Pearl Business: ಚಿಕ್ಕ ಜಾಗದಲ್ಲಿ ಮುತ್ತುಗಳ ಕೃಷಿ ಮಾಡಿದರೆ ಪ್ರತಿ ತಿಂಗಳು ಎಷ್ಟು ಲಾಭ ಬರುತ್ತೆ…? ಕೋಟ್ಯಾಧಿಪತಿ ಆಗಬಹುದು.

ಚಿಕ್ಕ ಜಾಗದಲ್ಲಿ ಮುತ್ತುಗಳ ಕೃಷಿ ಆರಂಭಿಸಿದರೆ ಎಷ್ಟು ಲಾಭ ಗಳಿಸಬಹುದು.

Pearl Business Profit: ದೇಶದಲ್ಲಿ ಕೃಷಿಗೆ ಉತ್ತಮ ಬೇಡಿಕೆ ಇದೆ. ವೈವುದೇ ರೀತಿಯ ಕೃಷಿಯನ್ನು ಆರಂಭಿಸಿದರು ಕೂಡ ಉತ್ತಮ ಲಾಭವನ್ನು ಗಳಿಸಬಹುದು. ಇದೀಗಾ ನಿಮಗೆ October ಮತ್ತು November ನಲ್ಲಿ ಮಾಡಬಹುದಾದ ಕೃಷಿಯ ಬಗ್ಗೆ ನೀವು ತಿಳಿಯ ಬೇಕಿದ್ದರೆ ಈ ಮಾಹಿತಿ ನಿಮಗೆ ಉಪಾಯುಕ್ತವಾಗಲಿದೆ.

ನೀವು ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಆಭರಣವಾಗಿರುವ Pearl ನ ಕೃಷಿಯನ್ನು ಕಡಿಮೆ ಖರ್ಚಿನಿಂದ ಪ್ರಾರಂಭಿಸಬಹುದು. ಹೌದು, ಈ ಮುತ್ತಿನ ಕೃಷಿ ಮಾಡಲು ಹೆಚ್ಚಿನ ಬಡವಾಳವಾಗಲಿ, ಹೆಚ್ಚು ಜಾಗವಾಗಲಿ ಬೇಕೆಂದಿಲ್ಲ. ನಿಮ್ಮ ಮನೆ ಅಕ್ಕ ಪಕ್ಕದ ಜಾಗದಲ್ಲಿ ನೀವು ಬಹಳ ಸರಳವಾಗಿ ಈ ಮುತ್ತಿನ ಕೃಷಿಯನ್ನು ಪ್ರಾರಂಭಿಸಬಹುದು.

how to star pearl business
Image Credit: pearl

ಮುತ್ತಿನ ಕೃಷಿಯ ಬಗ್ಗೆ ನಿಮಗೆಷ್ಟು ಗೊತ್ತು..?
ಮಾರುಕಟ್ಟೆಯಲ್ಲಿ ಚಿನ್ನ ಹಾಗು ವಜ್ರದ ಆಭರಣಗಳಿಗೆ ಬಾರಿ ಬೇಡಿಕೆ ಇದೆ. ಚಿನ್ನ, ಬೆಳ್ಳಿ, ವಜ್ರದ ಜೊತೆಗೆ ಮುತ್ತಿನ (Pearl) ಆಭರಣಗಳು ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಮುತ್ತಿನ ಆಭರಣಗಳು ಹೆಚ್ಚು ಆಕರ್ಷಣೀಯವಾಗಿದ್ದು ಚಿನ್ನಕ್ಕಿಂತ ಅಗ್ಗದ ಬೆಲೆಯಲ್ಲಿ ಮುತ್ತನ್ನು ಖರೀದಿಸಬಹುದಾಗಿದೆ. ಕೆಲವು ಆಭರಣಗಳ ತಯಾರಿಕೆಯಲ್ಲಿ ಮುತ್ತುಗಳನ್ನು ಬಳಸಲಾಗುತ್ತದೆ.

ಮುತ್ತುಗಳನ್ನು ಹೇಗೆ ತಯಾರಿಸುವುದು
ಸಾಮಾನ್ಯವಾಗಿ ಮುತ್ತುಗಳನ್ನು ಬಳಸಿ ತಯಾರಿಸಲಾದ ಆಭರಣಗಳಿಗೆ ಬಾರಿ ಬೇಡಿಕೆ ಇರುತ್ತದೆ. ನೀರಿನೊಳಗೆ ಶೆಲ್-ಆಕಾರದ ರಚನೆಯೊಳಗೆ ವಿದೇಶಿ ಕಣಗಳ ಪ್ರವೇಶದಿಂದ ಮುತ್ತುಗಳು ರೂಪುಗೊಳ್ಳುತ್ತವೆ. ಮುತ್ತುಗಳು ತಯಾರಾಗಲು ಸುಮಾರು 14 ತಿಂಗಳುಗಳು ಬೇಕಾಗುತ್ತದೆ. ಸಮುದ್ರದ ಆಳದಿಂದ ಮುತ್ತುಗಳನ್ನು ಹೊರತೆಗೆಯಲಾಗುತ್ತದೆ. ಮಾರುಕ್ಕಟ್ಟೆಯಲ್ಲಿ ಮುತ್ತುಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ ಕೆರೆ, ತೊಟ್ಟಿಗಳಲ್ಲಿ ಮುತ್ತುಗಳನ್ನು ತಯಾರಿಸಲಾಗುತ್ತಿದೆ.

Pearl Business Tips For indians
Image Credit: Original Source

ಚಿಕ್ಕ ಜಾಗದಲ್ಲಿ ಮುತ್ತುಗಳ ಕೃಷಿ ಮಾಡಿದರೆ ಪ್ರತಿ ತಿಂಗಳು ಎಷ್ಟು ಲಾಭ ಬರುತ್ತೆ…?
ಮುತ್ತು ಕೃಷಿಯನ್ನು ಅಕ್ಟೋಬರ್ ನಿಂದ ನವೆಂಬರ್ ನಲ್ಲಿ ಮಾಡಲು ಸಾಧ್ಯವಾಗುತ್ತದೆ. ಮುತ್ತು ಕೃಷಿಗೆ ಆರಂಭಿಕ ವೆಚ್ಚ ಸುಮಾರು 25,000 ರೂ. ಇದರಲ್ಲಿ ರೈತ ಬಂಧುಗಳು 500 ಚಿಪ್ಪುಗಳ ಸಣ್ಣ ಘಟಕದಿಂದ ಮುತ್ತು ಕೃಷಿ ಆರಂಭಿಸಬಹುದು.

Join Nadunudi News WhatsApp Group

ಪ್ರತಿ ಸಿಂಪಿಯಿಂದ ಒಂದು ಮುತ್ತು ಲಭ್ಯವಿರುತ್ತದೆ. ಇದನ್ನು ಮಾರುಕಟ್ಟೆಯಲ್ಲಿ ರೂ. 300 ರಿಂದ ರೂ.1500 ರ ವರೆಗಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಅಂದರೆ ಮೊದಲ ಕಟಾವಿನ ನಂತರ ರೈತರು 1,50,000 ರೂ. ಲಾಭವನ್ನು ಪಡೆಯಬಹುದಾಗಿದೆ. ಮುತ್ತು ಕೃಷಿಗಾಗಿ ಸರ್ಕಾರವು CIFA ಎಂಬ ಸಂಸ್ಥೆಯನ್ನು ರಚಿಸಿದೆ. Central Institute of Fresh Water Aquaculture ನಲ್ಲಿ ನೀವು ಮುತ್ತಿನ ಕೃಷಿಗೆ ಸಂಬಂಧಿಸಿದಂತೆ ಉಚಿತ ತರಬೇತಿಯನ್ನು ಪಡೆಯಬಹುದು.

Join Nadunudi News WhatsApp Group