Best Pension: 60 ವರ್ಷ ಮೇಲ್ಪಟ್ಟ ಜನರಿಗೂ ಸಿಗಲಿದೆ ಪ್ರತಿ ತಿಂಗಳು 25000 ರೂ ಪಿಂಚಣಿ, ಹೊಸ ಪಿಂಚಣಿ ಯೋಜನೆ.

ಹಿರಿಯ ನಾಗರೀಕರಿಗಾಗಿ ಪಿಂಚಣಿ ಯೋಜನೆ, ಪ್ರತಿ ತಿಂಗಳು ಸಿಗಲಿದೆ 25000 ಪಿಂಚಣಿ.

Pension Scheme Investment: ಜನರು ತಮ್ಮ ವೃದ್ದಾಪ್ಯದಲ್ಲಿ ಆರ್ಥಿಕವಾಗಿ ಸ್ಥಿರತೆ ಕಾಣಲು ಹೆಚ್ಚಾಗಿ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಪಿಂಚಣಿ ಯೋಜನೆಯಲ್ಲಿನ (Pension Scheme) ಹೂಡಿಕೆಯು ನಿವೃತ್ತಿಯ ನಂತರದ ಬದುಕನ್ನು ಸುಗಮಗೊಳಿಸುತ್ತದೆ ಎನ್ನಬಹುದು. ನೀವು ದುಡಿಯಲು ಅಶಕ್ತರಾದಾಗ ನಿಮ್ಮ ಮಾಸಿಕ ಪಿಂಚಣಿಯಲ್ಲಿನ ಹೂಡಿಕೆ ನಿಮಗೆ ಸಹಾಯವಾಗುತ್ತದೆ.

ಇನ್ನು ಜನರಿಗಾಗಿ ಸಾಕಷ್ಟು ಪಿಂಚಣಿಯ ಯೋಜನೆಗಳ ಆಯ್ಕೆ ಇದೆ. ಕೇಂದ್ರ ಸರ್ಕಾರ (Central Government) ಈಗಾಗಲೇ ವಿವಿಧ ಪಿಂಚಣಿ ಯೋಜನೆಗಳನ್ನು ಜನರಿಗಾಗಿ ಪರಿಚಯಿಸಿದೆ. ಇದೀಗ ಮಾಸಿಕವಾಗಿ 25 ಸಾವಿರಕ್ಕೂ ಹೆಚ್ಚಿನ ಪಿಂಚಣಿಯನ್ನು ಪಡೆಯುವ ಹೂಡಿಕೆಯ ವಿಧಾನದ ಬಗ್ಗೆ ವಿವರ ತಿಳಿಯೋಣ.

pension scheme investment
Image Credit: Zeenews

ಹಿರಿಯ ನಾಗರೀಕರಿಗಾಗಿ ಪಿಂಚಣಿ ಯೋಜನೆಗಳು
ಪಿಂಚಣಿ ಯೋಜನೆಯು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಈ ದಿರ್ಘವದಿಯ ಹೂಡಿಕೆಯ ಲಾಭ ಪಡೆಯಲು ಜನರು ತನ್ನ 40 ನೇ ವಯಸ್ಸಿನಲ್ಲಿ ಹೂಡಿಕೆಯನ್ನು ಪ್ರಾರಂಭಿಸಬೇಕಾಗುತ್ತದೆ. ನಿಮ್ಮ ವಯಸ್ಸು ಹೆಚ್ಚಾದಂತೆ ಹೂಡಿಕೆಯ ಮೊತ್ತವು ಕೂಡ ಹೆಚ್ಚಾಗುತ್ತದೆ. ನೀವು ಯಾವ ವಯಸ್ಸಿನ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಆರಂಭಿಸುತ್ತಿರೋ ಆ ವಯಸ್ಸಿನ ಆಧಾರದ ಮೇಲೆ ಹೂಡಿಕೆಯ ಮೊತ್ತ ಶುರುವಾಗುತ್ತದೆ.

ಮಾಸಿಕ 25,000 ಪಿಂಚಣಿ ಪಡೆಯಲು ಹಿರಿಯ ನಾಗರಿಕರು ಎಷ್ಟು ಹೂಡಿಕೆ ಮಾಡಬೇಕು..?
ಇನ್ನು ವ್ಯಕ್ತಿಯ ವಯಸ್ಸು 57 ವರ್ಷ ಆದಾಗ ಆ ವ್ಯಕ್ತಿ 3 ವರ್ಷಗಳ ವರೆಗೆ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಪಿಂಚಣಿಯ ಲಾಭವು 60 ವರ್ಷದ ಬಳಿಕ ತಲುಪುತ್ತದೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ನೀವು ಮಾಸಿಕವಾಗಿ 25,000 ಪಿಂಚಣಿ ಪಡೆಯಲು ಬಯಸಿದರೆ 60 ನೇ ವಯಸ್ಸಿನಲ್ಲಿ ಅಂದರೆ ಮೆಚ್ಯುರಿಟಿ ಅವಧಿಯಲ್ಲಿ NPS ಸೇರಿದಂತೆ ಇತರ ಯೋಜನೆಗಳಲ್ಲಿ ಅಂದಾಜು 53 ರಿಂದ 54 ಲಕ್ಷ ಹೂಡಿಕೆ ಅಗತ್ಯವಾಗಿದೆ.

pension scheme latest update
Image Credit: Rightsofemployees

ವರ್ಷಕ್ಕೆ 18 ಲಕ್ಷ ಅಥವಾ ತಿಂಗಳಿಗೆ 1.50 ಲಕ್ಷ ಹೂಡಿಕೆ ಅಗತ್ಯವಿದೆ. ಈ ರೀತಿಯ ಹೂಡಿಕೆಯಿಂದಾಗಿ ನೀವು 60 ವರ್ಷದ ನಂತರ ಮಾಸಿಕವಾಗಿ 25000 ಹಣ ಪಿಂಚಣಿಯನ್ನು ಪಡೆಯುವ ಮೂಲಕ ನೀವು ನಿಮ್ಮ ನಿವೃತ್ತಿಯ ಜೀವನವನ್ನು ಆರಾಮದಾಯಕವಾಗಿ ಕಳೆಯಬಹುದಾಗಿದೆ. ಇನ್ನು ನೀವು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ಆಧಾರದ ಮೇಲೆ ಹೂಡಿಕೆಯನ್ನು ಪ್ರಾರಂಭಿಸಬಹುದು.

Join Nadunudi News WhatsApp Group

Join Nadunudi News WhatsApp Group