Pearl Business: ಸಣ್ಣ ಜಾಗದಲ್ಲಿ ಇಂದೇ ಆರಂಭಿಸಿ ಮುತ್ತಿನ ಕೃಷಿ, ಕೆಲವೇ ದಿನದಲ್ಲಿ ನೀವೇ ಲಕ್ಷಾಧಿಪತಿಗಳು.

ಸಣ್ಣ ಜಾಗದಲ್ಲಿ ಮುತ್ತಿನ ಕೃಷಿ ಆರಂಭ ಮಾಡಿದರೆ ದೊಡ್ಡ ಮಟ್ಟದ ಲಾಭ ಗಳಿಸಬಹುದು.

Pearl Business Profit: ಇತ್ತೀಚಿನ ದಿನಗಳಲ್ಲಿ ರೈತರು ವಿವಿಧ ರೀತಿಯ ಬೇಸಾಯವನ್ನು ಮಾಡುತ್ತಾರೆ. ಸಾಂಪ್ರದಾಯಿಕ ಬೇಸಾಯದ ಜೊತೆಗೆ ರೈತರು ಸುಧಾರಿತ ಬೇಸಾಯವನ್ನೂ ಆರಿಸಿಕೊಳ್ಳುತ್ತಿದ್ದಾರೆ. ಸಣ್ಣ ಜಾಗದಲ್ಲಿ ಕೃಷಿ ಮಾಡಿ ದೊಡ್ಡ ಮಟ್ಟದ ಲಾಭವನ್ನು ಪಡೆಯಲು ಸಾಕಷ್ಟು ಬೇಸಾಯಗಳಿವೆ.

ಇದೀಗ ಉತ್ತಮ ಆದಾಯವನ್ನು ತಂದುಕೊಡುವ ಕೃಷಿಯ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ. ಈ ಕೃಷಿ ಮಾಡಿದರೆ ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ.

Pearl farming can earn lakhs
Image Credit: Krishijagran

ಸಣ್ಣ ಜಾಗದಲ್ಲಿ ಇಂದೇ ಆರಂಭಿಸಿ ಮುತ್ತಿನ ಕೃಷಿ
ಮಾರುಕಟ್ಟೆಯಲ್ಲಿ ಚಿನ್ನ ಹಾಗು ವಜ್ರದ ಆಭರಣಗಳಿಗೆ ಬಾರಿ ಬೇಡಿಕೆ ಇದೆ. ಚಿನ್ನ, ಬೆಳ್ಳಿ, ವಜ್ರದ ಜೊತೆಗೆ ಮುತ್ತಿನ (Pearl) ಆಭರಣಗಳು ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಮುತ್ತಿನ ಆಭರಣಗಳು ಹೆಚ್ಚು ಆಕರ್ಷಣೀಯವಾಗಿದ್ದು ಚಿನ್ನಕ್ಕಿಂತ ಅಗ್ಗದ ಬೆಲೆಯಲ್ಲಿ ಮುತ್ತನ್ನು ಖರೀದಿಸಬಹುದಾಗಿದೆ. ಕೆಲವು ಆಭರಣಗಳ ತಯಾರಿಕೆಯಲ್ಲಿ ಮುತ್ತುಗಳನ್ನು ಬಳಸಲಾಗುತ್ತದೆ.

ಮುತ್ತುಗಳನ್ನು ಬಳಸಿ ತಯಾರಿಸಲಾದ ಆಭರಣಗಳಿಗೆ ಬಾರಿ ಬೇಡಿಕೆ ಇರುತ್ತದೆ. ನೀರಿನೊಳಗೆ ಶೆಲ್-ಆಕಾರದ ರಚನೆಯೊಳಗೆ ವಿದೇಶಿ ಕಣಗಳ ಪ್ರವೇಶದಿಂದ ಮುತ್ತುಗಳು ರೂಪುಗೊಳ್ಳುತ್ತವೆ. ಮುತ್ತುಗಳು ತಯಾರಾಗಲು ಸುಮಾರು 14 ತಿಂಗಳುಗಳು ಬೇಕಾಗುತ್ತದೆ. ಸಮುದ್ರದ ಆಳದಿಂದ ಮುತ್ತುಗಳನ್ನು ಹೊರತೆಗೆಯಲಾಗುತ್ತದೆ. ಮಾರುಕ್ಕಟ್ಟೆಯಲ್ಲಿ ಮುತ್ತುಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ ಕೆರೆ, ತೊಟ್ಟಿಗಳಲ್ಲಿ ಮುತ್ತುಗಳನ್ನು ತಯಾರಿಸಲಾಗುತ್ತಿದೆ.

Pearl farming can earn lakhs
Image Credit: TV9hindi

ಮುತ್ತು ಕೃಷಿಯಿಂದ ಗಳಿಸಬಹುದು ಲಕ್ಷ
ಮುತ್ತು ಕೃಷಿಯನ್ನು ಅಕ್ಟೋಬರ್ ನಿಂದ ನವೆಂಬರ್ ನಲ್ಲಿ ಮಾಡಲು ಸಾಧ್ಯವಾಗುತ್ತದೆ. ಮುತ್ತು ಕೃಷಿಗೆ ಆರಂಭಿಕ ವೆಚ್ಚ ಸುಮಾರು 25,000 ರೂ. ಇದರಲ್ಲಿ ರೈತ ಬಂಧುಗಳು 500 ಚಿಪ್ಪುಗಳ ಸಣ್ಣ ಘಟಕದಿಂದ ಮುತ್ತು ಕೃಷಿ ಆರಂಭಿಸಬಹುದು. ಪ್ರತಿ ಸಿಂಪಿಯಿಂದ ಒಂದು ಮುತ್ತು ಲಭ್ಯವಿರುತ್ತದೆ. ಇದನ್ನು ಮಾರುಕಟ್ಟೆಯಲ್ಲಿ ರೂ.300 ರಿಂದ ರೂ.1500 ರವರೆಗಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಅಂದರೆ ಮೊದಲ ಕಟಾವಿನ ನಂತರ ರೈತರು 1,50,000 ರೂ.ಲಾಭವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group