಿಡುಗಡೆಗೊಂಡಿದ್ದು ದಾಖಲೆ ಸ್ರಷ್ಟಿಸುತ್ತಿದೆ.

ಪಠಾಣ್ ಮೊದಲ ದಿನವೇ ಕೋಟಿ ಕೋಟಿ ಹಣ ಬಾಚಿಕೊಂಡಿದೆ. ಬಹುನಿರೀಕ್ಷಿತ ಪಠಾಣ್ ಚಿತ್ರ ಇದೀಗ ತೆರೆಕಂಡ ಮೊದಲ ದಿನವೇ ಬಾಕ್ಸ್ ಆಫೀಸ್ ಅನ್ನು ಕೊಳ್ಳೆಹೊಡೆಯುತ್ತಿದೆ.

Image Credit: instagram

ಪಠಾಣ್ ಚಿತ್ರದ ಬಿಕಿನಿ ವಿವಾದದ ಹೋರಾಟದ ದ್ವನಿ ಸೋಶಿಯಲ್ ಮೀಡಿಯಾದಲ್ಲಿ ಇನ್ನು ಚರ್ಚೆ ನಡೆಯುತ್ತಲೇ ಇದೆ.

ಬಿಕಿನಿ ವಿವಾದದಿಂದಾಗಿ ಪಠಾಣ್ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಅದೆಷ್ಟೋ ಜನ ಹೋರಾಟಗಾರರು ದ್ವನಿ ಎತ್ತುತ್ತಿದ್ದರು.

ಬಿಕಿನಿ ವಿವಾದದಿಂದಾಗಿ ಪಠಾಣ್ ಚಿತ್ರದ ಕೆಲವು ದ್ರಶ್ಯಗಳನ್ನು ತೆಗೆಯುವಂತೆ ಸೆನ್ಸಾರ್ ಮಂಡಳಿ ಆದೇಶ ನೀಡಿತ್ತು. ಇದೆಲ್ಲದರ ನಡುವೆ ಇದೀಗ ಪಠಾಣ್ ಚಿತ್ರ ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯಲು ಮುಂದಾಗಿದೆ.

Image Credit: instagram

ಸಿನಿ ಪ್ರಿಯರ ಬಹು ನಿರೀಕ್ಷಿತ ಚಿತ್ರ ಪಠಾಣ್ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಶಾರುಖ್ ಖಾನ್ (Shah Rukh Khan) ಹಾಗೂ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಪಠಾಣ್ ಚಿತ್ರ ರಿಲೀಸ್ ಆಗಿದ್ದು ಈಗಾಗಲೇ ಸಾಕಷ್ಟು ಮೆಚ್ಚುಗೆ ಪಡೆದಿದೆ.

ಇನ್ನು ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ಸೇನಾಧಿಪತಿಯ ಪಾತ್ರ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಅಜೇಂಟ್ ನ ಪಾತ್ರ ಮಾಡಿದ್ದಾರೆ.ಈ ಚಿತ್ರ ಆಕ್ಷನ್ ಸೀಕ್ವೆನ್ಸ್ ಗಳಿಂದ ತುಂಬಿದ್ದು ನೋಡುಗರಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ.

Image Credit: instagram

ಪಠಾಣ್ ಮೂವಿ ಫಸ್ಟ್ ಡೇ ಕಲೆಕ್ಷನ್ 
ಬಹು ನಿರೀಕ್ಷಿತ ಚಿತ್ರ ಪಠಾಣ್ ಇದೀಗ ಮೊದಲ ದಿನವೇ ಬರೋಬ್ಬರಿ 45 ರಿಂದ 50 ಕೋಟಿ ಹಣ ಗಳಿಸಿದೆ ಎನ್ನಲಾಗುತ್ತಿದೆ. ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ಇದೀಗ ಬಾಕ್ಸ್ ಆಫೀಸ್ ಅನ್ನು ದೂಳೀಪಟ ಮಾಡಲು ಮುಂದಾಗಿದೆ.

ಸಿನಿ ಪ್ರಿಯರಿಂದ ಪಠಾಣ್ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿದರೆ ಇನ್ನು ಮೂರು ನಾಲ್ಕು ದಿನಗಳಲ್ಲಿ ಪಠಾಣ್ ಚಿತ್ರ 100 ರಿಂದ 150 ಕೋಟಿ ಹಣ ಗಳಿಸುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.

Image Credit: instagram

ಪಠಾಣ್ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್
ಶಾರುಖ್ ಖಾನ್ ಹಾಗು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ಮೊದಲ ದಿನವೇ ಕೋಟಿ ಕೋಟಿ ಹಣ ಗಳಿಸಿದೆ. ಇನ್ನು ಪಠಾಣ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 51 ಕೋಟಿ ಹಣ ಗಳಿಸಿ ದಾಖಲೆ ಬರೆಯುತ್ತಿದೆ. ಇಂದು ಮತ್ತು ನಾಳೆ ರಜೆ ಇರುವ ಕಾರಣ ಚಿತ್ರದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗಿಲಿದ್ದು, 65 ರಿಂದ 75 ಕೋಟಿ ಹಣ ಗಳಿಸುವ ಸಾಧ್ಯತೆ ಇದೆ.

ಪಠಾಣ್ ಚಿತ್ರ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದ್ದು ಪಠಾಣ್ ಇನ್ನು ಎಷ್ಟು ಕೋಟಿ ಹಣ ತನ್ನದಾಗಿಸಿಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field