Pavitra Lokesh: ಅಣ್ಣಾವ್ರು ಕೊಟ್ಟ ಬೆಳ್ಳಿ ಲೋಟದಲ್ಲಿ ಟೀ ಕುಡಿಯುತ್ತಾರಂತೆ ಪವಿತ್ರ ಲೋಕೇಶ್, ಖಡಕ್ ಉತ್ತರ ನೀಡಿದ ನಟಿ.

ಪವಿತ್ರ ಲೋಕೇಶ್ ಅವರು ತಮ್ಮ ಬಗ್ಗೆ ನೆಗಟಿವ್ ಕಮೆಂಟ್ ಮಾಡುವವರ ವಿರುದ್ಧ ಖಡಕ್ ಉತ್ತರ ನೀಡಿದ್ದಾರೆ.

Pavitra Lokesh And Naresh Babu: ಇತ್ತೀಚಿಗೆ ನಟ ನರೇಶ್ ಬಾಬು (Naresh Babu) ಹಾಗೂ ನಟಿ ಪವಿತ್ರ ಲೋಕೇಶ್ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಂತೂ ಸೋಶಿಯಲ್ ಮೀಡಿಯಾದಲ್ಲಿ ನರೇಶ್ ಬಾಬು ಹಾಗೂ ನಟಿ ಪವಿತ್ರ ಲೋಕೇಶ್ (Pavitra Lokesh) ಅವರ ಮದುವೆಯ ಸುದ್ದಿಗಳು ಸಾಕಷ್ಟು ಹರಿದಾಡಿವೆ.

ಇನ್ನು ನರೇಶ್ ಬಾಬು ಹಾಗೂ ನಟಿ ಪವಿತ್ರ ಲೋಕೇಶ್ ಅವರ ಜೀವನ ಆಧಾರಿತ ಚಿತ್ರದ ರಿಲೀಸ್ ಆಗುವ ಬಗ್ಗೆ ಕೂಡ ಸುದ್ದಿಯಾಗಿದೆ. ಚಿತ್ರದ ಬಿಡುಗಡೆಯ ದಿನಾಂಕ ಕೂಡ ನಿಗದಿಯಾಗಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಈ ಇಬ್ಬರ ಮದುವೆಯ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ನೆಗಟಿವ್ ಕಮೆಂಟ್ ಗಳು ಹೆಚ್ಚುತ್ತಿವೆ.

Pavitra Lokesh And Naresh Babu
Image Source: News18

ನೆಗೆಟಿವ್ ಕಮೆಂಟ್ ಗಳಿಗೆ ಖಡಕ್ ಉತ್ತರ ನೀಡಿದ ಪವಿತ್ರ ಲೋಕೇಶ್
ಈ ಹಿಂದೆ ಪವಿತ್ರ ಲೋಕೇಶ್ ಅವರು ನರೇಶ್ ಅವರನ್ನು ದುಡ್ಡಿಗಾಗಿ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಸಾಕಷ್ಟು ಹರಿದಾಡಿದ್ದವು. ಈ ಬಗ್ಗೆ ಪವಿತ್ರ ಲೋಕೇಶ್ ಅವರ ಮಾಜಿ ಪತಿ ಕೂಡ ಹೇಳಿಕೆ ನೀಡಿದ್ದರು. ಇನ್ನು ನರೇಶ್ ಬಾಬು ಅವರ ಪತ್ನಿ ರಮ್ಯಾ ಕೂಡ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿಗಳು ಸಾಕಷ್ಟು ವೈರಲ್ ಆಗಿದ್ದವು. ಇದೀಗ ನಟಿ ಈ ಹೇಳಿಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

Pavitra Lokesh And Naresh Babu
Image Source: Suman Tv

ಅಣ್ಣಾವ್ರು ಕೊಟ್ಟ ಬೆಳ್ಳಿ ಲೋಟದಲ್ಲಿ ಟೀ ಕುಡಿಯುತ್ತಾರಂತೆ ಪವಿತ್ರ ಲೋಕೇಶ್
ನಾನು ದುಡ್ಡಿಗಾಗಿ ಯಾರ ಹಿಂದೆಯೂ ಹೋಗಿಲ್ಲ. ನಾನೇ ದುಡಿದು ಬದುಕುತ್ತಿದ್ದೇನೆ. ಬೇರೆ ಯಾವ ರೀತಿಯು ದುಡ್ಡು ಮಾಡುತ್ತಿಲ್ಲ. ನನ್ನ ತಂದೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸಿನಿಮಾ ರಂಗಕ್ಕೆ ಬಂದವರು. ನಂತರ ನಟನಾಗಿ ಗುರುತಿಸಿಕೊಂಡಿದ್ದಾರೆ.

ನಾನು ಈಗಲೂ ಕೂಡ ಅಣ್ಣಾವ್ರು ಕೊಟ್ಟ ಲೋಟದಲ್ಲೇ ಟಿ ಕುಡಿಯುತ್ತೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದು ಪವಿತ್ರ ಲೋಕೇಶ್ ಅವರು ತಮ್ಮ ಬಗ್ಗೆ ನೆಗಟಿವ್ ಕಮೆಂಟ್ ಮಾಡುವವರ ವಿರುದ್ಧ ಖಡಕ್ ಉತ್ತರ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group