Pensioner’s Age: ಪಿಂಚಣಿ ನಿಯಮದಲ್ಲಿ ಬಹುದೊಡ್ಡ ಬದಲಾವಣೆ, ಮಹಿಳೆಯರಿಗೆ ಇನ್ನೊಂದು ಬಂಪರ್ ಗುಡ್ ನ್ಯೂಸ್

ಮಹಿಳೆಯರ ಪಿಂಚಣಿ ಅರ್ಹತೆಯ ವಯಸ್ಸನ್ನು 60 ವರ್ಷದಿಂದ 50 ವರ್ಷಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದೆ

Pensioner’s Age Limit Reduction: ನಿವೃತ್ತಿಯ ನಂತರ ಜೀವನ ನಿರ್ವಹಣೆಗಾಗಿ ಜನರು ಪಿಂಚಣಿ ಯೋಜನೆಯಲ್ಲಿ ಹೂಡಿಕೆಯನ್ನು ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲ ಪಿಂಚಣಿಯ ಯೋಜನೆಗಳ ಲಾಭವನ್ನು ಹೂಡಿಕೆದಾದರೂ 60 ವರ್ಷದ ಬಳಿಕ ಪಡೆಯುತ್ತಾರೆ.

ವ್ಯಕ್ತಿಯ ನಿವೃತ್ತಿಯ ವಯಸ್ಸು 60 ವರ್ಷ ಆಗಿರುವುದರಿಂದ ಯಾವುದೇ ರೀತಿಯ ಪಿಂಚಣಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರು ಕೂಡ ನಿಮಗೆ 60 ವರ್ಷ ಆದ ಬಳಿಕ ಮಾತ್ರ ನಿಮಗೆ ಪಿಂಚಣಿಯ ಹಣ ಲಭ್ಯವಾಗುತ್ತದೆ. ಆದರೆ ಇದೀಗ ಈ ಪಿಂಚಣಿಯ ನಿಯಮದಲ್ಲಿ ಮಹತ್ವದ ಬದಲಾವಣೆ ಆಗಿದೆ. ಸರ್ಕಾರವು ಮಹಿಳೆಯರಿಗಾಗಿ ದೊಡ್ಡ ಘೋಷಣೆ ಮಾಡಿದೆ.

Pensioner's Age Limit Reduction Update
Image Credit: Informal News

ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್
ಸದ್ಯ ಈ ರಾಜ್ಯ ಸರ್ಕಾರ ಪಿಂಚಣಿ ಪಡೆಯುವ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಮಹಿಳೆಯರ ಪಿಂಚಣಿ ಅರ್ಹತೆಯ ವಯಸ್ಸನ್ನು 60 ವರ್ಷದಿಂದ 50 ವರ್ಷಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ರಾಜ್ಯ ಸರ್ಕಾರ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ.

ಈ ಸಂಬಂಧ ಪ್ರಸ್ತಾವನೆ ಅಂತಿಮ ಹಂತದಲ್ಲಿದೆ ಎಂದು ಮಹಿಳಾ, ಮಕ್ಕಳ ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತಾ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ. ಇದು ಜಾರಿಯಾದ ನಂತರ ಹೆಚ್ಚುವರಿಯಾಗಿ 18 ಲಕ್ಷ ಫಲಾನುಭವಿಗಳು ಪಿಂಚಣಿ ಯೋಜನೆಗೆ ಸೇರಲಿದ್ದಾರೆ. ರಾಜ್ಯದಲ್ಲಿ ಒಟ್ಟು 35.68 ಲಕ್ಷ ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಪಿಂಚಣಿದಾರರ ಸಂಖ್ಯೆ ಶೇ.82ರಷ್ಟು ಹೆಚ್ಚಾಗಿದೆ.

Pensioner Age Reduction
Image Credit: Cambridge

ಅಂಗನವಾಡಿಗಳಿಗೆ ವಿಶೇಷ ಯೋಜನೆ
ಅಂಗನವಾಡಿ ಕೇಂದ್ರಗಳಿಗೆ ಇಲಾಖೆ ಸಮಗ್ರ ಯೋಜನೆ ಸಿದ್ಧಪಡಿಸಿದೆ. ಇನ್ನು ಮುಂದೆ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಬೆಂಚು, ಡೆಸ್ಕ್ ವ್ಯವಸ್ಥೆ ಮಾಡಲಾಗುವುದು. ಮಕ್ಕಳಿಗೆ ಪೌಷ್ಠಿಕಾಂಶದ ಜೊತೆಗೆ ಪೂರ್ವ ಪ್ರಾಥಮಿಕ ಶಾಲಾ ಪ್ರಯೋಜನಗಳನ್ನು ಒದಗಿಸಲು ಚಳಿಗಾಲದ ಸಮವಸ್ತ್ರ, ಓದುವ ಮತ್ತು ಬರೆಯುವ ಸಾಮಗ್ರಿಗಳನ್ನು ಸಹ ಕೇಂದ್ರಗಳಿಗೆ ಒದಗಿಸಲಾಗುವುದು.

Join Nadunudi News WhatsApp Group

Join Nadunudi News WhatsApp Group