Ads By Google

Personal Loan: ಪರ್ಸನಲ್ ಲೋನ್ ಮಾಡಬೇಕಾ…? ಹಾಗಾದರೆ ಈ ಬ್ಯಾಂಕಿನಲ್ಲಿ ಅತೀ ಕಡಿಮೆ ಬಡ್ಡಿ ಮತ್ತು EMI ಸಿಗಲಿದೆ

Personal Loan

Image Source: India Today

Ads By Google

Personal Loan Interest Rate: ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ (Personal Loan) ಇದು ಬಹಳ ಜನರಿಗೆ ಸಹಾಯವಾಗುವ ಲೋನ್ ಸೌಲಭ್ಯ ಆಗಿದೆ. ಪರ್ಸನಲ್ ಲೋನ್ ಗಾಗಿ ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ರೀತಿಯ ಬಡ್ಡಿಯನ್ನು ವಿಧಿಸಲಾಗುವುದು. ಹಾಗೆಯೆ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಮಾಡಬೇಕು ಅಂತ ಅಂದುಕೊಂಡವರಿಗೆ ಇಲ್ಲಿದೆ ಉತ್ತಮ ಬ್ಯಾಂಕ್ ಗಳ ಪಟ್ಟಿ. ಈ ಬ್ಯಾಂಕ್ ಗಳು ಕಡಿಮೆ ಬಡ್ಡಿದರದಲ್ಲಿ ನಿಮಗೆ ಸಾಲ ಸೌಲಭ್ಯವನ್ನು ಒದಗಿಸಲಿದೆ.

Image Credit: Samayam

HDFC Bank Personal Loan Interest Rate

HDFC ಬ್ಯಾಂಕ್ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ವೈಯಕ್ತಿಕ ಸಾಲದ ಮೇಲೆ ವಿಧಿಸುವ ಬಡ್ಡಿಯು 10.5 ರಿಂದ 24 ಪ್ರತಿಶತದವರೆಗೆ ಇರುತ್ತದೆ. ಬ್ಯಾಂಕ್ 4,999 ರೂ.ಗಳ ನಿಗದಿತ ಪ್ರೊಸೆಸಿಂಗ್ ಚಾರ್ಜ್ ವಿಧಿಸಲಾಗುತ್ತದೆ.

Image Credit: Bloomberg

Kotak Mahindra Bank Personal Loan Interest Rate

ಕೊಟಕ್ ಮಹೀಂದ್ರಾ ಬ್ಯಾಂಕ್ ವೈಯಕ್ತಿಕ ಸಾಲದ ಮೇಲೆ ವಾರ್ಷಿಕ ಕನಿಷ್ಠ 10.99 ಶೇಕಡಾ ಬಡ್ಡಿಯನ್ನು ವಿಧಿಸುತ್ತದೆ. ಆದರೆ ಸಾಲದ ಶುಲ್ಕದ ಮೇಲೆ ಪ್ರೊಸೆಸಿಂಗ್ ಚಾರ್ಜ್ ಮತ್ತು ತೆರಿಗೆಯನ್ನು ಸೇರಿಸಿದ ನಂತರ, ಅದು ಸುಮಾರು 3 ಪ್ರತಿಶತದಷ್ಟು ಹೆಚ್ಚಾಗುತ್ತದೆ.

Image Credit: tv9telugu

SBI Personal Loan Interest Rate

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸರಕಾರಿ ಇಲಾಖೆ ನೌಕರರಿಗೆ ಶೇ.11.30ರಿಂದ 13.80ರಷ್ಟು ಬಡ್ಡಿ ವಿಧಿಸಲಾಗುತ್ತದೆ. ರಕ್ಷಣಾ ವಲಯದ ಉದ್ಯೋಗಿಗಳಿಗೆ ಇದು ವಾರ್ಷಿಕ 11.15 ರಿಂದ 12.65 ಪ್ರತಿಶತ ಬಡ್ಡಿ ವಿಧಿಸುತ್ತದೆ. ಕಾರ್ಪೊರೇಟ್ ಅರ್ಜಿದಾರರಿಂದ 12.30 ರಿಂದ 14.30 ಶೇಕಡಾ ಬಡ್ಡಿಯನ್ನು ವಿಧಿಸುತ್ತದೆ.

Image Credit: India TV News

ICICI Bank Personal Loan Interest Rate
ದೇಶದ ಎರಡನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ICICI ಬ್ಯಾಂಕ್ ವೈಯಕ್ತಿಕ ಸಾಲಗಳ ಮೇಲೆ ಶೇಕಡಾ 10.65 ರಿಂದ 16 ರಷ್ಟು ವಾರ್ಷಿಕ ಬಡ್ಡಿಯನ್ನು ವಿಧಿಸುತ್ತದೆ. ಬ್ಯಾಂಕ್ ಪ್ರೊಸೆಸಿಂಗ್ ಚಾರ್ಜ್ ಆಗಿ 2.50 ಪ್ರತಿಶತ ತೆರಿಗೆಯನ್ನು ವಿಧಿಸುತ್ತದೆ.

Image Credit: Credithelper

ಬ್ಯಾಂಕ್ ಆಫ್ ಬರೋಡಾ ಬಡ್ಡಿದರ ವಿಧಿಸುವ ಬಗ್ಗೆ ಮಾಹಿತಿ

ಬ್ಯಾಂಕ್ ಆಫ್ ಬರೋಡಾ ಸರ್ಕಾರಿ ನೌಕರರಿಗೆ ವಾರ್ಷಿಕ 12.40 ರಿಂದ 16.75 ರಷ್ಟು ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಇದಲ್ಲದೇ ಖಾಸಗಿ ವಲಯದ ಉದ್ಯೋಗಿಗಳು ವಾರ್ಷಿಕ ಶೇ.15.15 ರಿಂದ 18.75 ಬಡ್ಡಿ ದರದಲ್ಲಿ ಸಾಲ ಪಡೆಯಬೇಕಾಗುತ್ತದೆ. ಕ್ರೆಡಿಟ್ ಸ್ಕೋರ್‌ಗೆ ಅನುಗುಣವಾಗಿ PNB ಸಾಲಗಾರರಿಗೆ ವಾರ್ಷಿಕ 13.75 ರಿಂದ 17.25 ರಷ್ಟು ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಸರ್ಕಾರಿ ನೌಕರರಿಗೆ 12.75 ರಿಂದ 15.25 ರಷ್ಟು ಬಡ್ಡಿದರಗಳನ್ನು ವಿಧಿಸಲಾಗುತ್ತದೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in