Pavithra Gowda: ಕಿರಾಣಿ ಅಂಗಡಿ ಮಾಲೀಕನ ಮಗಳಾದ ಪವಿತ್ರ ಗೌಡ ಕೋಟಿಯ ಒಡತಿಯಾಗಿದ್ದು ಹೇಗೆ…?

ಪವಿತ್ರ ಬಾಳಲ್ಲಿ ದರ್ಶನ್ ಬಂದ ನಂತರ ಪವಿತ್ರ ಲೈಫ್ ಸ್ಟೈಲ್ ಹೇಗೆ ಬದಲಾಯಿತು..?

Pavithra Gowda Life Style: ಸದ್ಯ ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಪವಿತ್ರಾ ಗೌಡ ವಿಚಾರವಾಗಿ ಜೈಲು ಸೇರಿದ್ದಾರೆ. ದರ್ಶನ್ ಅವರ ಹುಟ್ಟುಹಬ್ಬದ ಸಮಯದಲ್ಲೆ ದರ್ಶನ್ ಹಾಗೂ ಪವಿತ್ರ ಗೌಡ ಸಂಬಂಧದ ವಿಚಾರಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಆದರೆ ಸದ್ಯ ಖ್ಯಾತ ನಟನಾದ ದರ್ಶನ್ ಓರ್ವ ಹೆಣ್ಣಿನ ಸಲುವಾಗಿ ಕೊಲೆ ಮಾಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಪ್ರಕರಣದ ನಂತರ ದರ್ಶನ್ ಹಾಗೂ ಪವಿತ್ರ ಗೌಡ ಸಂಬಂಧದ ವಿಚಾರ ಮತ್ತಷ್ಟು ಹೈಲೈಟ್ ಆಗುತ್ತಿದೆ. ಸದ್ಯ ನಾವೀಗ ಈ ಲೇಖನದಲ್ಲಿ ಪವಿತ್ರ ಬಾಳಲ್ಲಿ ದರ್ಶನ್ ಬಂದ ನಂತರ ಪವಿತ್ರ ಲೈಫ್ ಸ್ಟೈಲ್ ಹೇಗೆ ಬದಲಾಯಿತು ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.

Pavitra Gowda Life Style
Image Credit: Infoflick

ಪವಿತ್ರ ಬಾಳಲ್ಲಿ ದರ್ಶನ್ ಬಂದ ನಂತರ ಪವಿತ್ರ ಲೈಫ್ ಸ್ಟೈಲ್ ಹೇಗಿತ್ತು ಗೊತ್ತಾ…?
ಪವಿತ್ರಾ ಗೌಡ ಈ ಹಿಂದೆ ಸಂಜಯ್ ಸಿಂಗ್ ಅವರನ್ನು ಮದುವೆಯಾಗಿದ್ದರು. ವಿಚ್ಛೇದನದ ನಂತರ ಅವರು ನಟ ದರ್ಶನ್ ಜೊತೆ ಸಂಬಂಧ ಹೊಂದಿದ್ದರು. ಮಧ್ಯಮ ವರ್ಗದ ಹುಡುಗಿಯಾಗಿದ್ದ ಪವಿತ್ರಾ ಗೌಡಗೆ ದರ್ಶನ್ ಭೇಟಿಯಾದ ಮೇಲೆ ಸಂಪತ್ತಿನ ಕಿರೀಟ ಸಿಕ್ಕಿದೆ ಎನ್ನುತ್ತಾರೆ ಹಲವರು. ದರ್ಶನ್ ಬಂದ ಮೇಲೆ ಪವಿತ್ರ ಕೋಟಿ ಕೋಟಿ ಆಸ್ತಿಗೆ ಒಡೆಯರಾಗಿದ್ದರು. ದರ್ಶನ್ ಅವರನ್ನು ಭೇಟಿಯಾದ ನಂತರ ಪವಿತ್ರಾ ಅವರ ಸ್ನೇಹಿತರ ವಲಯವೇ ಬದಲಾಯಿತು ಎಂದು ಅವರ ಆಪ್ತರು ಹೇಳಿದ್ದಾರೆ.

ದರ್ಶನ್ ಅವರ ಗೆಳೆಯರೆಲ್ಲಾ ಅವರ ಸ್ನೇಹಿತರಾಗಿದ್ದು, ಪವಿತ್ರ ಹೊಸ ವ್ಯಾಪಾರವನ್ನೂ ಪ್ರಾರಂಭಿಸಿದ್ದರು. ಮಿಡಲ್ ಕ್ಲಾಸ್ ಹುಡುಗಿ ಪವಿತ್ರಾ ದರ್ಶನ್ ಅವರನ್ನು ಭೇಟಿಯಾದ ನಂತರ ಬ್ರಾಂಡೆಡ್ ಬಟ್ಟೆಗಳನ್ನು ಧರಿಸಲು ಪ್ರಾರಂಭಿಸಿದಳು. ಲಕ್ಷ ಲಕ್ಷ ಮೌಲ್ಯದ ಒಡವೆಗಳನ್ನು ಧರಿಸಲು ಆರಂಭಿಸಿದ್ದರು. ಉದ್ಯಮದ ದೊಡ್ಡ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ತನ್ನ ಫ್ರೆಂಡ್ಸ್ ಸರ್ಕಲ್ ಅನ್ನು ಬಲಪಡಿಸಿಕೊಂಡಿದ್ದರು.

Join Nadunudi News WhatsApp Group

Actress Pavitra Gowda
Image Credit: Zee News

ಕಿರಾಣಿ ಅಂಗಡಿ ಮಾಲೀಕನ ಮಗಳಾದ ಪವಿತ್ರ ಗೌಡ ಕೋಟಿಯ ಒಡತಿಯಾಗಿದ್ದು ಹೇಗೆ…?
ಸಿನಿಮಾ ರಂಗಕ್ಕೆ ಕಾಲಿಟ್ಟ ಪವಿತ್ರಾ ಗೌಡಗೆ ಅದೃಷ್ಟ ಖುಲಾಯಿಸಲಿಲ್ಲ. ಸಿನಿಮಾರಂಗದಲ್ಲಿ ಯಶಸ್ಸು ಕಾಣದ ಪವಿತ್ರ ಆರ್ ಆರ್ ನಗರದಲ್ಲಿ ರೆಡ್ ಕಾರ್ಪೆಟ್ ಸ್ಟುಡಿಯೋ 777 ಎಂಬ ಫ್ಯಾಶನ್ ಬೊಟಿಕ್ ಆರಂಭಿಸಿದ್ದರು. ಈ ಬೋಟಿಕ್ ನ ಓನರ್ ಪವಿತ್ರ. ಡಿಸೈನರ್ ವೇರ್ ಗಳನ್ನು ಆಕೆಯ ಬೊಟಿಕ್ ನಲ್ಲಿ ಕಾಣಬಹುದು ಮತ್ತು ಅನೇಕ ಸೆಲೆಬ್ರಿಟಿಗಳು ಇಲ್ಲಿಗೆ ಬಟ್ಟೆ ಖರೀದಿಸಲು ಬರುತ್ತಾರೆ. ಕ್ರೇಜಿ ಕ್ವೀನ್ ರಕ್ಷಿತಾ, ಅಮೂಲ್ಯ, ಸೋನಾಲ್ ಮುಂತಾದ ಖ್ಯಾತ ನಾಯಕಿಯರು ಆಗಮಿಸಿ ಈ ಬೋಟಿಕ್ ಉದ್ಘಾಟನೆಗೆ ಬೆಂಬಲ ನೀಡಿದರು.

ಈ ರೆಡ್ ಕಾರ್ಪೆಟ್ ಸ್ಟುಡಿಯೋ ತೆರೆಯಲು ಪವಿತ್ರ ಗೌಡ ಅವರಿಗೆ ದರ್ಶನ್ 30 ಲಕ್ಷ ರೂಪಾಯಿ ಕೊಟ್ಟಿದ್ದರು ಎನ್ನಲಾಗಿದೆ. ಪವಿತ್ರಾ ಸಾಲ ಪಡೆದು ಉಳಿದ ಹಣವನ್ನು ಹೂಡಿಕೆ ಮಾಡಿದ್ದಳು ಎನ್ನಲಾಗಿದೆ. ಲಕ್ಷ ಲಕ್ಷ ಮೌಲ್ಯದ ಕಾರುಗಳು, ಒಡವೆಗಳು. ಡಿಸೈನರ್ ಕೂಡ ಧರಿಸುತ್ತಾರೆ. ಪ್ರತಿಯೊಂದು ಬಟ್ಟೆ, ಕೈಗಡಿಯಾರಗಳು ದುಬಾರಿ ಬ್ರಾಂಡ್ ಆಗಿದ್ದು ತುಂಬಾ ಎಕ್ಸ್ಪೆನ್ಸಿವ್. ಅಂದಹಾಗೆ, ಹತ್ತು ಹನ್ನೆರಡು ವರ್ಷಗಳ ಹಿಂದೆ ಪವಿತ್ರಾ ಗೌಡರ ಜೀವನ ಹೀಗಿರಲಿಲ್ಲ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಮಗಳಾಗಿರುವ ಈಕೆ ಕೆಲ ವರ್ಷಗಳ ಹಿಂದೆಯಷ್ಟೇ ಇಂತಹ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅದು ಪವಿತ್ರ ಬಾಳಲ್ಲಿ ದರ್ಶನ್ ಬಂದ ನಂತರ ಕಿರಾಣಿ ಅಂಗಡಿ ಮಾಲಿಕನ ಮಗಳು ಸದ್ಯ ಕೋಟಿ ಕೋಟಿ ಒಡತಿಯಾಗಿದ್ದಾಳೆ ಎಂದರೆ ನಂಬಲು ಅಸಾಧ್ಯವೇ ಸರಿ.

Pavitra Gowda Latest News
Image Credit: Filmibeat

Join Nadunudi News WhatsApp Group