Pavithra Gowda Health: ಪೋಲೀಸರ ಮುಂದೆ ನಾಟಕ ಮಾಡಿದ್ರಾ ಪವಿತ್ರ ಗೌಡ….? ಆಸ್ಪತ್ರೆ ಸೇರಿಕೊಂಡ ಪವಿತ್ರ ಗೌಡ.

ಪೋಲೀಸರ ಮುಂದೆ ನಾಟಕ ಮಾಡಿದ್ರಾ ಪವಿತ್ರ ಗೌಡ....?

Pavithra Gowda Health Issue: ಸದ್ಯ ರಾಜ್ಯದೆಲ್ಲೆಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬಾರಿ ಚರ್ಚೆಯಾಗುತ್ತಿದೆ. ನಟ ದರ್ಶನ್ ಹಾಗು ಅವರ ಗೆಳತೀ ಪವಿತ್ರ ಗೌಡ ಸೇರಿದಂತೆ ಒಟ್ಟು 17 ಜನ ಆರೋಪಿಗಳನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ. ಪೊಲೀಸರು ಎಲ್ಲ ಅಪರಾಧಿಗಳನ್ನು ತನಿಖೆ ಮಾಡುತ್ತಿದ್ದಾರೆ. ಈ ಕೊಲೆಯಲ್ಲಿ ಯಾರ ಪಾಲು ಎಷ್ಟಿದೆ ಎನ್ನುವ ಬಗ್ಗೆ ಪೊಲೀಸರು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ.

ಹೆಚ್ಚಿನ ಮಾಹಿತಿ ಪಡೆಯಲು ನಟಿ ಪವಿತ್ರ ಗೌಡ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ವಿಚಾರಣೆಯ ಸಮಯದಲ್ಲಿ ಪವಿತ್ರ ಗೌಡ ಆರೋಗ್ಯದಲ್ಲಿ ಏರುಪೇರಾಗಿದೆ. ಅಷ್ಟಕ್ಕೂ ನಟಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಿದ್ರ ಎನ್ನುವ ಅನುಮಾನ ಕೂಡ ಹುಟ್ಟಿದೆ.

Pavitra Gowda Health Issue
Image Credit: Deccanherald

ಆಸ್ಪತ್ರೆ ಸೇರಿಕೊಂಡ ಪವಿತ್ರ ಗೌಡ
ಚಿತ್ರದುರ್ಗದಲ್ಲಿ ನಡೆದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಎ1 ಆಗಿರುವ ಪವಿತ್ರಾ ಗೌಡ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ತನಿಖೆಯ ವೇಳೆಯಲ್ಲಿ ನಟಿ ಪವಿತ್ರ ಗೌಡ ಅಸ್ವಸ್ಥರಾಗಿದ್ದಾರೆ. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಪವಿತ್ರ ಗೌಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಇದೀಗ ಸುಸ್ತು, ನಿಶ್ಕತಿ ಎಂದು ಪವಿತ್ರಾ ಗೌಡ ಪೊಲೀಸರ ಮುಂದೆ ನಟಿಸಿದ್ರ…? ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.

ಪೋಲೀಸರ ಮುಂದೆ ನಾಟಕ ಮಾಡಿದ್ರಾ ಪವಿತ್ರ ಗೌಡ….?
ಪೊಲೀಸರ ವಿಚಾರಣೆ ವೇಳೆ ಪವಿತ್ರಾ ಗೌಡ ನಾಟಕವಾಡಿರುವ ಶಂಕೆ ವ್ಯಕ್ತವಾಗಿದೆ. ವಿಚಾರಣೆಯ ವೇಳೆ ಟೈಮ್ ವೇಸ್ಟ್ ಮಾಡಲು ಪವಿತ್ರಾ ಗೌಡ ಡ್ರಾಮಾ ಮಾಡಿರಬಹುದಾ….? ಎನ್ನುವ ಮಾತುಗಳು ಕೇಳಿಬರುತ್ತಿದೆ. ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು. ಪೊಲೀಸರು ಪವಿತ್ರ ಗೌಡ ಅವರನ್ನು ಮಲ್ಲತ್ತಹಳ್ಳಿ ಸರ್ಕಾರಿ ಆಸ್ಪತ್ರೆಗೆ ಐವಿ (ಡ್ರಿಪ್ಸ್) ಗಾಗಿ ಕರೆದೊಯ್ದಿದ್ದಾರೆ. ಡ್ರಿಪ್ಸ್ ಹಾಕಿ ವಾಪಸ್ ಕರೆತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸದ್ಯ ಪವಿತ್ರ ಗೌಡ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಮತ್ತೆ ಕಸ್ಟಡಿಗೆ ತಗೆದುಕೊಳ್ಳಲಾಗಿದೆ.

Join Nadunudi News WhatsApp Group

Pavitra Gowda And Darshan Case
Image Credit: Hindustantimes

ಸದ್ಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಪವಿತ್ರಾ ಗೌಡ ಅವರಿಗೆ ಡ್ರಿಪ್ಸ್ ಹಾಕಿದ್ದಾರೆ. ಸರ್ಕಾರೀ ಆಸ್ಪತ್ರೆಯಲ್ಲಿ ನಟಿ ಪವಿತ್ರ ಗೌಡ ಚಿಕಿತ್ಸೆ ಪಡೆಯುತ್ತಿದ್ದಾರೆ. ತನಿಖೆಯ ವೇಳೆ ನಟಿಗೆ ಈ ರೀತಿಯಾಗಿರುವುದು ಸಾಕಷ್ಟು ಅನುಮಾನವನ್ನು ಮೂಡಿಸಿದೆ. ಎ1 ಆರೋಪಿಯಾಗಿರುವ ಪವಿತ್ರ ಗೌಡ ಪ್ರಕರಣದಿಂದ ಪಾರಾಗಲು ಈ ರೀತಿಯ ಡ್ರಾಮಾಗಳನ್ನು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಪೊಲೀಸರು ಪ್ರಕರಣದ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳೇ ಅಪರಾಧಿಗಳಾ..? ಎನ್ನುವ ಬಗ್ಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

Pavitra Gowda Health
Image Credit: Oneindia

Join Nadunudi News WhatsApp Group