Paytm Update: Paytm ಬಳಕೆದಾರರಿಗೆ ಹೊಸ ಸೇವೆ, ದಿನಸಿ ವಸ್ತುಗಳ ಖರೀದಿಗೆ Paytm ವಿಶೇಷ ಕೊಡುಗೆ.
ದಿನಸಿ ವಸ್ತುಗಳ ಖರೀದಿಗೆ ವಿಶೇಷ ಆಫರ್ ನೀಡಲು ಮುಂದಾದ Paytm.
Paytm New Update: ಸದ್ಯ ದೇಶದಲ್ಲಿ UPI ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದರೆ ತಪ್ಪಾಗಲಾರದು. UPI ಬಳಕೆದಾರರಿಗೆ ವಾರಕ್ಕೆ ವೊಂದಾದರೂ ಹೊಸ ಹೊಸ Update ಪರಿಚಯವಾಗುತ್ತಿದೆ. UPI ಬಳಕೆದಾರರು ಇತ್ತೀಚಿಗೆ ಹೆಚ್ಚಿನ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಜನರು ಹೆಚ್ಚಾಗಿ ನಗದು ರಹಿತ ವಹಿವಾಟನ್ನು ಬಳಸುತ್ತಿದ್ದಾರೆ ಎನ್ನಬಹುದು.
UPI Payment ಗಾಗಿ Google pay ,PhonePe Paytm ಸೇರಿದಂತೆ ಇನ್ನಿತರ Application ಗಳು ಬಳಕೆಯಲ್ಲಿವೆ. ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. ದೇಶದ ಕೋಟ್ಯಂತರ ಜನರ ಸ್ನೇಹಿಯಾಗಿರುವ UPI ಸದ್ಯ ಮತ್ತೊಂದು ನೂತನ ಫೀಚರ್ ಅನ್ನು ಗ್ರಾಹಕರಿಗೆ ನೀಡಲಿದೆ. ಈ ಹೊಸ ಫೀಚರ್ Paytm ಬಳಕೆದಾರರಿಗೆ ಲಭ್ಯವಾಗಲಿದೆ.
Paytm ಬಳಕೆದಾರರಿಗೆ ಹೊಸ ಸೇವೆ
UPI Application ಗಳಲ್ಲಿ Paytm ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು. Paytm ತನ್ನ ಕ್ಯಾಶ್ ಬ್ಯಾಕ್ ಆಯ್ಕೆಯ ಮೂಲಕ ಹೆಚ್ಚು ಗ್ರಾಹಕರನ್ನು ಪಡೆದುಕೊಂಡಿದೆ. ಸದ್ಯ ಪೆಟಿಎಂ ನಲ್ಲಿ ಹತ್ತು ಹಲವು ಆಕರ್ಷಕ ಫೀಚರ್ ಗಳು ಲಭ್ಯವಾಗಲಿದ್ದು ಇದೀಗ ಬಳಕೆದಾರರಿಗಾಗಿ ಹೊಸ ಫೀಚರ್ ಲಭ್ಯವಾಗಲಿದೆ. ಈ ನೂತನ ಫೀಚರ್ ಕೋಟ್ಯಾಂತರ ಬಳಕೆದಾರರಿಗೆ ಸಹಾಯವಾಗಲಿದೆ. ನೀವು Paytm ಬಳಕೆದಾರರಾದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.
ದಿನಸಿ ವಸ್ತುಗಳ ಖರೀದಿಗೆ Paytm ವಿಶೇಷ ಕೊಡುಗೆ
ಸದ್ಯ Paytm ನಲ್ಲಿ ಮೊಬೈಲ್ ರಿಚಾರ್ಜ್, ಟಿವಿ ರಿಚಾರ್ಜ್ ಸೇರಿದಂತೆ ಅನೇಕ ಪಾವತಿಗಳನ್ನು ಮಾಡಲು ಅವಕಾಶ ಲಭ್ಯವಿತ್ತು. ಇದೀಗ Paytm ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ. Paytm ಇದೀಗ ದಿನಸಿ ವಸ್ತುಗಳ ಖರೀದಿಗೆ ವಿಶೇಷ ಆಫರ್ ಅನ್ನು ನೀಡಲು ಮುಂದಾಗಿದೆ.
National Cooperative Consumers’ Federation of India Ltd. ಸಹಭಾಗಿತ್ವದೊಂದಿಗೆ Paytm ಪಾಲುದಾರಿಕೆ ಹೊಂದಿದ್ದು, ಈರುಳ್ಳಿ, ಬೇಳೆಕಾಳು ಸೇರಿದಂತೆ ದಿನಸಿ ವಸ್ತುಗಳನ್ನು ಪೆಟಿಎಂ ಸೆ ಓಎನಿಸಿ ನೆಟ್ವರ್ಕ್ ಮೂಲಕ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ದಿನದಿ ವಸ್ತುಗಳನ್ನು Paytm ಬಳಕೆದಾರರು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು Paytm ಮೊದಲ ಬಾರಿಗೆ ಬಳಕೆದಾರರಿಗೆ WELCOME 100 ಕೋಡ್ ಅನ್ನು ಪ್ರಾರಂಭಿಸಿದೆ. ಈ ಕೋಡ್ ಗ್ರಾಹಕರಿಗೆ 200 ರೂ. ಗಿಂತ ಹೆಚ್ಚಿನ ಆರ್ಡರ್ ಗಳಿಗೆ 100 ರೂ. ಗಳ ರಿಯಾಯಿತಿಯನ್ನು ನೀಡುತ್ತದೆ.