Paytm: ಕ್ರೆಡಿಟ್‌, ಡೆಬಿಟ್ ಕಾರ್ಡ್ ಬಳಸುವವರಿಗೆ ಗುಡ್ ನ್ಯೂಸ್, ಹೊಸ ಸೇವೆ ಆರಂಭಿಸಿದ ಪೆಟಿಎಂ.

ಇನ್ನುಮುಂದೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಹೆಚ್ಚು ಸುಲಭವಾಗಿ ಮಾಡಬಹುದು.

Paytm Sound Box: ದೇಶದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಜನರು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನೂ ಬಳಸುತ್ತಾರೆ. ಇನ್ನು ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಡೆಬಿಟ್ ಕಾರ್ಡ್ (Debit Card) ಹಾಗೂ ಕ್ರೆಡಿಟ್ ಕಾರ್ಡ್ ನ (Credit Card) ಸೌಲಭ್ಯವನ್ನು ನೀಡುತ್ತದೆ.

ಇನ್ನುಮುಂದೆ ಕಾರ್ಡ್ ಗಳ ಪಾವತಿಯನ್ನು ಸುಲಭವಾಗಿ ಮಾಡಬಹುದು. ನೀವು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಈ ಮಾಹಿತಿಯನ್ನು ತಿಳಿಯುದು ಉತ್ತಮವಾಗಿದೆ. ಹೆಚ್ಚು ಏಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವ ಜನರಿಗೆ ಈ ಸೇವೆ ಬಹಳ ಉಪಯುಕ್ತ ಎಂದು ಹೇಳಿದರೆ ತಪ್ಪಾಗಲ್ಲ.

Paytm New Service
Image Credit: Pallavaggarwal

Paytm New Service ಹೊಸ ಸೇವೆ ಆರಂಭಿಸಿದ ಪೆಟಿಎಂ 
ಫಿನ್ ಟೆಕ್ ಕಂಪನಿ Paytm ಹೊಸ ಸೇವೆಯನ್ನು ಪರಿಚಯಿಸಿದೆ. ಹೌದು ಇದೀಗ Paytm Card Sound Box ಸೇವೆಯನ್ನು ಪ್ರಾರಂಭಿಸಿದೆ. ಇದೊಂದು ವಿಶಿಷ್ಟವಾದ ಸಾಧನವಾಗಿದೆ. ಈ ಕಾರ್ಡ್ ಗಳ ಮೂಲಕ ಪಾವತಿಗಳನ್ನು ಹೆಚ್ಚು ಸುಲಭವಾಗಿ ಮಾಡಬಹುದು. ಇದು ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಉತ್ತಮವಾಗಿದೆ. Paytm ತಂದಿರುವ ಈ ಹೊಸ ಕಾರ್ಡ್ ಸೌಂಡ್ ಬಾಕ್ಸ್ ಬೆಲೆ 999 ರೂಪಾಯಿ ಆಗಿದೆ. ನೀವು ಮೊಬೈಲ್ ಪಾವತಿಗಳ ಜೊತೆಗೆ ಈ Paytm ಕಾರ್ಡ್ ಸೌಂಡ್ ಬಾಕ್ಸ್ ಮೂಲಕ ಕಾರ್ಡ್ ಪಾವತಿಗಳನ್ನು ನಿರ್ವಹಿಸಬಹುದು.

ಭಾರತದ ಸಣ್ಣ ಉದ್ಯಮಗಳಿಗೆ ಹೊಸ ಉತ್ಪನ್ನ ಗಳನ್ನೂ ತರುವವಲ್ಲಿ Paytm ಯಾವಾಗಲು ಮುಂದೆ ಇರುತ್ತದೆ ಹಾಗೆ ಪಾವತಿ ಹಾಗೂ ಹಣಕಾಸು ಸೇವೆಗಳ ಸಮಸ್ಯೆಗಳನ್ನು ಬಗೆಹರಿಸಲು ನಾವು ಯಾವಾಗಲು ಪ್ರಯತ್ನಿಸುತ್ತೇವೆ ಎಂದು ಸಿಇಒ ಮತ್ತು ಸಂಸ್ಥಾಪಕ ವಿಜಯ್ ಶೇಖರ್ ಶರ್ಮ ಹೇಳಿದ್ದಾರೆ. ಈ ಸೇವೆ ದೇಶದ 550 ನಗರಗಳಲ್ಲಿ ಲಭ್ಯವಾಗಲಿದೆ ಹಾಗೆ ಈ ಸೌಂಡ್ ಬಾಕ್ಸ್ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಸಿಇಒ ತಿಳಿಸಿದ್ದಾರೆ.

paytm soundbox price
Image Credit: Gadgets360

Paytm ಸೌಂಡ್ ಬಾಕ್ಸ್ ವೈಶಿಷ್ಟ್ಯಗಳು
Paytm ಕಾರ್ಡ್ ನ ಧ್ವನಿ ಪೆಟ್ಟಿಗೆ ಯು ಅಂತರ್ನಿರ್ಮಿತ ಟ್ಯಾಪ್ ಮತ್ತು ಪಾವತಿ ಕಾರ್ಯವನ್ನು ಹೊಂದಿದೆ. ಇದರ ಮೂಲಕ ವ್ಯಾಪಾರಿಗಳು ಕಾರ್ಡ್ ಪಾವತಿಗಳನ್ನು ಸುಲಭವಾಗಿ ಪಡೆಯಬಹುದು. 5 ಸಾವಿರ ವರೆಗೆ ಪಾವತಿಯನ್ನು ತೆಗೆದುಕೊಳ್ಳಬಹುದು ಹಾಗೆ Visa , MasterCard , American Express , RuPay Networks ಕಾರ್ಡ್ ಗಳ ಮೂಲಕ ಪಾವತಿಯನ್ನು ಮಾಡಬಹುದು.

Join Nadunudi News WhatsApp Group

ಈ ಸಾಧನ 4G ಮೂಲಕ ಕಾರ್ಯ ನಿರ್ವಹಿಸುತ್ತದೆ ಹಾಗೆ ಇದು 4 ವ್ಯಾಟ್ ಸ್ಪೀಕರ್ ಅನ್ನು ಪಡೆದಿದೆ. Paytm ಸೌಂಡ್ ಬಾಕ್ಸ್ 11 ಭಾಸೆಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ವ್ಯಾಪಾರಕ್ಕಾಗಿ Paytm Application ಮೂಲಕ ಭಾಷೆಯನ್ನು ಬದಲಾಯಿಸಬಹುದು.

Join Nadunudi News WhatsApp Group