Pension Age: ಈ ಜನರು 60 ವರ್ಷದ ತನಕ ಕಾಯುವ ಅಗತ್ಯ ಇಲ್ಲ, 50 ವರ್ಷಕ್ಕೆ ಸಿಗಲಿದೆ ಪಿಂಚಣಿ ಹಣ

ಇನ್ಮುಂದೆ ಈ ರಾಜ್ಯದಲ್ಲಿ ಪಿಂಚಣಿ ಹಣ ಪಡೆಯಲು 60 ವರ್ಷದ ತನಕ ಕಾಯುವ ಅಗತ್ಯ ಇಲ್ಲ

Pension Age Reduce: ಜನರು ತಮ್ಮ ಭವಿಷ್ಯಕ್ಕಾಗಿ ವಿವಿಧ ಹೂಡಿಕೆಯ ಯೋಜನೆಗಳಲ್ಲಿ ಉಳಿತಾಯವನ್ನು ಪ್ರಾರಂಭಿಸಲು ಸರ್ಕಾರ ಅವಕಾಶವನ್ನು ಮಾಡಿಕೊಟ್ಟಿದೆ. ಇನ್ನು ಜೀವದ ಭದ್ರತೆಗಾಗಿ ಜೀವ ವಿಮಾ ಯೋಜನೆಗಳಿಂದ ಹಿಡಿದು ಹಿಡಿದು ನಿವೃತ್ತಿಯ ನಂತರ ಪಡೆಯುವ ಪಿಂಚಣಿಯ ಯೋಜನೆಗಳು ಸಾಕಷ್ಟಿವೆ.

ಉದ್ಯೋಗಿಗಳು ತಮ್ಮ ನಿವೃತ್ತಿಯ ನಂತರ ಆರಾಮದಾಯಕ ಜೀವನ ನಿರ್ವಹಿಸಲು ಸರ್ಕಾರ ಪಿಂಚಣಿ ಯೋಜನೆಗಳು (Pension Scheme)  ಸಹಾಯವಾಗುತ್ತದೆ. ದುಡಿಯುವ ವಯಸ್ಸಿನಲ್ಲಿ ನಾವು ಹಣವನ್ನು ಪಿಂಚಣಿ ಯೋಜನೆಗಳಲ್ಲಿ ಉಳಿತಾಯ ಮಾಡಿದರೆ ದುಡಿಯುವ ಸಾಮರ್ಥ್ಯ ಕಳೆದುಕೊಂಡಾಗ ಪಿಂಚಣಿಯ ಲಾಭವನ್ನು ಪಡೆಯಬಹುದು. ಸದ್ಯ ಸರ್ಕಾರ ಪಿಂಚಣಿ ಪಡೆಯುವ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಈ ಹೊಸ ನಿಯಮ ಪಿಂಚಣಿ ಪಡೆಯುವವರಿಗೆ ಹೆಚ್ಚು ಸಹಾಯವಾಗಲಿದೆ.

Employees Pension Age Reduce
Image Credit: Businesstoday

ಪಿಂಚಣಿ ಪಡೆಯುವ ನಿಯಮದಲ್ಲಿ ಮಹತ್ವದ ಬದಲಾವಣೆ
ಸಾಮಾನ್ಯವಾಗಿ ಎಲ್ಲ ಪಿಂಚಣಿಯ ಯೋಜನೆಗಳ ಲಾಭವನ್ನು ಹೂಡಿಕೆದಾದರೂ 60 ವರ್ಷದ ಬಳಿಕ ಪಡೆಯುತ್ತಾರೆ. ವ್ಯಕ್ತಿಯ ನಿವೃತ್ತಿಯ ವಯಸ್ಸು 60 ವರ್ಷ ಆಗಿರುವುದರಿಂದ ಯಾವುದೇ ರೀತಿಯ ಪಿಂಚಣಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರು ಕೂಡ ನಿಮಗೆ 60 ವರ್ಷ ಆದ ಬಳಿಕ ಮಾತ್ರ ನಿಮಗೆ ಪಿಂಚಣಿಯ ಹಣ ಲಭ್ಯವಾಗುತ್ತದೆ. ಸದ್ಯ ಈ ರಾಜ್ಯ ಸರ್ಕಾರ ಪಿಂಚಣಿ ಪಡೆಯುವ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಜಾರ್ಖಂಡ್ ನಲ್ಲಿ ಪಿಂಚಣಿ ಪಡೆಯುವ ವಯಸ್ಸನ್ನು ಕಡಿತಗೊಳಿಸಲಾಗಿದೆ.

ಈ ಜನರು 60 ವರ್ಷದ ತನಕ ಪಿಂಚಣಿಗಾಗಿ ಕಾಯುವ ಅಗತ್ಯ ಇಲ್ಲ
ಸದ್ಯ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಪಿಂಚಣಿ ಪಡೆಯುವ ವಯಸ್ಸಿನ ಮಿತಿಯನ್ನು ಕಡಿಮೆಗೊಳಿಸಲು ನಿರ್ಧರಿಸಿದ್ದಾರೆ. ಪ್ರಸ್ತುತ 60 ವರ್ಷದ ಬಳಿಕ ಪಿಂಚಣಿ ನೀಡಲಾಗುತ್ತಿತ್ತು. ಆದರೆ ಜಾರ್ಖಂಡ್ ಸರ್ಕಾರ ಈ ಪಿಂಚಣಿ ಪಡೆಯುವ ವಯಸ್ಸನ್ನು 50 ವರ್ಷಕ್ಕೆ ನಿಗದಿಪಡಿಸಿದೆ. ಇನ್ನುಮುಂದೆ ಜಾರ್ಖಂಡ್ ನಲ್ಲಿ ಜನರು ಪಿಂಚಣಿಯನ್ನು 50 ವರ್ಷ ತುಂಬಿದ ಬಳಿಕ ಪಡೆದುಕೊಳ್ಳಬಹುದು.

Pension Age Reduce
Image Credit: Business-standard

ಇನ್ನುಮುಂದೆ 50 ವರ್ಷಕ್ಕೆ ಸಿಗಲಿದೆ ಪಿಂಚಣಿ ಹಣ
ಹೆಚ್ಚಿನ ಜನರು ಅತಿ ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದುತ್ತಾರೆ. ಅದರಲ್ಲೂ 50 ವರ್ಷ ದಾಟಿದವರು ಹೆಚ್ಚಿನ ಸಂಖ್ಯೆಯಲ್ಲಿ ಮರಣ ಹೊಂದಿರುವ ಉದಾಹರಣೆಗಳಿವೆ. 50 ವರ್ಷದಲ್ಲಿಯೇ ಮರಣ ಹೊಂದಿದರೆ ಅಂತವರು ಪಿಂಚಣಿಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅವರು ಪಿಂಚಣಿಯ ಲಾಭವನ್ನು ಪಡೆಯಲು ಸಾದ್ಯವಾಗುದಿಲ್ಲ.

Join Nadunudi News WhatsApp Group

ಇದನ್ನು ಗಮನದಲ್ಲಿಟ್ಟುಕೊಂಡು ಜಾರ್ಖಂಡ್ ಸರ್ಕಾರ ಪಿಂಚಣಿ ಪಡೆಯುವ ವಯಸ್ಸಿನ ಮಿತಿಯನ್ನು ಕಡಿಮೆಗೊಳಿಸಿದೆ. ಇನ್ನುಮುಂದೆ ಜಾರ್ಖಂಡ್ ನಲ್ಲಿ ಪಿಂಚಣಿಯ ಲಾಭ ಪಡೆಯಲು 60 ವರ್ಷದ ತನಕ ಕಾಯುವ ಅಗತ್ಯವಿಲ್ಲ. ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ ಆದಿವಾಸಿಗಳು ಮತ್ತು ದಲಿತರಿಗೆ 50 ವರ್ಷದಲ್ಲಿಯೇ ಪಿಂಚಣಿಯ ಲಾಭವನ್ನು ಪಡೆಯಬಹುದು.

ಸರ್ಕಾರ ಯೋಜನೆಗಳ ಲಾಭ ಎಲ್ಲರಿಗು ತಲುಪಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಸದ್ಯ ಈ ಯೋಜನೆಗೆ ಜಾರ್ಖಂಡ್ ನಲ್ಲಿ ಜಾರಿಗೆ ಬಂದಿದ್ದು ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group