Bank Loan Without Salary Slip: ಮನೆ ಕಟ್ಟಲು, ಮದುವೆ ಮಾಡಲು ಹಾಗೆ ಇನ್ನಿತರ ಕೆಲಸಗಳಿಗೆ ಸಾಲ ಪಡೆದುಕೊಳ್ಳುವುದು ಸಾಮಾನ್ಯವಾಗಿದೆ. ಇದೀಗ ನೀವು ಉದ್ಯೋಗಿ, ಚಿಕ್ಕ ವ್ಯಾಪಾರೀ, ಹೀಗೆ ಇನ್ನಿತರ ವಿಧಾನದ ಮೂಲಕ ಹಣ ಗಳಿಕೆ ಮಾಡುತ್ತಿದ್ದು, ನಿಮಗೆ ತಕ್ಷಣಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಬಂದಾಗ ವಯಕ್ತಿಕ ಸಾಲ ಪಡೆದುಕೊಳ್ಳಬೇಕಾಗುತ್ತದೆ. ಆದರೆ ನಿಮ್ಮ ಬಳಿ ಸಾಲಿ ಸ್ಲಿಪ್ ಇಲ್ಲದಿದ್ದರೆ ಲೋನ್ ಸಿಗುವುದಿಲ್ಲ ಎಂದು ನೀವು ಸುಮ್ಮನಿದ್ದರೆ ಅದು ನಿಮ್ಮ ಮೂರ್ಖತನವಾಗುತ್ತದೆ. ಇದೀಗ ಸ್ಯಾಲರಿ ಸ್ಲಿಪ್ ಇಲ್ಲದೆ ಕೂಡ 5 ಲಕ್ಷದಿಂದ 50 ಲಕ್ಷದ ವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಕೆಲವು ಬ್ಯಾಂಕುಗಳು ಸಂಬಳದ ಸ್ಲಿಪ್ ಇಲ್ಲದೆ ಸಾಲ ನೀಡುತ್ತದೆ. ಹಾಗಾದರೆ ಸಂಬಳದ ಸ್ಲಿಪ್ ಇಲ್ಲದೆ ಸಾಲ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ಯಾಲರಿ ಸ್ಲಿಪ್ ಇಲ್ಲದೆ ಸಾಲ ನೀಡುವ ಬ್ಯಾಂಕುಗಳು
* Bajaj Finserv 5 ನಿಮಿಷದಲ್ಲಿ 55 ಲಕ್ಷ ಸಾಲವನ್ನು 11% ಬಡ್ಡಿಗೆ ನೀಡುತ್ತದೆ. ITR ದಾಖಲೆ ಮಾತ್ರ ಬೇಕಾಗುತ್ತದೆ.
* Moneyview 24 ಗಂಟೆಯ ಒಳಗೆ 10 ಲಕ್ಷ ಸಾಲವನ್ನು 13% ಬಡ್ಡಿಗೆ ನೀಡುತ್ತದೆ. ನಿಮ್ಮ ಸಿಬಿಲ್ ಸ್ಕೋರ್ 650 ಅಥವಾ ಅದಕ್ಕಿಂತ ಹೆಚ್ಚಿರಬೇಕು.
* Aditya Birla Capital 48 ಗಂಟೆಗಳಲ್ಲಿ 50 ಲಕ್ಷ ಸಾಲವನ್ನು 11.5% ಬಡ್ಡಿಗೆ ನೀಡುತ್ತದೆ. 1 ವರ್ಷದ ವ್ಯಾಪಾರ ವಿಂಟೇಜ್ (ಅಂದರೆ ಒಂದು ವರ್ಷದವರೆಗೆ ಕಾರ್ಯನಿರ್ವಹಿಸುವ ವ್ಯವಹಾರವನ್ನು ಸೂಚಿಸುತ್ತದೆ, ಸಾಲಗಳಿಗೆ ಪ್ರಮುಖ ದಾಖಲೆ ಆಗಿದೆ) ನೀಡಬೇಕಾಗುತ್ತದೆ.
* Tata Capital 72 ಗಂಟೆಗಳಲ್ಲಿ 35 ಲಕ್ಷ ಸಾಲವನ್ನು 10.99% ಬಡ್ಡಿಗೆ ನೀಡುತ್ತದೆ. ಸ್ವಯಂ ಉದ್ಯೋಗಿಗಳಿಗೆ ಸ್ಪೆಷಲ್ ಸ್ಕೀಮ್ ಆಗಿದೆ.
* IDFC First Bank 9 ದಿನಗಳಲ್ಲಿ 40 ಲಕ್ಷ ಸಾಲವನ್ನು 10.99% ಬಡ್ಡಿಗೆ ನೀಡುತ್ತದೆ. ಪ್ರೀ Aprooved ಆಫರ್ ನಲ್ಲಿ ಬರುತ್ತದೆ.
* Axis Bank 48 ಗಂಟೆಗಳಲ್ಲಿ 50 ಲಕ್ಷ ಸಾಲವನ್ನು 11.25% ಬಡ್ಡಿಗೆ ನೀಡಲಾಗುತ್ತದೆ. GST ರಿಟರ್ನ್ ಬೇಕಾಗುತ್ತದೆ.
* IIFL Finance 30 ನಿಮಿಷಗಳಲ್ಲಿ 25 ಲಕ್ಷ ಸಾಲವನ್ನು 12% ಬಡ್ಡಿಗೆ ನೀಡುತ್ತದೆ. ಯಾವುದೇ ಗ್ಯಾರಂಟರ್ ನ ಅಗತ್ಯ ಇಲ್ಲ. ನಿಮ್ಮ ಸಿಬಿಲ್ ಮತ್ತು ವ್ಯವಹಾರದ ಮಾಹಿತಿ ನೀಡಿ ಸಾಲ ಪಡೆದುಕೊಳ್ಳಬಹುದು.
* Lendingkart 72 ಗಂಟೆಗಳಲ್ಲಿ 50 ಲಕ್ಷ ಸಾಲವನ್ನು 15% ಬಡ್ಡಿಗೆ ನೀಡಲಾಗುತ್ತದೆ. ಬಿಸಿನೆಸ್ ಲೋನ್ ಬೇಕಾದರೆ ಬಿಸಿನೆಸ್ ಗಳಿಗೆ ಸಂಬಂಧಪಟ್ಟ ಮಾಹಿತಿ ನೀಡಬೇಕು ಮತ್ತು ITR ದಾಖಲೆ ಕೊಡುವುದು ಕಡ್ಡಾಯ
* KreditBee 10 ನಿಮಿಷಗಳಲ್ಲಿ 4 ಲಕ್ಷ ಸಾಲವನ್ನು 15% ಬಡ್ಡಿಗೆ ನೀಡಲಾಗುತ್ತದೆ. 600 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಇರಬೇಕು.
* CASHe 10 ನಿಮಿಷಗಳಲ್ಲಿ 4 ಲಕ್ಷ ಸಾಲವನ್ನು ವಾರ್ಷಿಕವಾಗಿ 27% ಬಡ್ಡಿಗೆ ನೀಡಲಾಗುತ್ತದೆ. ಸೋಶಿಯಲ್ ಮೀಡಿಯಾ ಪ್ರೊಫೈಲ್ ಸ್ಕೋರಿಂಗ್.
ಸಾಲಕ್ಕೆ ಕೊಡಬೇಕಾದ ದಾಖಲೆಗಳು
* ಕಳೆದ 2 ವರ್ಷಗಳ ITR
* 6 ರಿಂದ 12 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
* GST ರಿಟರ್ನ್ಸ್
* ಉದ್ಯಮ ನೋಂದಣಿ ಪತ್ರ
* ರೆಂಟಲ್ ಒಪ್ಪಂದದ ಜೊತೆಗೆ ಬ್ಯಾಂಕ್ ಕ್ರೆಡಿಟ್
* ಷೇರು ಮಾರುಕಟ್ಟೆ ಸ್ಟೇಟ್ಮೆಂಟ್
* ಪ್ರಾಪರ್ಟಿ ಡಾಕ್ಯುಮೆಂಟ್ಸ್
ಲೋನ್ ತಿರಸ್ಕಾರವಾದರೆ ಏನು ಮಾಡಬೇಕು?
* 30 ರಿಂದ 45 ದಿನ ಕಾದು, ನಂತರ ಅರ್ಜಿ ಸಲ್ಲಿಸಿ
* 1 ರಿಂದ 2 ಲಕ್ಷಕ್ಕೆ ಅರ್ಜಿ ಸಲ್ಲಿಸಿ
* ಜಂಟಿಯಾಗಿ ಸಾಲ ತೆಗೆಯಿರಿ (ಸಂಗತಿ, ಪತ್ನಿ, ಪೋಷಕರು)
* ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಿ
* ಖರ್ಚು 35% ಕಡಿಮೆ ಮಾಡಿ
* ಪ್ರೊಫೆಷನಲ್ CA ಯಿಂದ ITR ಫೈಲ್ ಮಾಡಿಸಿಕೊಳ್ಳಿ.
ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
* ಫೇಕ್ ITR ಅಥವಾ ಬ್ಯಾಂಕ್ ಸ್ಟೇಟ್ಮೆಂಟ್ ಕೊಡಬೇಡಿ, ಇದರಿಂದ 7 ವರ್ಷ ಜೈಲು ಮತ್ತು ಪೈನ್ ಕಟ್ಟಬೇಕಾಗುತ್ತದೆ.
* ಎಜೇಂಟ್ ಮೂಲಕ High Interest Loan ತೆಗೆದುಕೊಳ್ಳಬೇಡಿ
* ಒಂದೇ ಸಮಯದಲ್ಲಿ ಎಲ್ಲ ಬ್ಯಾಂಕ್ ಗೆ ಅರ್ಜಿ ಸಲ್ಲಿಸಬೇಡಿ, ಇದರಿಂದ ಸಿಬಿಲ್ ಸ್ಕೋರ್ ಕಡಿಮೆ ಆಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

