Pawan Kalyan Remuneration: ದುಬಾರಿ ಆಯಿತು ಒಂದು ಚಿತ್ರಕ್ಕೆ ಪವನ್ ಕಲ್ಯಾಣ್ ಪಡೆಯುವ ಸಂಭಾವನೆ.
Actor Pawan Kalyan Movie Per Salary: ನಟ ಪವನ್ ಕಲ್ಯಾಣ್ (Pawan Kalyan) ಅವರು ಸಾಕಷ್ಟು ಸಿನಿಮಾದಲ್ಲಿ ನಟಿಸುವುದರ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ನಟ ಪವನ್ ಕಲ್ಯಾಣ್ ಅವರು ತಮ್ಮ ಸಂಭಾವನೆ ವಿಚಾರವಾಗಿ ಸುದ್ದಿಯಾಗಿದ್ದಾರೆ. ನಟ ಪವನ್ ಕಲ್ಯಾಣ್ ಅವರು ಹೊಸ ಹೊಸ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ನಿಮ್ಮ ಪ್ರೀತಿಯೇ ನನ್ನ ಧೈರ್ಯ ಎಂದು ಹೇಳಿದ ನಟ ಪವನ್ ಕಲ್ಯಾಣ್
ಮಚಲಿಪಟ್ಟಣದಲ್ಲಿ ಜನಸೇನೆಯ 10 ನೇ ವಾರ್ಷಿಕೋತ್ಸವ ಸಭೆ ನಡೆಯಿತು. ಈ ಸಂದರ್ಭದಲ್ಲಿ ಜನಸೇನಾ ನಾಯಕ ಪವನ್ ಕಲ್ಯಾಣ್ ತನ್ನ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಪ್ರೀತಿಯೇ ನನ್ನ ಧೈರ್ಯ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ತಮ್ಮ ಸಿನಿಮಾ ಸಂಭಾವನೆ ಬಗ್ಗೆ ಮಾತನಾಡಿದ ನಟ ಪವನ್ ಕಲ್ಯಾಣ್
ಈ ಸಂದರ್ಭದಲ್ಲಿ ನಟ ಪವನ್ ಕಲ್ಯಾಣ್ ತನ್ನ ಸಿನಿಮಾಗಳ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ಸಾವಿರಾರು ಕೋಟಿ ಪ್ಯಾಕೆಜ್ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಆದರೆ ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ನಟ ಹೇಳಿಕೊಂಡಿದ್ದಾರೆ. ನಾನು ಸಿನಿಮಾದಿಂದ ಬೇಕಾದಷ್ಟು ಹಣ ಗಳಿಸುತ್ತೇನೆ ಎಂದಿದ್ದಾರೆ.
ನನಗೆ ಹಣದ ಅವಶ್ಯಕತೆ ಇಲ್ಲ ಎಂದ ನಟ ಪವನ್ ಕಲ್ಯಾಣ್
ನನಗೆ ಹಣದ ಅವಶ್ಯಕೆತೆ ಇಲ್ಲ ಎಂದ ನಟ ಪವನ್ ಕಲ್ಯಾಣ್ ಅವರು ಒಂದು ಚಿತ್ರಕ್ಕೆ 45 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇದು ಅಭಿಮಾನಿಗಳು ಕೊಟ್ಟ ಪ್ರೀತಿ ಎಂದಿದ್ದಾರೆ.
ನನಗೆ ಹಣದ ಆಸೆ ಇಲ್ಲ, ಅಂತಹ ವ್ಯಕ್ತಿ ಕೂಡ ನಾನಲ್ಲ ಎಂದು ನಟ ಪವನ್ ಕಲ್ಯಾಣ್ ಹೇಳಿದ್ದಾರೆ. ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ನಟ ಕೋಟಿ ಕೋಟಿ ಮುಂಗಡ ಸಂಭಾವನೆಯನ್ನು ಕೂಡ ಪಡೆದಿದ್ದಾರೆ.