Pension Rule: ಸರ್ಕಾರೀ ನೌಕರರಿಗೆ ವಿಶೇಷ ಸೂಚನೆ, ಕೊನೆಗೊಳ್ಳಲಿದೆ ನಿಮ್ಮ ಪಿಂಚಣಿ ಮತ್ತು ಗ್ರಾಚ್ಯುಟಿ.

ಸರಕಾರಿ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದ ಕೇಂದ್ರದ ಮೋದಿ ಸರ್ಕಾರ.

Pension And Gratuity Rule: ಕಳೆದ ಕೆಲವು ತಿಂಗಳಿಂದ ಸರ್ಕಾರೀ ನೌಕರರ ವೇತನದ ವಿಷಯಗಳು ಸಾಕಷ್ಟು ಹರಿದಾಡುತ್ತಿದೆ. ಇನ್ನು ಜುಲೈ ತಿಂಗಳಿನಲ್ಲಿ ಸರ್ಕಾರೀ ನೌಕರರ ಡಿಎ ಹೆಚ್ಚುಸುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.

ಇದೀಗ ಕೇಂದ್ರದ ಮೋದಿ ಸರ್ಕಾರ ಸರಕಾರಿ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಪಿಂಚಣಿ (Pension)  ಮತ್ತು ಗ್ರಾಚ್ಯುಟಿಗೆ (Gratuity) ಸಂಬಂಧಿಸಿದ ಹೊಸ ನಿಯಮಗಳ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

ಪಿಂಚಣಿ ಮತ್ತು ಗ್ರಾಚ್ಯುಟಿ ನಿಯಮದಲ್ಲಿ ಹೊಸ ನಿಯಮ
ಸರ್ಕಾರ ಮಾರ್ಚ್ 2023 ರಲ್ಲಿ ಡಿಎ ಘೋಷಿಸಿದೆ. ಡಿಎ ಬಾಕಿಯನ್ನು ಜನವರಿ 1 ರಿಂದ ನೌಕರರಿಗೆ ನೀಡಲಾಯಿತು. ಈಗ ಮತ್ತೆ ಡಿಎ ಹೆಚ್ಚಳವನ್ನು ಸರ್ಕಾರದಿಂದ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಘೋಷಿಸಲಾಗುತ್ತದೆ. ಆದರೆ ಈ ಹಿಂದೆ ಕೇಂದ್ರ ನೌಕರರಿಗೆ ಸರ್ಕಾರ ಡಿಎ ವಿಚಾರವಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

New Rule in Pension and Gratuity Rule
Image Credit: economictimes

ಕೊನೆಗೊಳ್ಳಲಿದೆ ಸರ್ಕಾರೀ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿ
ಸರ್ಕಾರೀ ನೌಕರರು ಕೇಂದ್ರದ ನಿಯಮವನ್ನು ನಿರ್ಲಕ್ಷಿಸಿದರೆ ನಿವೃತ್ತಿಯ ನಂತರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ನಿಲಿಸಬೇಕಾಗುತ್ತದೆ ಎಂದು ಸರ್ಕಾರ ಸೂಚನೆ ನೀಡಿದೆ. ಸರ್ಕಾರದ ಈ ಹೊಸ ಆದೇಶವು ಕೇಂದ್ರ ನೌಕರರಿಗೆ ಅನ್ವಯಿಸುತ್ತದೆ. ಸರ್ಕಾರವು ಸಿಸಿಸಿ (CCC) ನಿಯಮಗಳು 2021 ರ ನಿಯಮ 8 ಅನ್ನು ಬದಲಾಯಿಸಿದೆ.ಹೊಸ ನಿಯಮದಲ್ಲಿ ಹೊಸ ನಿಬಂಧನೆಗಳನ್ನು ಸೇರಿಸಲಾಗಿದೆ.

ಕೇಂದ್ರ ನೌಕರರು ತಮ್ಮ ಸೇವಾ ಅವಧಿಯಲ್ಲಿ ಯಾವುದೇ ಗಂಭೀರ ಅಪರಾಧ ಅಥವಾ ನಿರ್ಲಕ್ಷ್ಯ ತೋರಿದರೆ, ನಿವೃತ್ತಿಯ ನಂತರ ಅವರ ಗ್ರಾಚ್ಯುಟಿ ಮತ್ತು ಪಿಂಚಣಿಯನ್ನು ನಿಲ್ಲಿಸಲಾಗುವುದು ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕೆಲಸದ ಸಮಯದಲ್ಲಿ ಈ ಉದ್ಯೋಗಿಗಳ ವಿರುದ್ಧ ಯಾವುದೇ ಇಲಾಖಾ ಅಥವಾ ನ್ಯಾಯಾಂಗ ಕ್ರಮವನ್ನು ತೆಗೆದುಕೊಂಡಿದ್ದರೆ, ಅದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಅಗತ್ಯವಾಗಿರುತ್ತದೆ.

Join Nadunudi News WhatsApp Group

New Rule in Pension and Gratuity Rule
Image Credit: trak

ನೌಕರರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ
ನಿವೃತ್ತಿಯ ನಂತರ ನೌಕರರನ್ನು ಪುನಃ ನೇಮಿಸಿದರೆ ಅದೇ ನಿಯಮಗಳು ಅವರಿಗೆ ಅನ್ವಯಿಸುತ್ತದೆ. ಉದ್ಯೋಗಿ ನಿವೃತ್ತಿಯ ನಂತರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ತೆಗೆದುಕೊಂಡಿದ್ದರೆ, ಇದರ ನಂತರ ಅವರು ತಪ್ಪಿತಸ್ಥರೆಂದು ಕಂಡುಬಂದರೆ ಪೂರ್ಣ ಅಥವಾ ಭಾಗಶಃ ಮೊತ್ತದ ಪಿಂಚಣಿ ಅಥವಾ ಗ್ರಾಚ್ಯುಟಿಯನ್ನು ಅವರಿಂದ ವಸೂಲಿ ಮಾಡಬಹುದು. ನೌಕರರ ಪಿಂಚಣಿ ಅಥವಾ ಗ್ರಾಚ್ಯುಟಿಯನ್ನು ಶಾಶ್ವತವಾಗಿ ಅಥವಾ ಸ್ವಲ್ಪ ಸಮಯದವರೆಗೆ ಪ್ರಾಧಿಕಾರವು ನಿಲ್ಲಿಸಬಹುದು.

Join Nadunudi News WhatsApp Group