Pavitra Lokesh: ಮದುವೆ ಗಾಸಿಪ್ ಬಳಿಕ ಇದೀಗ ಇನ್ನೊಂದು ಸಂತೋಷದ ಸುದ್ದಿ ಹಂಚಿಕೊಂಡ ಪವಿತ್ರಾ ಲೋಕೇಶ್.

ಪವಿತ್ರ ಲೋಕೇಶ್ ಸದಾ ಕಾಲ ಕಾಂಟ್ರವರ್ಸಿ ಯಲ್ಲೇ ಇರುತ್ತಾರೆ. ಈಗಲೂ ಕೂಡ ಅವರ ಹೆಸರು ಕೇಳಿ ಬರುತ್ತಿದ್ದು, ಆದ್ರೆ ಅದು ಯಾವುದೇ ಕಾಂಟ್ರವರ್ಸಿ ಕಾರಣಕ್ಕೆ ಅಲ್ಲ ಬದಲಾಗಿ ಶಿಕ್ಷಣದ ವಿಚಾರಕ್ಕಾಗಿ.

Pavitra Lokesh: ಕೆಲವು ದಿನಗಳ ಹಿಂದೆ ಪವಿತ್ರ ಲೋಕೇಶ್(Pavitra Lokesh) ಹಾಗೂ ತೆಲುಗು ನಟ ನರೇಶ್(Naresh) ಅವರ ಮದುವೆ ಹಾಗೂ ಅವರ ರಿಲೇಷನ್ಶಿಪ್ ಕುರಿತಾದ ಗಾಸಿಪ್ಗಳು ಬಹು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದ್ದವು.ಇವುಗಳಿಗೆ ಸಾಕ್ಷಿ ಎಂಬಂತೆ ನರೇಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಂತಹ ಮದುವೆ ವಿಡಿಯೋ ಕೂಡ ಬಾರಿ ವೈರಲ್ ಆಗಿದ್ದು.

ತನ್ನ ಎರಡನೇ ಪತಿಯನ್ನು ಬಿಟ್ಟು ಪವಿತ್ರ ಲೋಕೇಶ್ ಹಾಗೂ ಮೂರನೇ ಹೆಂಡತಿಯನ್ನು ಬಿಟ್ಟು ನಾಲ್ಕನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನರೇಶ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಯಿತು.
ಒಟ್ಟಾರೆ ಪವಿತ್ರ ಲೋಕೇಶ್ ಸದಾ ಕಾಲ ಕಾಂಟ್ರವರ್ಸಿ ಯಲ್ಲೇ ಇರುತ್ತಾರೆ. ಈಗಲೂ ಕೂಡ ಅವರ ಹೆಸರು ಕೇಳಿ ಬರುತ್ತಿದ್ದು, ಆದ್ರೆ ಅದು ಯಾವುದೇ ಕಾಂಟ್ರವರ್ಸಿ ಕಾರಣಕ್ಕೆ ಅಲ್ಲ ಬದಲಾಗಿ ಶಿಕ್ಷಣದ ವಿಚಾರಕ್ಕಾಗಿ.

Pavitra lokesh
Image Source: Youtube

ಹೌದು ಕನ್ನಡ ವಿಶ್ವವಿದ್ಯಾಲಯದ ಪಿಎಚ್‌ಡಿ ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಸೇರಿದಂತೆ 259 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.ಈ ಕುರಿತಾಗಿ ಮಾತನಾಡಿದ ಕನ್ನಡ ವಿವಿ ಕುಲಸಚಿವ ಡಾ.ಸುಬ್ಬಣ್ಣ ರೈ,”ಕನ್ನಡ ವಿವಿಯಲ್ಲಿ ವಿಜ್ಞಾನ ನಿಕಾಯ ಹೊರತಾಗಿ ಭಾಷಾ ನಿಕಾಯ, ಸಮಾಜ ವಿಜ್ಞಾನ ಮತ್ತು ಲಲಿತಾ ಕಲೆ ನಿಕಾಯದ ವಿವಿಧ ವಿಭಾಗಗಳಡಿ ಸಂಶೋಧನೆಗೆ ಅವಕಾಶ ಕಲ್ಪಿಸಲಾಗುತ್ತದೆ.ಮೂರು ನಿಕಾಯಗಳಡಿ ಸಂಶೋಧನೆಗೆ ಆಸಕ್ತಿ ತೋರಿ 981 ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಿದ್ದರು. ಆ ಪೈಕಿ ಒಟ್ಟು 259 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ” ಎಂದು ಮಾಹಿತಿ ಕೂಡ ನೀಡಿದ್ದಾರೆ.

ಕನ್ನಡ ವಿವಿ ವ್ಯಾಪ್ತಿಯ ಅಧ್ಯಯನ ವಿಭಾಗ, ಮಾನ್ಯತಾ ಕೇಂದ್ರ, ಹಾಗೂ ವಿಸ್ತರಣಾ ಕೇಂದ್ರಗಳಲ್ಲಿ ಲಭ್ಯವಿರುವ ಸ್ಥಾನ ಮತ್ತು ಮಾರ್ಗದರ್ಶಕರ ಸಂಖ್ಯೆಗೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗುತ್ತದೆ. ನಟಿ ಪವಿತ್ರಾ ಲೋಕೇಶ್ ಅವರು ಭಾಷಾ ನಿಕಾಯದಡಿ ಬೆಳಗಾವಿ ವಿಸ್ತರಣಾ ಕೇಂದ್ರದಲ್ಲಿ ಸಂಶೋಧನೆ ಕೈಗೊಳ್ಳಲು ಪರೀಕ್ಷೆ ಬರೆದಿದ್ದರು. ಕಳೆದ ಮೇ 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿತ್ತು. ಹಾಗಾದ್ರೆ ಪವಿತ್ರಾ ಲೋಕೇಶ್ ಈ ಇನ್ನು ಮುಂದೆ ಡಾ. ಪವಿತ್ರ ಲೋಕೇಶ್ ಆಗಲಿದ್ದಾರೆ .

Pavitra lokesh
Image Source: Youtube

Join Nadunudi News WhatsApp Group

Join Nadunudi News WhatsApp Group