Pension: ಪಿಂಚಣಿ ಪಡೆಯುತ್ತಿದ್ದ ಅನರ್ಹರಿಗೆ ಬಿಗ್ ಶಾಕ್: 1.18 ಲಕ್ಷ ಜನರ ಪಿಂಚಣಿ ರದ್ದು

ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯುತ್ತಿರುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.

Pension Cancellation: ದೇಶದಲ್ಲಿ ಮೋದಿ ಸರ್ಕಾರ ವೃದ್ಧರಿಗಾಗಿ ಹೊಸ ಹೊಸ ಪಿಂಚಣಿ (Pension)ಯೋಜನೆಯನ್ನು ಜಾರಿಗೊಳಿಸಿದೆ. ಬಡ ನಾಗರಿಕರಿಗೆ ಆರ್ಥಿಕವಾಗಿ ಸಹಾಯವಾಗುವ ನಿಟ್ಟಿನಲ್ಲಿ ಪಿಂಚಣಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸುತ್ತಿದ್ದೆ.

ಇದೀಗ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಅರ್ಹತೆ ಇಲ್ಲದವರು ಪಿಂಚಣಿ ಪಡೆಯುತ್ತಿದ್ದಾರೆ. ಅಂತವರ ಪಿಂಚಣಿಯನ್ನು ಕೇಂದ್ರ ಸರ್ಕಾರ (Central Government)ರದ್ದು ಮಾಡಲು ಮುಂದಾಗಿದೆ. ಈ ಬಗ್ಗೆ ನಾವೀಗ ಮಾಹಿತಿ ತಿಳಿದುಕೊಳ್ಳೋಣ.

Pension Cancellation
Image Credit: Sentinelassam

ಅನರ್ಹರ ಪಿಂಚಣಿ ರದ್ದು
ಅರ್ಹತೆ ಇಲ್ಲದವರು ಸಹ ಪಿಂಚಣಿ ಪಡೆಯುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಕಳೆದ ಸೆಪ್ಟೆಂಬರ್ ನಿಂದಲೇ ಪರಿಶೀಲನಾ ಕಾರ್ಯವನ್ನು ಕೈಗೊಂಡು ಅನರ್ಹರ ಪಿಂಚಣಿಗೆ ತಡೆ ನೀಡಿದೆ. ಕೇಂದ್ರ ಸರ್ಕಾರ ಇದೀಗ ನಕಲಿ ದಾಖಲೆ ಸಲ್ಲಿಕೆ ಮಾಡಿದ, ಸೂಕ್ತ ದಾಖಲೆ ಇಲ್ಲದ, ಖಾತೆಗೆ ಆಧಾರ್ (Aadhar)ಜೋಡಣೆ ಮಾಡದವರ ಪಿಂಚಣಿಯನ್ನು ರದ್ದು ಮಾಡಿದೆ. ಇದರಿಂದ ಸುಮಾರು ಮೂರೂ ಕೋಟಿ ಹಣವನ್ನು ವಸೂಲಿ ಮಾಡಲಾಗಿದೆ.

ಪಿಂಚಣಿ ಪಡೆಯಲು ನಕಲಿ ಫಲಾನುಭವಿಗಳು ಹೆಚ್ಚಾಗಿದ್ದ ಕಾರಣ ನವೋದಯ ಮೊಬೈಲ್ ಆಧಾರಿತ ಸಮಗ್ರ ವಾರ್ಷಿಕ ಪರಿಶೀಲನಾ ಕಾರ್ಯ ಕೈಗೊಳ್ಳಲಾಗಿದ್ದು 83565 ಜನರ ಪಿಂಚಣಿಯನ್ನು ಸ್ಥಗಿತ ಮಾಡಲಾಗಿದೆ. ಆಧಾರ್ ಜೋಡಣೆ ಆಗದವರ ಪಿಂಚಣಿಯನ್ನು ತಡೆದಿದ್ದು, ಒಟ್ಟು 35204 ಅನರ್ಹರ ಪಿಂಚಣಿಯನ್ನು ರದ್ದುಗೊಳಿಸಿದೆ.

Pension Cancellation latest news
Image Credit: Newsncr

ಇತ್ತೀಚಿಗೆ ಕೆಲವರು ಎರಡು ಪಿಂಚಣಿ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿರುದು ಹಾಗೆ 60 ವರ್ಷ ಆಗದವರು ಕೂಡ ವೃದಾಪ್ಯ ವೇತನವನ್ನು ಪಡೆದುಕೊಳ್ಳುತ್ತಿರುವುದು ಪರಿಶೀಲನೆ ಮೂಲಕ ತಿಳಿದುಬಂದಿದೆ. ಇದರೊಂದಿಗೆ ಕೆಲವರು ಸಂದ್ಯಾ ಸುರಕ್ಷಾ ಯೋಜನೆಯ ಹಣವನ್ನು ಪಡೆದುಕೊಂಡಿದ್ದು ಇಂತಹ 30000 ಪ್ರಕರಣಗಳಲ್ಲಿ ಪಿಂಚಣಿ ಸ್ಥಗಿತ ಮಾಡಲಾಗಿದೆ ಎಂದು ಹೇಳಾಗುತ್ತಿದೆ. ಸರಿಯಾದ ದಾಖಲೆ ಸಲ್ಲಿಸಿದವರಿಗೆ ಮಾತ್ರ ಪಿಂಚಣಿ ನೀಡಲಾಗುತ್ತಿದ್ದೆ.

Join Nadunudi News WhatsApp Group

Join Nadunudi News WhatsApp Group