Personal Loan: ಅತಿ ಕಡಿಮೆ ಬಡ್ಡಿದರಕ್ಕೆ ಲೋನ್ ಕೊಡುತ್ತಿವೆ ಈ ಬ್ಯಾಂಕುಗಳು.

ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಬ್ಯಾಂಕುಗಳು.

Bank Personal Loan: ಜನಸಾಮಾನ್ಯರು ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ವೈಯಕ್ತಿಕ ಸಾಲಗಳನ್ನು (Personal Loan)  ಪಡೆಯುತ್ತಾರೆ. ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರವು ಹೆಚ್ಚಿರುತ್ತದೆ. ವಿವಿಧ ರೀತಿಯ ಉದ್ದೇಶಗಳ ಈಡೇರಿಕೆಗೆ ಜನರು ವೈಯಕ್ತಿಕ ಸಾಲವನ್ನು ಪಡೆಯುತ್ತಾರೆ.

ಅನೇಕ ಬ್ಯಾಂಕ್ ಗಳು ಹಾಗೂ ಹಣಕಾಸು ಕಂಪನಿಗಳು ಗ್ರಾಹಕರಿಗೆ ಸಾಲವನ್ನು ನೀಡುತ್ತದೆ. ಇನ್ನು ಇದೀಗ ಕಡಿಮೆ ಬಡ್ಡಿದರದಲ್ಲಿ ಕೆಲವು ಬ್ಯಾಂಕ್ ಗಳು ಸಾಲವನ್ನು ನೀಡುತ್ತದೆ. ಅತಿ ಕಡಿಮೆ ಬಡ್ಡಿದರದಲ್ಲಿ ಯಾವ ಯಾವ ಬ್ಯಾಂಕ್ ಗಳು ಸಾಲ ನೀಡುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Bank Personal Loan
Image Credit: Bank Personal Loan

ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬಾಂಕ್ ಗಳು
*ಬ್ಯಾಂಕ್ ಆಫ್ ಮಹಾರಾಷ್ಟ: ಬ್ಯಾಂಕ್ ಆಫ್ ಮಹಾರಾಷ್ಟ 20 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡಲಿದೆ. ಈ ಬ್ಯಾಂಕ್ ನ ಬಡ್ಡಿದರವು 10 ಶೇಕಡಾದಿಂದ ಪ್ರಾರಂಭವಾಗುತ್ತದೆ. 84 ತಿಂಗಳುಗಳ ಗರಿಷ್ಠ ಸಾಲದ ಅವಧಿಯನ್ನು ಹೊಂದಿದೆ.

*ಬ್ಯಾಂಕ್ ಆಫ್ ಇಂಡಿಯಾ: ಬ್ಯಾಂಕ್ ಆಫ್ ಇಂಡಿಯಾ 20 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡಲಿದೆ. ಈ ಬ್ಯಾಂಕ್ ನ ಬಡ್ಡಿದರವು 10 .25 ಶೇಕಡಾದಿಂದ ಪ್ರಾರಂಭವಾಗುತ್ತದೆ. 84 ತಿಂಗಳುಗಳ ಗರಿಷ್ಠ ಸಾಲದ ಅವಧಿಯನ್ನು ಹೊಂದಿದೆ.

*ಇಂಡಸ್ ಇಂಡ್ ಬ್ಯಾಂಕ್: ಈ ಬ್ಯಾಂಕ್ ನಿಂದ 50 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡಲಿದೆ. ಇದರಲ್ಲಿ ಬಡ್ಡಿದರಗಳು ವಿಭಿನ್ನವಾಗಲಿರಲಿದೆ. 10.25 ಮತ್ತು 27 ರ ನಡುವೆ ಬಡ್ಡಿದರವನ್ನು ನೀಡಲಾಗುತ್ತದೆ. ಸಾಲದ ಅವಧಿಯು 1 ರಿಂದ 6 ವರ್ಷಗಳವರೆಗೆ ಇರುತ್ತದೆ.

Join Nadunudi News WhatsApp Group

low intrest rate banks
Image Credit: timesofindia

*ಪಂಜಾಬ್ ನ್ಯಾಷನಲ್ ಬ್ಯಾಂಕ್: ಈ ಬ್ಯಾಂಕ್ ನಿಂದ 10 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡಲಿದೆ. ಇದರಲ್ಲಿ 10.4 ಮತ್ತು 16.95 ರ ನಡುವೆ ಬಡ್ಡಿದರವನ್ನು ನೀಡಲಾಗುತ್ತದೆ. ಸಾಲದ ಅವಧಿಯು 60 ತಿಂಗಳುಗಳಾಗಿವೆ.

*ಆಕ್ಸಿಸ್ ಬ್ಯಾಂಕ್: ಆಕ್ಸಿಸ್ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲಗಳು ಕಡಿಮೆ ಬಡ್ಡಿದರದಲ್ಲಿ ಸಿಗಲಿದೆ. ಆಕ್ಸಿಸ್ ಬ್ಯಾಂಕ್ ನಲ್ಲಿ ಶೇ. 10 ಬಡ್ಡಿದರವನ್ನು ನೀಡಲಾಗುತ್ತದೆ. ಸಾಲದ ಅವಧಿಯು 60 ತಿಂಗಳುಗಳಾಗಿವೆ.

Join Nadunudi News WhatsApp Group