Ads By Google

Paytm Ban: ದೇಶದಲ್ಲಿ ಬ್ಯಾನ್ ಆಗುತ್ತಾ Paytm ಅಪ್ಲಿಕೇಶನ್…? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ.

paytm ban in india

Image Credit: Original Source

Ads By Google

Paytm Service Stop: ಹಣದ ವಹಿವಾಟು, ರೀಚಾರ್ಜ್, ಟಿಕೆಟ್ ಬುಕಿಂಗ್, ಷೇರು ಮಾರುಕಟ್ಟೆ, ಐಪಿಒ, ವಿದ್ಯುತ್ ಬಿಲ್, ಫಾಸ್ಟ್ಯಾಗ್, ಕ್ರೆಡಿಟ್ ಕಾರ್ಡ್, ಸಾಲ, ವಿಮೆ, ಸ್ಥಿರ ಠೇವಣಿ ಹೇಗೆ ಸಾಕಷ್ಟು ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದ್ದ ಜನಪ್ರಿಯ UPI ಅಪ್ಲಿಕೇಶನ್ ಆಗಿರುವ Paytm ಇದೀಗ ದೇಶದಲ್ಲಿ ಬ್ಯಾನ್ ಆಗಿರುವ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ.

ಪೆಟಿಎಂ ಈವರೆಗೆ ತನ್ನ ಬಳಕೆದಾರರಿಗೆ ಸಾಕಷ್ಟು ಸೌಲಭ್ಯವನ್ನು ನೀಡುವ ಮೂಲಕ ವಹಿವಾಟನ್ನು ಸರಳಗೊಳಿಸಿತ್ತು. ಸದ್ಯ RBI ಪೆಟಿಎಂ ಮೇಲೆ ದಿಢೀರ್ ನಿರ್ಬಂಧ ಹೇರಿರಿರುವುದು ಬಳಕೆದಾರರಿಗೆ ಶಾಕ್ ನೀಡಿದೆ. ದೇಶದಲ್ಲಿ ಪೆಟಿಎಂ ಸೇವೆ ನಿಲ್ಲುತ್ತಾ..? ಅಥವಾ ಮುಂದುವರೆಯುತ್ತಾ..? ಎನ್ನುವ ಗೊಂದಲ ಸಾಕಷ್ಟು ಜನರಲ್ಲಿ ಮೂಡಿರಬಹುದು. ಇದೀಗ ನಾವು ಈ ಲೇಖನದಲ್ಲಿ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Image Credit: Rightsofemployees

ದೇಶದಲ್ಲಿ ಬ್ಯಾನ್ ಆಗುತ್ತಾ Paytm ಅಪ್ಲಿಕೇಶನ್…?
ಫೆಬ್ರವರಿ 29, 2024 ರ ನಂತರ ಯಾವುದೇ ಗ್ರಾಹಕ ಖಾತೆ, ಪ್ರಿಪೇಯ್ಡ್ ಮಾಧ್ಯಮ, ವ್ಯಾಲೆಟ್, ಫಾಸ್ಟ್ಯಾಗ್, NCMC ಕಾರ್ಡ್ ಇತ್ಯಾದಿಗಳಲ್ಲಿ ಯಾವುದೇ ಠೇವಣಿ ಅಥವಾ ಕ್ರೆಡಿಟ್ ವಹಿವಾಟು ಅಥವಾ ಟಾಪ್ ಅಪ್ ಅನ್ನು ಅನುಮತಿಸಲಾಗುವುದಿಲ್ಲ. ಆದಾಗ್ಯೂ, ಯಾವುದೇ ಬಡ್ಡಿ, ಕ್ಯಾಶ್‌ ಬ್ಯಾಕ್ ಅಥವಾ ಮರುಪಾವತಿಗಳನ್ನು ಕ್ರೆಡಿಟ್ ಮಾಡಲಾಗುವುದಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಇದರೊಂದಿಗೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರು ತಮ್ಮ ಉಳಿತಾಯ ಬ್ಯಾಂಕ್ ಖಾತೆ, ಚಾಲ್ತಿ ಖಾತೆ, ಪ್ರಿಪೇಯ್ಡ್ ಮಾಧ್ಯಮ, ಫಾಸ್ಟ್ಯಾಗ್, ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಸೇರಿದಂತೆ ಯಾವುದೇ ನಿರ್ಬಂಧವಿಲ್ಲದೆ ತಮ್ಮ ಖಾತೆಗಳಿಂದ ಬಾಕಿ ಹಣವನ್ನು ಹಿಂಪಡೆಯಲು ಅಥವಾ ಬಳಸಲು ಅನುಮತಿಸಲಾಗುವುದು ಎಂದು ಆರ್‌ಬಿಐ ಹೇಳಿದೆ.

Image Credit: Times Of India

Paytm ಮೇಲೆ RBI ನಿಷೇಧ ಹೇರಲು ಕಾರಣವೇನು..?
Paytm Wallet ಮತ್ತು ಅದರ ಬ್ಯಾಂಕ್ ನಡುವೆ ಕೋಟ್ಯಂತರ ರೂಪಾಯಿ ಮೌಲ್ಯದ ಸಂಶಯಾಸ್ಪದ ವಹಿವಾಟಿನ ಕಾರಣ RBI ಈ ನಿರ್ಬಂಧವನ್ನು ವಿಧಿಸಿದೆ. KYC ನಿಯಮಗಳನ್ನು ಪಾಲಿಸದೆ Paytm Payments Bank Limited ನಲ್ಲಿ ಲಕ್ಷಗಟ್ಟಲೆ ಖಾತೆಗಳನ್ನು ತೆರೆಯಲಾಗಿದೆ ಎಂದು ಆರೋಪಿಸಲಾಗಿದೆ. ಈ ಖಾತೆಗಳ ಮೂಲಕ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆದಿದೆ, ಇದು ಪ್ರಿಪೇಯ್ಡ್ ಉಪಕರಣಗಳ ನಿಗದಿತ ಮಿತಿಗಿಂತ ಹೆಚ್ಚಿದೆ, ಇದರಿಂದಾಗಿ ಅಕ್ರಮ ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಈ ಕಾರಣಕ್ಕೆ Paytm ಮೇಲೆ RBI ನಿಷೇಧ ಹೇರಿದೆ ಎನ್ನಲಾಗುತ್ತಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in